LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ಗ್ರಾಹಕರು ಸಂಘ ಸಂಸ್ಥೆಗಳ ಜೀವಾಳ - ಯಂಕಂಚಿಮಠ

 ಬೀಳಗಿ- ಯಾವುದಾದರು ಸಂಘ ಸಂಸ್ಥೆಗಳು ಬೆಳೆದು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಎಲ್ಲಾ ಜನರಿಗೂ ಅನುಕೂಲಕರ ಕೆಲಸ ಮಾಡುತ್ತಿದ್ದರೆ ಅಲ್ಲಿನ ಗ್ರಾಹಕರು,ವ್ಯವಹಾರ ಮಾಡುವ ಪ್ರತಿಯೊಬ್ಬರು ಅಂತಹ ಸಂಘಗಳ ಜೀವಾಳ ಎಂದು ಗುರುಸಿದ್ದೇಶ್ವರ ಪತ್ತಿನ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಶ್ರೀಶೈಲ ಯಂಕಂಚಿಮಠ ತಿಳಿಸಿದರು.

ಇಲ್ಲಿನ ಶ್ರೀ ಕಲ್ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರುಸಿದ್ದೇಶ್ವರ ಪತ್ತಿನ ಸಹಕಾರಿ ಸಂಘ ನಿಯಮಿತದ ೨೧ ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ

ಮಾತನಾಡಿದ ಅವರು ಕಳೆದ ೨೧ ವರ್ಷಗಳಿಂದ ಸಂಘವು ಎಲ್ಲ ರೀತಿಯಿಂದಲೂ ಎಲ್ಲಾ ಉದ್ಯೋಗಿಗಳಿಗೆ ಆರ್ಥಿಕ ನೆರವು ನೀಡಿ ಜನರ ಆರ್ಥಿಕ ಶಕ್ತಿ ಬೆಳೆಸುವ ಕಾರ್ಯ ಮಾಡುತ್ತ ಬಂದಿದ್ದು, ಗ್ರಾಹಕರು, ಷೇರುದಾರರು ಮತ್ತು ಸರ್ವ ಸದಸ್ಯರ ಸಹಕಾರದಿಂದ, ಸಂಘದ ಆಡಳಿತ ಮಂಡಳಿ, ಸಿಬ್ಬಂದಿಯ ಪ್ರಾಮಾಣಿಕ ಕೆಲಸದಿಂದ ಸಂಘವು ಬೆಳೆದು ನಿಲ್ಲಲು ಕಾರಣವಾಗಿದ್ದು ಸಂಘವು ಪ್ರಸಕ್ತ ಸಾಲಿನಲ್ಲಿ ೧.೨೦ ಕೋಟಿ ನಿವ್ವಳ ಲಾಭಗಳಿಸಿದೆ,ಜೊತೆಗೆ ಎಲ್ಲಾ ಜನರ,ಆಡಳಿತ ಮಂಡಳಿ ತಿರ್ಮಾನದಂತೆ ಸದ್ಯ ಬಾಗಲಕೋಟೆ,ಗಲಗಲಿ ಮತ್ತು ಮುಧೋಳ ಪಟ್ಟಣಗಳಲ್ಲಿ ತನ್ನ ಶಾಖೆಗಳನ್ನು ಆರಂಭಿಸಿದ್ದು ಬರುವ ದಿನಮಾನಗಳಲ್ಲಿ ಕೆರೂರ, ವಿಜಯಪುರ ನಗರದಲ್ಲಿ ತನ್ನ ಶಾಖೆ ಆರಂಭಿಸುವ ಗುರಿ ಇಟ್ಟುಕೊಳ್ಳಲಾಗಿದೆ, ಸಂಘವು ಶೇರುದಾರರಿಗೆ ಶೇ ೨೦ ರಷ್ಟು ಡಿವಡೆಂಡ್ ನೀಡುತ್ತಿದೆ ಅದಕ್ಕಾಗಿ ಜನರು ಇದರ ಉಪಯೋಗ ಮಾಡಿಕೊಳ್ಳಲು ತಿಳಿಸಿದ ಅವರು ಪ್ರಸಕ್ತ ಸಾಲಿನ ಸಂಘದ ವಾರ್ಷಿಕ ವರದಿ ಮಂಡಿಸಿದರು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ಎಸ್ ಎಚ್ ಯಾಳವಾರಮಠ ಮಾತನಾಡಿ ಸಮಾಜ ಬಾಂಧವರು ಸೇರಿಕೊಂಡು ಆರಂಬಿಸಿದ ಸಂಘವು ಇಂದು ಉತ್ತಮ ರೀತಿಯಲ್ಲಿ ಕಾರ್ಯ ಮಾಡುತ್ತಿದ್ದು,ಸಂಘವು ಈ ವರ್ಷದಿಂದ ಸಂಘದ ಸದಸ್ಯರು ಬಡವರಾಗಿದ್ದು ಅಂತಹ ಕುಟುಂಬಗಳಿಗೆ ಮರಣೋತ್ತರ ಜೀವಾಂಶ ನೀಡಲು ತಿರ್ಮಾನಿಸಿದ್ದು,ಅಂತಹ ಕುಟುಂಬದಲ್ಲಿ ಯಾರಾದರು ಮರಣ ಹೊಂದಿದರೆ ಅವರು ಕುಟುಂಬ ಸದಸ್ಯರಿಗೆ ಐದು ಸಾವಿರು ರೂ ಸಹಾಯ ಮಾಡಬೇಕು ಎಂದು ಆಡಳಿತ ಮಂಡಳಿ ನಿರ್ಣಯ ಮಾಡಿದೆ ಜೊತೆಗೆ ಈಗಾಗಲೇ ಸಮಾಜದ ಮಕ್ಕಳಿಗೆ ಆರ್ಥಿಕ ನೆರವು,ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವ ಕೆಲಸ ಮಾಡುತ್ತಿದ್ದೇವೆ.ಸಂಘದ ಆರ್ಥಿಕ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಅದಕ್ಕಾಗಿ ಆಡಳಿತ ಮಂಡಳಿ ಸದಸ್ಯರು ಮನೆ ಮನೆ ಬೇಟಿ ನೀಡಿ ಶೇರು ಸಂಗ್ರಹ ಮಾಡುವ ಕೆಲಸ ಮಾಡುತ್ತೇವೆ ಎಂದರು.

ಸಮಾರಂಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ, ಪ್ರಾಚಾರ್ಯ ಎಂ ಎಂ ಹಿರೇಮಠ ಮಾತನಾಡಿದರು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ,ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಉತ್ತಮ ಗ್ರಾಹಕರನ್ನು ಗೌರವಿಸಲಾಯಿತು.

    ಸಮಾರಂಭದ ದಿವ್ಯ ಸಾನಿಧ್ಯವನ್ನು ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಕಲ್ಮಠ ಹಿರೇಮಠದ ಗುರುಪಾದ ಶಿವಾಚಾರ್ಯರು ವಹಿಸಿದ್ದರು. ಹಿರಿಯರಾದ ಈರಯ್ಯ ಗೋಠೆ, ಮುತ್ತು ವಸ್ತ್ರದ,ಎಸ್ ಆಯ್ ಗೋಠೆ,ಆಯ್ ಎಸ್ ಬಂಗಾರಿಮಠ, ಎನ್ ಎಸ್ ಹಿರೇಮಠ,ಎಸ್ ಸಿ ಹಿರೇಮಠ,ಆರ್ ಎಸ್ ವಸ್ತ್ರದ ,ಎಸ್ ಎಸ್ ಘಂಟಿಮಠ ,ಎ ಎಸ ವಸ್ತ್ರದ, ಆರ್ ಬಿ ನಿಂಗೊಳ್ಳಿ, ಯು ಎಂ ಕಣಬೂರ,ಆರ್ ಜಿ ಹಿರೇಮಠ, ಗುರುಪಾದಯ್ಯ ಮರೆಗುದ್ದಿ ,ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಪಂಚಾಕ್ಷರಿ ಹಿರೇಮಠ ಸೇರಿದಂತೆ ಇತರರು ಇದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST