LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಅಭಿನವ ಮಂತ್ರಾಲಯ ಅಥಣಿಯಲ್ಲಿ   ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ  

 

ಅಥಣಿ : ಅಭಿನವ ಮಂತ್ರಾಲಯ ಎಂದು ಕರೆಯಲ್ಪಡುವ ಅಥಣಿ ಪಟ್ಟಣದ  ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ  ಶ್ರೀ ರಾಘವೇಂದ್ರ ಸ್ವಾಮಿಗಳ 35ನೇ ಆರಾಧನಾ ಮಹೋತ್ಸವ ದಿ. 29 ರಿಂದ 31 ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ.
 ಉತ್ಸವದಲ್ಲಿ ಪ್ರತಿದಿನ  ಮುಂಜಾನೆ 4 ಗಂಟೆಯಿಂದ  8 ಗಂಟೆಯವರೆಗೆ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ, ಅಭಿಷೇಕ ಮತ್ತು ವಿಶೇಷ ಪೂಜೆ ಜರುಗಲಿದೆ. 9 ರಿಂದ 12 ಗಂಟೆಯವರೆಗೆ  ಪುರಾಣ ಹಾಗೂ ರಾಯರ ಸ್ತೋತ್ರ ಪಾರಾಯಣ ಜರುಗುವುದು. 12 ಗಂಟೆಯಿಂದ 3 ಗಂಟೆವರೆಗೆ ಪ್ರಸಾದ ವಿತರಣೆ, ಸಾಯಂಕಾಲ 5 ರಿಂದ 7 ಗಂಟೆವರೆಗೆ  ಭಜನೆ, ಪಲ್ಲಕ್ಕಿ ಸೇವೆ, ಮಂತ್ರ ಪುಷ್ಪ  ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗುತ್ತವೆ. 
 ದಿ. 29ರಂದು  ಸಾಯಂಕಾಲ 6 ಗಂಟೆಗೆ  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿತರಣೆ ಹಾಗೂ ಧಾರವಾಡದ ಉದಯ್ ದೇಶಪಾಂಡೆ ಅವರಿಂದ  ಸಂಗೀತ ಕಾರ್ಯಕ್ರಮ ಜರುಗಲಿದೆ. 
ದಿ. 30 ರಂದು ಸಾಯಂಕಾಲ 6 ಗಂಟೆಗೆ ನ್ಯಾಯವಾದಿ ಕೆ. ಎಲ್ ಕುಂದರಗಿ ವಿರಚಿತ ಶ್ರೀ ರಾಘವೇಂದ್ರ ವಿಜಯ ಭಕ್ತಿಪರ ನಾಟಕ ಪ್ರದರ್ಶನವಾಗಲಿದೆ. 
ದಿ. 31 ರಂದು ಮುಂಜಾನೆ 11:00ಗೆ ಪವಮಾನ ಹೋಮ  ಹಾಗೂ ವಿವಿಧ ವಾದ್ಯ ಮೇಳಗಳೊಂದಿಗೆ ಭವ್ಯ ರಥೋತ್ಸವ ಜರುಗಲಿದೆ. ಸಾಯಂಕಾಲ 6 ಗಂಟೆಗೆ  ಬೆಂಗಳೂರಿನ ವಿದುಷಿ ದಿವ್ಯಾ ಗಿರಿಧರ  ಅವರಿಂದ ದಾಸವಾಣಿ ಕಾರ್ಯಕ್ರಮ ಜರುಗುವುದು. ಅಥಣಿ ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಈ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದು  ಆರಾಧನಾ ಉತ್ಸವ ಕಮಿಟಿಯ ಅಧ್ಯಕ್ಷ ಶ್ರೀನಿವಾಸಾಚಾರ್ಯ ಜೋಶಿ, ಕಾರ್ಯದರ್ಶಿ ಎಂ ಬಿ ಹೂಗಾರ  ಪ್ರಕಟಣೆಗೆ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST