ಬೆಂಗಳೂರು, ಡಿಸೆಂಬರ್ 01: ರಕ್ಷಣಾ ವ್ಯವಸ್ಥೆಗೆ ನೆರವಾಗಬಲ್ಲ ದೇಶದ ಮೊಟ್ಟ ಮೊದಲ ‘ಸ್ವದೇಶಿ ರಕ್ಷಣಾ
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ’ವನ್ನು ಕರ್ನಾಟಕ ಮೂಲದ ಸ್ಟಾರ್ಟ್‌ಅಪ್ ಕಂಪನಿ ನ್ಯೂರಾಲಿಕ್ಸ್ ಎಐ ಅಭಿವೃದ್ಧಿಪಡಿಸಿದೆ. ದೆಹಲಿಯ ಮಾಣಿಕ್ ಶಾ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ‘ಚಾಣಕ್ಯ ಡಿಫೆನ್ಸ್’ ಸಂವಾದದಲ್ಲಿ ಭಾರತದ ಮೊದಲ ಸಂಪೂರ್ಣ ‘ಸ್ವದೇಶೀ ರಕ್ಷಣಾ ಎಐ-ಏಸ್-ಎ-ಸರ್ವಿಸ್’ (ALAAS) ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಡುಗಡೆ ಮಾಡಿದ್ದಾರೆ.
ಕನ್ನಡಿಗರೇ ಸ್ಥಾಪಿಸಿದ್ದ ನ್ಯೂರಾಲಿಕ್ಸ್ ಡೀಪ್ ಟೆಕ್ ಕಂಪನಿ ರಕ್ಷಣಾ ಸಚಿವಾಲಯದ IDEX ADITY 2.0 ಉಪಕ್ರಮದಡಿ ಭಾರತೀಯ ಸೇನೆಗಾಗಿ ಈ ಎಐ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು ಸ್ವದೇಶಿ ಆವಿಷ್ಕಾರದ ಮೂಲಕ ಮುಂದಿನ ತಲೆಮಾರಿನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶ ಹೊಂದಿರೋದಾಗಿ ನ್ಯೂರಾಲಿಕ್ಸ್ ಎಐ ಸಹ-ಸ್ಥಾಪಕರಾದ ವಿಕ್ರಂ ಜಯರಾಂ ಹೇಳಿದ್ದಾರೆ. ಸ್ವದೇಶಿ ರಕ್ಷಣಾ ಎಐ ಅಭಿವೃದ್ಧಿಯು ದೇಶದ ಸೈನ್ಯವನ್ನು ಬಲಪಡಿಸಿದೆ.‘ಆತ್ಮನಿರ್ಭರ ಭಾರತ’ದ ಹಾದಿಗೆ ಇದು ಮತ್ತಷ್ಟು ಶಕ್ತಿ ನೀಡಿದೆ ಎಂದು ರಾಜನಾಥ್ ಸಿಂಗ್ ಕೂಡ ಅಭಿಪ್ರಾಯಪಟ್ಟಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.