LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ಜನ ಗಣತಿ ಜೊತೆಗೆ ಜಾತಿ ಗಣತಿ; ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್​ ದಿನಾಂಕವನ್ನು ಪ್ರಕಟಿಸಲು ಆಗ್ರಹ


ನವದೆಹಲಿ: ಜನ ಗಣತಿ ಜೊತೆಗೆ ಜಾತಿ ಗಣತಿ ನಡೆಸುವುದಾಗಿ ಪ್ರಕಟಿಸಿರುವ ಕೇಂದ್ರ ಸರ್ಕಾದ ನಿರ್ಧಾರವನ್ನು ಸ್ವಾಗತಿಸಿರುವ ಕಾಂಗ್ರೆಸ್​, ಗಣತಿ ನಡೆಸುವ ದಿನಾಂಕವನ್ನು ಪ್ರಕಟಿಸಲು ಆಗ್ರಹಿಸಿದೆ.


ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿರುವ ಪಕ್ಷವು, "ಡೆಡ್​​ ಲೈನ್​ ನೀಡದೆ ಹೆಡ್​​ ಲೈನ್​​" ನೀಡುವುದರಲ್ಲಿ ನಿಪುಣರು. ಜಾತಿ ಮತ್ತು ಜನ ಗಣತಿ ಯಾವಾಗ ನಡೆಯುತ್ತದೆ ಎಂಬುದರ ದಿನಾಂಕವನ್ನು ಸರ್ಕಾರ ಪ್ರಕಟಿಸಬೇಕು ಎಂದು ಒತ್ತಾಯಿಸಿದೆ.


"ಸರ್ಕಾರದ ಉದ್ದೇಶದ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಜನಗಣತಿಯನ್ನು ಸಾಧ್ಯವಾದಷ್ಟು ಬೇಗ ಮಾಡಬೇಕು. ಪ್ರಧಾನಿ ಮೋದಿ ಅವರು ಬರಿಯ ಹೆಡ್​ ಲೈನ್​ ನೀಡುತ್ತಾರೆ. ಡೆಡ್​​ ಲೈನ್​ ನೀಡುವುದಿಲ್ಲ. ಮೀಸಲಾತಿಗೆ ಇರುವ ಶೇಕಡಾ 50ರಷ್ಟು ಮಿತಿಯನ್ನು ತೆಗೆದುಹಾಕಬೇಕು. ಇದನ್ನು ಮಾಡಲು ಕೇಂದ್ರಕ್ಕೆ ಏನು ಅಡ್ಡಿ ಇದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಪ್ರಶ್ನಿಸಿದ್ದಾರೆ.


ದೆಹಲಿಯ ಕಾಂಗ್ರೆಸ್​ ಕೇಂದ್ರ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಂವಿಧಾನಕ್ಕೆ ತಿದ್ದುಪಡಿ ತಂದು, ಮೀಸಲಾತಿ ಮೇಲಿನ ಶೇ.50ರಷ್ಟು ಮಿತಿಯನ್ನು ತೆಗೆದುಹಾಕಬೇಕು. ಆಗ ಮಾತ್ರ ಜಾತಿ ಜನಗಣತಿಗೆ ಅರ್ಥ ಬರಲಿದೆ" ಎಂದರು.











Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST