LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ದೇಶದ ಪ್ರಗತಿಗೆ ವಿಶ್ವಾಸಾರ್ಹ ಅಂಕಿಅAಶಗಳ ಕೊಡುಗೆ ಅಪಾರ: ಹರೀಶ್ವರನ್.ಕೆ


ಬಳ್ಳಾರಿ,ಜೂ.10:ಯಾವುದೇ ಸಮೀಕ್ಷೆಯ ಯಶಸ್ಸಿನಲ್ಲಿ ಪರಿಕಲ್ಪನೆಗಳು ಮತ್ತು ವ್ಯಾಖ್ಯಾನಗಳ ಏಕರುಪದ ಅರಿವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಸಮೀಕ್ಷಾ ಸಾಧನಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲು ಪ್ರಾದೇಶಿಕ ತರಬೇತಿ ಶಿಬಿರಗಳು ಅತ್ಯುತ್ತಮ ವೇದಿಕೆಯಾಗಿವೆ. ರಾಷ್ಟಿçÃಯ ಮಾದರಿ ಸಮೀಕ್ಷೆ ಸಂಸ್ಥೆಯು ದೇಶಕ್ಕೆ ವಿಶ್ವಾಸಾರ್ಹ ಅಂಕಿಅAಶಗಳನ್ನು ಒದಗಿಸುವ ದೇಶದ ಅತಿದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ರಾಷ್ಟಿçÃಯ ಸಂಖ್ಯಾ ಕಚೇರಿಯ ಪ್ರಾದೇಶಿಕ ಮುಖ್ಯಸ್ಥರು ಹಾಗೂ ನಿರ್ದೇಶಕ ಹರೀಶ್ವರನ್ ಕೆ. ಅವರು ಹೇಳಿದರು.
ಹುಬ್ಬಳ್ಳಿಯ ಭಾಗ್ಯಲಕ್ಷಿö್ಮ ನಗರದ ಎನ್‌ಎಸ್‌ಎಸ್‌ಒ ಭವನದಲ್ಲಿ ಹುಬ್ಬಳ್ಳಿ ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ಮಂಗಳವಾರ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಪ್ರಾದೇಶಿಕ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸರ್ಕಾರವು 1950ರಿಂದಲೇ ವೈಜ್ಞಾನಿಕ ಮಾದರಿ ಆಯ್ಕೆ ವಿಧಾನಗಳನ್ನು ಬಳಸಿಕೊಂಡು ಸಾಮಾಜಿಕ-ಆರ್ಥಿಕ ಮಾಹಿತಿಯನ್ನು ಸಂಗ್ರಹಿಸಲು ರಾಷ್ಟಿçÃಯ ಮಾದರಿ ಸಮೀಕ್ಷೆಗಳನ್ನು ನಡೆಸುತ್ತಾ ಬಂದಿದೆ. ಈ ಸರಣಿಯ ಮುಂದಿನ ಭಾಗವಾಗಿ ಎನ್‌ಎಸ್‌ಎಸ್ ನ 81ನೇ ಸುತ್ತಿನ ಸಮೀಕ್ಷೆಯು 2026ರ ಜುಲೈ 1ರಿಂದ ಆರಂಭವಾಗಲಿದೆ ಎಂದು ತಿಳಿಸಿದರು.
ಈ 81ನೇ ಸುತ್ತಿನ ಅಡಿಯಲ್ಲಿ ಮುಖ್ಯವಾಗಿ ಮೂರು ಪ್ರಮುಖ ಸಮೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ಕೃಷಿ ಕುಟುಂಬಗಳ ಸ್ಥಿತಿಗತಿ ಮೌಲ್ಯಮಾಪನ ಸಮೀಕ್ಷೆಯಲ್ಲಿ ಗ್ರಾಮೀಣ ಕುಟುಂಬಗಳ ಭೂಮಿ, ಸಕ್ರಿಯ ಹಿಡುವಳಿಗಳು, ಜಾನುವಾರುಗಳ ಮಾಲೀಕತ್ವ ಸೇರಿದಂತೆ ವಿವಿಧ ಸೂಚಕಗಳನ್ನು ಸೃಷ್ಟಿಸುವುದು ಹಾಗೂ ಕೃಷಿ ಕುಟುಂಬಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ಅಂದಾಜುಗಳನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆಯಲ್ಲಿ ಭಾರತದ ಕುಟುಂಬಗಳ ಆಸ್ತಿಗಳು, ಬಂಡವಾಳ ನಿರ್ಮಾಣ ಹಾಗೂ ಸಾಲಬಾಧ್ಯತೆಗಳಿಗೆ ಸಂಬAಧಿಸಿದ ಸಮಗ್ರ ಪರಿಮಾಣಾತ್ಮಕ ಮಾಹಿತಿಯನ್ನು ಇದು ಸಂಗ್ರಹಿಸಲಿದೆ. (ಗಮನಾರ್ಹ ಸಂಗತಿಯೆAದರೆ, ಈ ಎರಡು ವಿಷಯಗಳ ಕುರಿತ ಹಿಂದಿನ ಸಮೀಕ್ಷೆಗಳನ್ನು 2019ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಎನ್‌ಎಸ್‌ಎಸ್ ನ 77ನೇ ಸುತ್ತಿನಲ್ಲಿ ನಡೆಸಲಾಗಿತ್ತು).
ವಲಸೆ ಸಮೀಕ್ಷೆಯಲ್ಲಿ 2026ರ ಜುಲೈನಿಂದ 2027ರ ಜೂನ್‌ವರೆಗೆ ಈ ಸಮೀಕ್ಷೆ ನಡೆಯಲಿದ್ದು, ಕುಟುಂಬ ಸದಸ್ಯರ ವಲಸೆ ವೈಶಿಷ್ಟö್ಯಗಳು ಹಾಗೂ ಕುಟುಂಬಗಳಿAದ ಹೊರವಲಸೆ ಹೋದ ಸದಸ್ಯರ ಕುರಿತು ವಿವರವಾದ ಮಾಹಿತಿಯನ್ನು ಕಲೆಹಾಕಲಾಗುತ್ತದೆ ಎಂದು ಅವರು ವಿವರಿಸಿದರು.
ದೇಶದಾದ್ಯಂತ ತರಬೇತಿ ಪಡೆದ ಕ್ಷೇತ್ರಾಧಿಕಾರಿಗಳು ಈ ಮಾಹಿತಿ ಸಂಗ್ರಹ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಸಮೀಕ್ಷೆಗಳು ರಾಷ್ಟಿçÃಯ ಮಟ್ಟದಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಮಾಹಿತಿ ಸಂಗ್ರಹಣೆಗಾಗಿ ಮನೆಗಳಿಗೆ ಭೇಟಿ ನೀಡುವ ಅಧಿಕಾರಿಗಳಿಗೆ ಸಾರ್ವಜನಿಕರು ಸಂಪೂರ್ಣವಾಗಿ ಸಹಕರಿಸಬೇಕು. ಮಾಧ್ಯಮ ಪ್ರತಿನಿಧಿಗಳೂ ಸಹ ಈ ರಾಷ್ಟಿçÃಯ ಕಾರ್ಯಕ್ಕೆ ಬೆಂಬಲ ನೀಡಬೇಕು ಎಂದು ವಿನಂತಿಸಿದರು.
ಹುಬ್ಬಳ್ಳಿ ಎನ್‌ಎಸ್‌ಒ (ಎಫ್‌ಒಡಿ) ಸಹಾಯಕ ನಿರ್ದೇಶಕ ಪ್ರಮೋದ್ ವಿ. ಪಂಡಿತ್ ಅವರ ಸ್ವಾಗತಿಸಿದರು. ಉಪನಿರ್ದೇಶಕ ಮಾದೇವಪ್ಪ ಅವರು ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್