LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

 ಸಹಕಾರಿ ಸಂಘದ ಅಭಿವೃದ್ಧಿಗೆ ಸಹಕಾರ ಮುಖ್ಯ: ದಮ್ಮೂರಮಠ

ಶಿಕ್ಷಕರ ಪತ್ತು  ಬೆಳೆಸುವ ಸಹಕಾರಿ ಸಂಘದ ೬೦ನೇ ವಾರ್ಷಿಕ ಮಹಾಸಭೆ


 

ತಾಳಿಕೋಟೆ,  ಪ್ರತಿಯೊಬ್ಬರೂ ಸಹಕಾರ ನೀಡಿದರೆ ಮಾತ್ರ ಸಹಕಾರಿ ಸಂಘಗಳ ಬೆಳವಣಿಗೆಯಾಗಲು ಸಾಧ್ಯವಿದೆ. ಸದಸ್ಯರ ನಂಬಿಕೆಯೇ ಸಂಘದ ನಿಜವಾದ ಬಂಡವಾಳ, ಈ ಸಂಘವು ಇಂದು ಹೆಮ್ಮರವಾಗಿ ಬೆಳೆಯಲು ಸದಸ್ಯರ ವಿಶ್ವಾಸವೇ ಕಾರಣವಾಗಿದೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಆರ್ ಬಿ ದಮ್ಮೂರಮಠ ಹೇಳಿದರು. 
         ರವಿವಾರರಂದು ಪಟ್ಟಣದ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ತಾಳಿಕೋಟೆ ವಿಭಾಗದ ಸರಕಾರಿ ಪ್ರಾಥಮಿಕ ಶಿಕ್ಷಕರ ಪತ್ತು ಬೆಳೆಸುವ ಸಹಕಾರಿ ಸಂಘ ನಿ, ಇದರ ೬೦ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ೧೯೬೬ ರಲ್ಲಿ ಅತ್ಯಲ್ಪ ಶೇರು ಬಂಡವಾಳದೊಂದಿಗೆ ಆರಂಭವಾದ ಈ ಸಂಘವು ಇಂದು ರೂ.೧೫ ಲಕ್ಷ ಲಾಭವನ್ನು ಗಳಿಸಿದೆ ಎಂದರೆ ಇದರ ಪ್ರಗತಿಯ ವೇಗ ನಮಗೆ ತಿಳಿದು ಬರುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲಗಳನ್ನು ಪಡೆಯುವುದು ಸುಲಭದ ಕೆಲಸವಲ್ಲ, ಆದರೆ ಈ ಪತ್ತಿನ ಸಹಕಾರಿ ಸಂಘದಲ್ಲಿ ನಮಗೆ ಸರಳವಾಗಿ ಹಾಗೂ ಅಗತ್ಯವಿದ್ದಾಗ ಯಾವ ಸಮಯದಲ್ಲಾದರೂ ಸಾಲ ಸಿಗುತ್ತದೆ. ಆದ್ದರಿಂದ ಸಂಘದ ಸದಸ್ಯರೆಲ್ಲರೂ ಒಂದಾಗಿ ಇದರ ಅಭಿವೃದ್ಧಿ ಕುರಿತು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡುವ ಅಗತ್ಯವಿದೆ ಎಂದರು.
        ಸಂಘದ ಅಧ್ಯಕ್ಷರಾದ ಸುರೇಶ ಆರ್ ವಾಲಿಕಾರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಬೆಳವಣಿಗೆಗೆ ಎಲ್ಲಾ ಸದಸ್ಯರ ಸಹಕಾರವೇ ಕಾರಣವಾಗಿದೆ. ಆಡಳಿತ ಮಂಡಳಿಯ ನಿರ್ಧಾರದಂತೆ ಶೇರುಗಳ ಮೇಲೆ ಶೇ.೯ರಂತೆ ಲಾಭಾಂಶ ನೀಡಲಾಗುವುದು. ಇಂದಿನ ಸಭೆಯಲ್ಲಿ ನೀವು ನೀಡುವ ಸಲಹೆ ಸೂಚನೆಗಳನ್ನು ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಕಾರ್ಯರೂಪಕ್ಕೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದರು. 
        ಸಂಘದ ಕಾರ್ಯದರ್ಶಿ ಎಸ್ ಎಸ್ ಬೊಮ್ಮನಹಳ್ಳಿ ಸಂಘದ ವಾರ್ಷಿಕ ವರದಿಯನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ೨೦೨೫-೨೬ ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.೯೦ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು. 
         ಕಾರ್ಯಕ್ರಮದಲ್ಲಿ ಪ್ರಾ.ಶಾ. ಶಿ. ಸಂಘದ ತಾಲೂಕ ಅಧ್ಯಕ್ಷ ಬಿ.ಟಿ.ವಜ್ಜಲ್, ಉಪಾಧ್ಯಕ್ಷರಾದ ಟಿ. ಎಸ್. ಲಮಾಣಿ, ಶ್ರೀಮತಿ ಆರ್ ಬಿ ಆಲೂರ, ಪ್ರಧಾನ ಕಾರ್ಯದರ್ಶಿ ಎಸ್. ಬಿ.ಬೀರಗೊಂಡ, ಏನ್ ಜಿಓ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ, ಶಿಕ್ಷಕರ ಪತ್ತು ಬೆಳೆಸುವ ಸಹಕಾರಿ ಸಂಘದ ಉಪಾಧ್ಯಕ್ಷ ಪಿ.ವಾಯ್.ಚಲವಾದಿ, ನಿರ್ದೇಶಕರಾದ ಯು.ಜಿ.ಮಕಾನದಾರ, ಶಿವಪ್ಪ ಬೈಚಬಾಳ, ಕಾಶೀಮ ಜಮಾದಾರ, ಜಿ.ಕೆ. ಪತ್ತಾರ, ಆರ್. ಕೆ.ಹಂಚಾಟೆ, ಡಿ. ಸಿ. ಕಲಾಲ, ಎಸ್. ಎಂ. ಬಂಟನೂರ, ಎಸ್‌ಎಸ್ ಬಿಂಜಲಭಾವಿ, ಬಸವರಾಜ ಹುಲ್ಲೂರ, ನಿರ್ದೇಶಕೀಯರಾದ ಜಿ.ಟಿ. ಬಿರಾದಾರ, ಝಡ್. ಎಂ.ಅರ್ಜುಣಗಿ ಹಾಗೂ ಸಂಘದ ಶೇರುದಾರರು ಉಪಸ್ಥಿತರಿದ್ದರು. ಶಿಕ್ಷಕ ರಾಚಯ್ಯ ಪ್ರಾರ್ಥಿಸಿದರು. ನಿರ್ದೇಶಕ ಎಸ್‌ಎಂ ಬೈಚಬಾಳ ಸ್ವಾಗತಿಸಿದರು.ಶಿಕ್ಷಕಿ, ಸಾಹಿತಿ ಮಡಿವಾಳಮ್ಮ ನಾಡಗೌಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST