ಘಟಪ್ರಭಾ ಏ.,೨೪-
ಸಮೀಪದ ಪ್ರತಿಷ್ಠಿತ ಶಿರಡಾಣ ಗ್ರಾಮದ ಡಾ. ಗಂಗಾಧರ ಆಂಗ್ಲ ಮಾಧ್ಯಮ ವಸತಿ ಶಾಲೆಯ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಳೆದ ೧೩ ವರ್ಷಗಳಿಂದ ಸತತವಾಗಿ ಶೇ. ೧೦೦ ಫಲಿತಾಂಶ ನೀಡುತ್ತಾ ಬಂದಿದೆ. ಈ ಬಾರಿಯೂ ಶಾಲೆಯ ಎಲ್ಲ ವಿದ್ಯಾರ್ಥಿಗಳು ಪಾಸಾಗಿ ೧೦೦% ಫಲಿತಾಂಶ ಪ್ರದರ್ಶೀಸಿದ್ದಾರೆ.
೫೮ ವಿದ್ಯಾರ್ಥಿಗಳು ೯೦% ಹೆಚ್ಚು ಅಂಕ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ೮೧ ವಿದ್ಯಾರ್ಥಿಗಳು ದಿಸ್ಟಿಂಕ್ಷನ್‌ನಲ್ಲಿ, ೪೨ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಶಾಲೆಯ ವಿದ್ಯಾರ್ಥಿಗಳಾದ ಸಂಪತ ಗಿಡ್ಡಾಳಿ ೬೧೨ ಅಂಕ ಪಡೆದು ಪ್ರಥಮ, ಅನನ್ಯ ಬಾಣಸಿ ೫೧೧ ಅಂಕ ಪಡೆದು ದ್ವಿತೀಯ, ಮಲ್ಲಿಕಾರ್ಜುನ ಪಾಟೀಲ ೬೧೧ ಅಂಕ ಗಳಿಸಿ ತೃತೀಯ, ಶಶಿಕಲಾ ನೇರ್ಲಿ ೬೧೦ ಅಂಕ ಪಡೆದು ನಾಲ್ಕನೇ, ವಲ್ಲಭ ಕಮತೆ ೬೦೯ ಅಂಕ ಗಳಿಸಿ ೫ ಸ್ಥಾನ ಗಳಿಸಿದ್ದಾರೆ.
ಇವರ ಸಾಧನೆಗೆ ಶಾಲೆಯ ಕಾರ್ಯಾಧ್ಯಕ್ಷರಾದ ಮ ನಿ ಪ್ರ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಪ್ರಾಚಾರ್ಯರಾದ ಕು. ಮೇಘರಾಜ್ ಸಂಪಗಾಂವ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
