LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಅಮ್ಮನ ಸನ್ನಿದಿಯಲ್ಲಿ ಬಿಲ್ಲಾರಿ ಮುಹೂರ್ತ

      ಬಹುತೇಕ ಹೊಸಬರೇ ಸೇರಿ ಸಿದ್ದಪಡಿಸುತ್ತಿರುವ ’ಬಿಲ್ಲಾರಿ’ ಚಿತ್ರದ ಮುಹೂರ್ತ ಸಮಾರಂಭವು ಶ್ರೀ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು.


     ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ನಿರ್ಮಾಪಕ ತಾಯಿ ಲಕ್ಷೀಧನಪಾಲ್ ಕ್ಯಾಮಾರ ಆನ್ ಮಾಡಿದರು. ಎವಿಕೆ ಪ್ರೊಡಕ್ಷನ್ ಅಡಿಯಲ್ಲಿ ರಿಶ್ವಿಕ್‌ಶೆಟ್ಟಿ ಕತೆ ಬರೆದು ನಿರ್ಮಾಣ ಮಾಡುವುದರ ಜತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಗೋಕಾಕ್ ಮೂಲದ ಪಿ.ಎಲ್.ಭರಮಣ್ಣ ಚಿತ್ರಕತೆ-ನಿರ್ದೆಶನದ ಜವಬ್ದಾರಿಯನ್ನು ಹೊತ್ತುಕೊಳ್ಳುತ್ತಿದ್ದಾರೆ. ಶಿಲ್ಪಗೌಡ ಸಹ ನಿರ್ಮಾಪಕಿಯಾಗಿದ್ದಾರೆ.


      ನಿರ್ದೇಶಕ ಭರಮಣ್ಣ ಹೇಳುವಂತೆ "ಇದೊಂದು ಕಾಲ್ಪನಿಕ ಅಂಶಗಳನ್ನು ಒಳಗೊಂಡಿದೆ. ನಿಘಂಟಿನಲ್ಲಿ ಬಿಲ್ಲಾರಿಗೆ ಬೇರೆ ಅರ್ಥ ಇರಲಿದೆ. ಆದರೆ ನಮ್ಮ ಸಿನಿಮಾದಲ್ಲಿ ಪಾತ್ರದ ಹೆಸರು ಶೀರ್ಷಿಕೆಯಾಗಿದೆ. ಬಿಲ್ಸ್ ಬುಡಕಟ್ಟು ಜನಾಂಗದ ರಾಜನ ಐತಿಹಾಸಿಕ ಸೆಸ್ಪೆನ್ಸ್, ಥ್ರಿಲ್ಲರ್ ಕಥೆಯಾಗಿದೆ. ಭಾರತದಲ್ಲಿ ಇವರುಗಳು ಹನ್ನೊಂದು ಲಕ್ಷ ಜನಸಂಖ್ಯೆ ಇರಲಿದ್ದು, ಹೆಚ್ಚಿನ ಭಾಗ ಗುಜರಾತ್, ರಾಜಸ್ತಾನದಲ್ಲಿ ವಾಸವಾಗಿದ್ದಾರೆ. ಬೆಂಗಳೂರು, ಅರಸಿಕೆರೆ, ಹಾಸನ, ಅಣ್ಣಿಗೇರಿ, ಗಜೇಂದ್ರಗಡ, ಯಾಣ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ. ಕ್ಲೈಮಾಕ್ಸ್‌ದಲ್ಲಿ ಸಿದ್ದಾಂತದೊಂದಿಗೆ ಭಾಗ-2 ಬರಲಿದೆ ಎಂಬುದಾಗಿ ತೋರಿಸಲಾಗುವುದು. ಇನ್ನು ಹೆಚ್ಚಿನ ವಿವರ ನೀಡಿದರೆ, ಸಿನಿಮಾದ ಹೂರಣ ಬಿಟ್ಟುಕೊಟ್ಟಂತೆ ಆಗುತ್ತದೆ" ಎಂದು ಕುತೂಹಲ ಕಾಯ್ದಿರಿಸಿದರು.


       ರಾಜ ಮತ್ತು ಅಧಿಕಾರಿಯಾಗಿ ರಿಶ್ವಿಕ್‌ಶೆಟ್ಟಿ ನಾಯಕ. ಭಟ್ಟರ ಮಗಳಾಗಿ ಮೈಸೂರು ಕಡೆಯವರಾದ ಚೈತ್ರಾಲೋಕನಾಥ್ ನಾಯಕಿ. ಉಳಿದಂತೆ ನಾಗೇಂದ್ರಅರಸ್, ಪ್ರಕಾಶ್ ತುಮ್ಮಿನಾಡು, ಎಂ ಕೆ ಮಠ, ಕೆಂಪೆಗೌಡ, ಬಲರಾಮ್ ಪಂಚಾಲ್, ಮಜಾಭಾರತದ ಚಂದ್ರಪ್ರಭಾ, ’ಕಾಂತಾರ’ ಖ್ಯಾತಿಯ ನವೀನ್ ಬೊಂದೆಲ್ ಸಂಭಾಷಣೆ ಹಾಗೂ ನಟನೆ. ಇವರೊಂದಿಗೆ ಹಿರಿಯ ಕಲಾವಿದರು ನಟಿಸುತ್ತಿದ್ದಾರೆ.


      ನಾಲ್ಕು ಹಾಡುಗಳ ಪೈಕಿ, ಒಂದು ಗೀತೆಗೆ ಪ್ರಮೋದ್ ಮರವಂತೆ  ಪ್ರೇಮಗೀತೆಗೆ ಪದಗಳನ್ನು ಪೋಣಿಸಿದ್ದಾರೆ. ಸಂಗೀತ ಸುಭಾಷ್, ಛಾಯಾಗ್ರಹಣ ಅಗಸ್ತ್ಯ.ಯು.ಗೌಡ, ಕಲೆ ತಿರುಪತಿ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್