LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಮಿಸ್ ಮಾಡದೆ ನೋಡಿ  ಮಜದ ಮಿಸ್ಟರ್ ರಾಣಿ ಟೀಸರ್



      'ಮಿಸ್ಟರ್ ರಾಣಿ' ಸಿನಿಮಾದ ಪೋಸ್ಟರ್ ಕ್ರಿಯೆಟಿವಿಯಿಂದಾಗಿ  ಸಖತ್ ವೈರೆಲ್ ಆಗಿತ್ತು. ಪೋಸ್ಟರ್ ನಲ್ಲೇ ಒಂದು ರೀತಿ ಟ್ರೆಂಡ್ ಸೆಟ್ ಮಾಡಿತ್ತು.ಈಗ ಸಿನಿಮಾದ ಟೀಸರ್ ರೀಲಿಸ್ ಮಾಡಿದ್ದಾರೆ.


     ಸದ್ಯದ ಕ್ರೈಮ್,ಥ್ರಿಲರ್,ಹಾರರ್,ಲವ್ ಸ್ಟೋರಿ ಎಲ್ಲವನ್ನು ಬದಿಗಿಟ್ಟು ವಿನೂತನ ಶೈಲಿಯ  ಕಾಮಿಡಿ ಎಂಟರ್ ಟೈನರ್ ಚಿತ್ರವನ್ನು ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಖ್ಯಾತಿಯ ನಿರ್ದೇಶಕ ಮಧುಚಂದ್ರ ಮಾಡಿದ್ದಾರೆ. “ ಹೀರೋ ಆಗ್ಬೇಕು ಅಂತ ಸಿನಿಮಾ ರಂಗಕ್ಕೆ ಬಂದ ಹುಡುಗ ಆಕಸ್ಮಿಕವಾಗಿ ಹೀರೋಯಿನ್ ಆಗಿಬಿಡ್ತಾನೆ ಅನ್ನೋದೆ ಟೀಸರ್ ನಲ್ಲಿ ಹೇಳಿರೋ ಕಥೆ” ಎಂದಿದ್ದಾರೆ. ಒನ್ ಲೈನ್ ಸ್ಟೋರಿಯಲ್ಲೇ ಸಿನಿಮಾ ಎಷ್ಟು ಢಿಫರೆಂಟಾಗಿದೆ ಮತ್ತು ಮಜಾವಾಗಿದೆ ಅನ್ನೋದು ಗೊತ್ತಾಗುತ್ತೆ.


     ಲಕ್ಷ್ಮಿ ನಿಮಾಸ ಸೀರಿಯಲ್ ನಲ್ಲಿ ಜಯಂತ್ ಪ್ರಾತಮಾಡಿ ಸಿಕ್ಕಾಪಟ್ಟೆ ಫೇಮಸ್ ಆಗಿರೋ ದೀಪಕ್ ಸುಬ್ರಹ್ಮಣ್ಯ ಈ ಚಿತ್ರದ ಹೀರೋ(ಯಿನ್!?) ರಾಣಿ ರೋಲ್ ಮಾಡಿರೋದು ದೀಪಕ್ ಸುಬ್ರಹ್ಮಣ್ಯ ಅಂತ ಗೊತ್ತಾದಾಗ ತುಂಬಾ ಜನ ಶಾಕ್ ಗಿದ್ದಾರೆ ! ಒಬ್ಬ ಹೊಸ ಹುಡುಗ ಈ ಲೆವೆಲ್ ನಲ್ಲಿ ಹುಡುಗಿ ಥರ ಚೇಂಜ್ ಓವರ್ ಮಾಡೋಕೆ ಸಾಧ್ಯಾನಾ? ಅಂತ ಎಲ್ಲಾರೂ ಅಚ್ಚರಿ ಪಟ್ಟಿದ್ದಾರೆ.ರಾಣಿ ಪೋಸ್ಟರ್ ನೋಡಿ ನಮಗೆ ಇನ್ನೊಬ್ಬಳು ಹೀರೋಯಿನ್ ಕಾಂಪಿಟೇಷನ್ ಮಾಡೋಕೆ ಬಂದಳಲ್ಲ ಅಂತ ತುಂಬಾ ಜನ ಹೀರೋಯಿನ್ ಕೂಡ ಹೊಟ್ಟೆ ಉರಿ ಪಟ್ಟುಕೊಂಡಿದ್ದರಂತೆ! ಆದರೆ ಟೀಸರ್ ನೋಡಿ ಅಯ್ಯೋ ರಾಣಿ ಹುಡುಗಿ ಅಲ್ಲ ಹುಡುಗ ಅಂತ ಗೊತ್ತಾಗಿ ಬೆಸ್ತು ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಟೀಸರ್ ಒಪನಿಂಗ್ ನಲ್ಲಿ ಬರುವ ಅನಿಮೇಷನ್‌ ನೋಡಿದಾಗ ಇದು ಯಾವುದೋ  ಹಾಲಿವುಡ್ ಚಿತ್ರವಿರಬೇಕೆಂದು ಅನ್ನಿಸುವುದರಲ್ಲಿ


ಸಂಶಯವಿಲ್ಲ. ಟೀಸರ್ ನೋಡಿದಾಗ ಇದೊಂದು ವಿಭಿನ್ನ ರೀತಿಯ ಥಿಯೇಟರ್ ಎಕ್ಸ್ ಪೀರಿಯೆನ್ಸ್ ಕೊಡುವಂತ ಚಿತ್ರ ಎನಿಸುತ್ತಿದೆ.ಕಂಪ್ಲೀಟ್ ಕಾಮಿಡಿ ಪ್ಯಾಕೇಜ್ ಇರುವ 'ಮಿಸ್ಟರ್ ರಾಣಿ' ಚಿತ್ರದ  ಟೀಸರ್ ಯೂಟ್ಯೂಬ್ ನಲ್ಲಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್