LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಚಿಕ್ಕಮಣೂರದ ಭೀಮ ನಗರ ಸರಕಾರಿ ಶಾಲೆಯ ದುಸ್ಥಿತಿ

ಇಂಡಿ : ತಾಲೂಕಿನ ಚಿಕ್ಕಮಣೂರದ ಭೀಮ ನಗರ ಸರಕಾರಿ ಶಾಲೆಯ ಸ್ಥಿತಿ ದುಸ್ಥಿತಿಯಲ್ಲಿದೆ. ಇಲ್ಲಿ ಒಂದರಿಂದ ಏಳನೆಯ ತರಗತಿಯ ವರೆಗೆ ವರ್ಗಗಳು ಇವೆ. ಈ ಶಾಲೆಯಲ್ಲಿ ೧೦೫ ಮಕ್ಕಳು ಓದುತ್ತಿದ್ದಾರೆ.
ಇಲ್ಲಿ ಆರು ಕೊಠಡಿಗಳಿವೆ. ಅದರಲ್ಲಿ ಒಂದು ಮಾತ್ರ ಒಳ್ಳೆಯ ಸ್ಥಿತಿಯಲ್ಲಿದ್ದು ಎರಡು ಕೋಣೆಗಳು ಪೂರ್ಣವಾಗಿ ಬಿದ್ದಿವೆ. ಮತ್ತು ಎರಡು ಕೋಣೆಗಳು ಮಳೆ ಬಂದರೆ ಸಂಪೂರ್ಣ ಸೋರುತ್ತಿವೆ. ಒಂದು ಮೇಲ್ಛಾವಣೆಯಿಂದ ಸಿಮೆಂಟ ಉದುರಿ ಬಿಳುತ್ತಿದೆ. ಹೀಗಾಗಿ ಒಂದೇ ಕೋಣೆಯಲ್ಲಿ ಮಾತ್ರ ಎಲ್ಲ ವಿದ್ಯಾರ್ಥಿಗಳು ಓದುವ ಅನಿವಾರ್ಯತೆ ಎದುರಾಗಿದೆ.
ಒಂದು ಕೋಣೆಯಲ್ಲಿ ತರಗತಿಗಳು ತೆಗೆದುಕೊಂಡು ಎರಡು ತರಗತಿಗಳಿಗೆ ಕೋಣೆಗೆ ಹತ್ತಿದ ಕಂಪೌಂಡದಲ್ಲಿ ಮತ್ತು ಎರಡು ತರಗತಿಗಳಿಗೆ ಗಿಡದ ಕೆಳಗೆ ತರಗತಿ ನಡೆಸುತ್ತಿದ್ದಾರೆ.
ಇಲ್ಲಿ ಮಳೆಯಾದರೆ ಮೊದಲು ಶಿಕ್ಷಕರು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸುತ್ತಾರೆ.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಗಡ್ಡಿಲಿಂಗ ಪೂಜಾರಿ ಶಾಲೆಗೆ ಕೋಣೆ ಕಟ್ಟಿಸಿ ಕೊಡುವಂತೆ ಗ್ರಾ.ಪಂ ಅಧ್ಯಕ್ಷರಿಗೆ, ಗ್ರಾ.ಪಂ ಪಿಡಿಒ, ತಾಪಂ ಇಒ ಮತ್ತು ಶಿಕ್ಷಣ ಇಲಾಖೆ ಅಧಿಕಾರಿ ಹಲವಾರು ಬಾರಿ ಮನವಿ ಮಾಡಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ.
ಕೋಟ್
ಈ ಶಾಲೆಗೆ ಕೋಣೆಗಳನ್ನು ಕಟ್ಟಿಸಿ ಕೋಡಬೇಕು. ಇಲ್ಲದಿದ್ದರೆ ಎಲ್ಲ ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಪಾಲಕರ ಜೊತೆ ಗ್ರಾಮಸ್ಥರ ಸಹಕಾರದೊಂದಿಗೆ ಶಾಲೆಯ ಎದುರು ಇಲ್ಲವೆ ಶಿಕ್ಷಣ ಇಲಾಖೆ ಎದುರು ಧರಣಿ ಸತ್ಯಾಗ್ರಹ ಮಾಡಲಾಗುವದು.
ಗಡ್ಡಿಲಿಂಗ ಪೂಜಾರಿ ಎಸ್.ಡಿ.ಎಂ.ಸಿ ಅಧ್ಯಕ್ಷರು ಸರಕಾರಿ ಪ್ರೌಢಶಾಲೆ ಭೀಮ ನಗರ ಚಿಕ್ಕಮಣೂರ
ಕೋಟ್
ಈ ಹಿಂದಿನ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಹಲವಾರು ಬಾರಿ ಲಿಖಿತ ಮತ್ತು ಮೌಖಿಕ ಮನವಿ ಮಾಡಿದ್ದೇವೆ. ಅವರು ಸೌಜನ್ಯಕ್ಕೂ ಶಾಲೆಯ ಪರಿಸ್ಥಿಯ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆಯದೇ ಇರುವದು ಅತ್ಯಂತ ದುರ್ದೈವ.
ಬಾದಶಹಾ ಶೇಖ ಎಸ್.ಡಿ.ಎಂ.ಸಿ ಸದಸ್ಯರು ಸರಕಾರಿ ಪ್ರೌಢಶಾಲೆ ಭೀಮ ನಗರ ಚಿಕ್ಕಮಣೂರ
ಫೋಟೊ ಕ್ಯಾಫ್ಸನ್ ೧೭ ಇಂಡಿ ೦೧ : ಇಂಡಿ ತಾಲೂಕಿನ ಭೀಮ ನಗರ ಶಾಲೆಯ ಸ್ಥಿತಿ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್