ಢಾಕಾ ಆಗಸ್ಟ್ 28: ಬಂಗಾಳಿ ಭಾಷೆಯ ಉಪಗ್ರಹ ಮತ್ತು ಕೇಬಲ್ ಟೆಲಿವಿಷನ್ ಚಾನೆಲ್, ಬಾಂಗ್ಲಾದೇಶದ ಗಾಜಿ ಟಿವಿಯಲ್ಲಿ ನ್ಯೂಸ್ ರೂಂ ಸಂಪಾದಕರಾಗಿದ್ದ ಸಾರಾ ರಹನುಮಾ ಅವರ ಮೃತದೇಹ ಢಾಕಾದ ಸರೋವರದಲ್ಲಿ ಪತ್ತೆಯಾಗಿದೆ. ಬುಧವಾರ ದೇಶದ ರಾಜಧಾನಿಯ ಹತಿರ್‌ಜೀಲ್ ಸರೋವರದಲ್ಲಿ ಆಕೆಯ ಶವ ತೇಲುತ್ತಿರುವುದು ಪತ್ತೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆ (ಡಿಎಂಸಿಎಚ್) ಪೊಲೀಸ್ ಹೊರಠಾಣೆ ಉಸ್ತುವಾರಿ ಇನ್ಸ್ಪೆಕ್ಟರ್ ಬಚ್ಚು ಮಿಯಾ ಆಕೆಯ ಮೃತದೇಹವನ್ನು ಹೊರತೆಗೆದಿರುವುದಾಗಿ ಖಚಿತಪಡಿಸಿದ್ದಾರೆ.
ಸ್ಥಳೀಯರು ಮೃತದೇಹವನ್ನು ಸರೋವರದಿಂದ ಹೊರತೆಗೆದು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಡಿಎಂಸಿಎಚ್) ಕೊಂಡೊಯ್ದರು, ಅಲ್ಲಿ ವೈದ್ಯರು ಆಕೆ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು. ಸಾವಿಗೂ ಮುನ್ನ ಸಾರಾ ಮಂಗಳವಾರ ರಾತ್ರಿ ಫೇಸ್‌ಬುಕ್‌ನಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.