LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಘಟಪ್ರಭಾದ ಭಕ್ತರು ಎಲ್ಲರಿಗೂ ಮಾದರಿ ಆಗಿದ್ದಾರೆ : ಶಿವಕುಮಾರ ಶ್ರೀಗಳು

ಘಟಪ್ರಭಾ.ಗುಬ್ಬಲಗುಡ್ಡ ಕೆಂಪಯ್ಯಾ ಸ್ವಾಮಿ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳವರ ಹುಟ್ಟು ಹಬ್ಬವನ್ನು ವಿಶಿಷ್ಟವಾದ ರೀತಿಯಲ್ಲಿ ರಕ್ತ ದಾನ, ಅನಾಥ ಮಕ್ಕಳಿಗೆ ಅನ್ನ ಬಟ್ಟೆಗಳನ್ನು ವಿತರಿಸುವ ಕಾರ್ಯಕ್ರಮ  ಹಮ್ಮಿಕೊಂಡಿದ್ದು.ವಿವಿಧ ಆಸ್ಪತ್ರೆಗಳ ರೋಗಿಗಳ ಹಣ್ಣು ಹಂಪಲು ವಿತರಣೆ, ಉಚಿತ ಆರೋಗ್ಯ ತಪಾಸಣೆ ಯಂತಹ  ಕಾರ್ಯಕ್ರಮಗಳ ಜೊತೆಗೆ ಆಚರಿಸುವ ಮೂಲಕ  ಎಲ್ಲಾ ಮಠ ಮಾನ್ಯ ಗಳಿಗೆ ಮತ್ತು ಸಮಾಜಕ್ಕೆ  ಘಟಪ್ರಭಾದ ಶ್ರೀ ಕೆಂಪಯ್ಯಾ ಸ್ವಾಮಿ ಮಠದ ಭಕ್ತರು ಮಾದರಿ ಎನಿಸಿದ್ಧಾರೆ ಎಂದು ಖ್ಯಾತ ಪ್ರವಚನಕಾರರಾದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಬಳೂಟಗಿ ಹೇಳಿದರು.
      ಅವರು ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳವರ ಹುಟ್ಟು ಹಬ್ಬದ ಆಚರಣೆ ಕುರಿತು ಶನಿವಾರ ದಿನಾಂಕ 11-07-2026  ರಂದು ಮಠದಲ್ಲಿ ನಡೆದ ಪೂರ್ವ ಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.  ಗಣೇಶ್ ಗಾಣಿಗ  ಸ್ವಾಗತಿಸಿ ಪೂರ್ವಭಾವಿ ಸಭೆಯ ಸಿದ್ಧತೆಯ ರೂಪವೇಷಗಳ ಬಗ್ಗೆ ವಿವರಿಸಿದರು.  
ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ ಮಾತನಾಡಿ ಧಾರ್ಮಿಕ ಕಾರ್ಯಗಳ ಜೊತೆಗೆ ಸಾರ್ವಜನಿಕ ಮತ್ತು ಸಾಮಾಜಿಕ ಕಾರ್ಯ ಗಳನ್ನು ಕೈಗೊಳ್ಳುವ ಮೂಲಕ ಭಕ್ತ ಸಮೂಹ ಆದರ್ಶ ವೆನಿಸಿದೆ ಎಂದರು.ಕನ್ನಡ ರಕ್ಷಣೆ ವೇದಿಕೆ ರಾಜ್ಯಾಧ್ಯಕ್ಷ ಡಾ, ಕೆಂಪಣ್ಣ ಚೌಕಶಿ ಮಾತನಾಡಿ ಬೀದಿ ಬದಿ ವ್ಯಾಪಾರಿಗಳಿಗೆ ಬಿಸಿಲು ಮಳೆಗೆ ಅನುಕೂಲವಾಗುವ ದೃಷ್ಟಿಯಿಂದ ಅವರಿಗೆ ಛತ್ರಿಗಳನ್ನ ವಿತರಿಸುವ ಕಾರ್ಯ  ಹಾಗೂ ಪ್ರಗತಿಪರ ರೈತರಿಗೆ ಅವರ ಸಾಧನೆಗೆ ಮೆಚ್ಚಿ ಅವರಿಗೆ ಗೌರವ ಪುರಸ್ಕಾರ ನೀಡಿ ಅವರಿಗೆ ಗೌರವಿಸುವ ಕಾರ್ಯ  ಮಾಡಿಕೊಡುವ  ಭಕ್ತ ಸಮೂಹದಿಂದ ಆಗಲಿ ಎಂದರು.
ಧರೆಪ್ಪಾ ಮಗದುಮ್   (ನಂದಗಾಂವ) ಮಾತನಾಡಿ ಸುತ್ತ ಹತ್ತು ಹಳ್ಳಿ ಗಳಿಂದ ಭಕ್ತರು ಬಂದು ಎಲಾ ಕಾರ್ಯಕ್ಕೆ ಸಹಕಾರ ನೀಡುತ್ತೇವೆ ಎಂದರು. ಈ ಸಂದರ್ಭದಲ್ಲಿ ರವಿ ಹುದಲಿ,ಮಾಂತೇಶ ಗಾಳಿ, ಮಾರುತಿ ಕಾ ಹುಕ್ಕೇರಿ, ಮಂಜು ಮಟಗಾರ್, ಗಂಗಾಧರ್ ಬಡಕುಂದ್ರಿ, ಅಪ್ಪಾ ಸಾಬ್ ಮುಲ್ಲಾ, ಕಲ್ಲಪ್ಪ ಕೊಂಕಣಿ, ಮಾರುತಿ ದು ಹುಕ್ಕೇರಿ,  ಕಲ್ಲಪ್ಪ ಕಾಡದವರ, ತಮ್ಮಣ್ಣಾ ಅರಭಾಂವಿ,ನವೀನ್ ತುಕ್ಕಾನಟ್ಟಿ, ಅಜಿತ ಗುಡಶಿ, ಮಲ್ಲಪ್ಪ ಕಮತ, ಗೋಪಾಲ  ಕುಕುನೂರ, ಯಲ್ಲಪ್ಪ ಅಟ್ಟಿಮಿಟ್ಟಿ, ಹಾಗೂ ಮಲ್ಲಾಪುರ್ ಪಿಜಿ ಘಟಪ್ರಭಾ. ಧುಪದಾಳ ಸಾವಳಗಿ,ನಂದಗಾವ್, ಸಿಂಧಿಕುರಬೇಟ,ಪಾಮಲದಿನ್ನಿ,ಬಡಿಗವಾಡ ಸೇರಿದಂತೆ ಮಠದ ಅಪಾರ ಸದ್ಭಕ್ತರು ಭಾಗವಹಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್