LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಲಾಲ್​ಬಾಗ್​ನ ಗಾಜಿನಮನೆಯಲ್ಲಿ ಫ್ಲವರ್​ಶೋಗೆ ಸಿಎಂ ಸಿದ್ದರಾಮಯ್ಯ ಚಾಲನೆ

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಇಂದು ಲಾಲ್​ಬಾಗ್​ನ ಗಾಜಿನಮನೆಯಲ್ಲಿ ಫ್ಲವರ್​ಶೋಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಮೊಮ್ಮಗ ಯಶವಂತ್ ಅಂಬೇಡ್ಕರ್ ಅವರು ಕೂಡ ಭಾಗಿಯಾಗಿದ್ದಾರೆ.ಈ ವರ್ಷ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರ ಕಾನ್ಸೆಪ್ಟ್ ನಲ್ಲಿ ಫ್ಲವರ್ ಶೋ ಮೂಡಿಬಂದಿದ್ದು, ಆಗಸ್ಟ್ 19ರವರೆಗೂ ನಲ್ಲಿ ಫ್ಲವರ್ ಶೋ ಇರಲಿದೆ. ಸಂಸತ್, ಭೀಮ ಸ್ಮರಾಕ, ಅಂಬೇಡ್ಕರ್ ಅವರು ಹುಟ್ಟಿದ ಜಾಗ, ಅವರು ಹುಟ್ಟಿ ಬೆಳೆದು ಬಂದಂತಹ ಹಾದಿ ಹೇಗಿತ್ತು ಎನ್ನುವುದು ಪ್ಲವರ್ ಶೋ ನ ಪ್ರಮುಖ ಆಕರ್ಷಣೆಗಳಾಗಿವೆ.‌

ಪ್ಲವರ್ ಶೋ‌ನಲ್ಲಿ 200 ಕ್ಕು ಹೆಚ್ಚು ಬಗೆಯ ಹೂಗಳು ಒಂದೇ ಸ್ಥಳದಲ್ಲಿ ಜನರನ್ನ ಮೋಡಿ ಮಾಡುತ್ತಿದ್ದು, ಒಟ್ಟು 35 ಲಕ್ಷ ಹೂಗಳನ್ನ ಪ್ಲವರ್ ಶೋಗೆ ಬಳಕೆ ಮಾಡಿಕೊಳ್ಳಲಾಗಿದೆ. ಇನ್ನು ಫ್ಲವರ್ ಶೋಗೆಂದೆ ಆಂಧ್ರ, ಊಟಿ, ತಮಿಳುನಾಡು ಸೇರಿದಂತೆ ಬೇರೆ ಬೇರೆ ಭಾಗದಿಂದ ಹೂಗಳು ಬಂದಿದ್ದು, ಲಾಲ್ ಬಾಗ್​ನ ಗಾಜಿನ ಮನೆಯಲ್ಲಿ ಮೋಡಿ ಮಾಡಿವೆ.ಫ್ಲವರ್ ಶೋ ನಲ್ಲಿ ಆಂಥೋರಿಯಂ, ಲಿಲ್ಲಿ, ಆರ್ಕಿಡ್‌, ಜರ್‌ಬೆರಾ, ಸೇವಂತಿಗೆ, ನಂದಿ ಗಿರಿಧಾಮದ ಇಂಪೇಷನ್ಸ್‌ ಹೂಗಳು, ಅಗಪಾಂಥಸ್‌, ಸುಗಂಧ ರಾಜ ಸೇರಿದಂತೆ 200 ಪ್ರಭೇದದ ಸುಮಾರು 30-32 ಲಕ್ಷ ಹೂಗಳನ್ನು ಪ್ರದರ್ಶನದಲ್ಲಿ ಬಳಕೆ ಮಾಡಕೊಳ್ಳಲಾಗಿದೆ. ಸುಮಾರು 8 ಲಕ್ಷ ಹೂಗಳು ಹೊರ ರಾಜ್ಯಗಳಿಂದ ಬಂದಿವೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್