LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಸಿಡಿಲು ಬಡಿದು ರೈತ ಸಾವು; ಮತ್ತೊಬ್ಬನ ಸ್ಥಿತಿ ಗಂಭೀರ


ಯರಗಟ್ಟಿ: ತಾಲೂಕಿನ ಮದ್ದೂರ ಗ್ರಾಮದ ರೈತರಾದ ಕೇದಾರಪ್ಪ ಬಸಪ್ಪ ಗುರ್ಲಹೊಸೂರ (೪೭) ಹಾಗೂ ಭೀಮಪ್ಪ ಕೇದಾರಪ್ಪ ಗುರ್ಲಹೊಸೂರ ಅವರು ನಿನ್ನೆ ರಾತ್ರಿ ಶ್ರೀರಂಗಪುರ ಹದ್ದಿಯಲ್ಲಿರುವ ತಮ್ಮ ಜಮೀನಿನ ಸರ್ವೇ ನಂ. ೩೭೮ರಲ್ಲಿ ಮೆಕ್ಕೆಜೋಳದ ರಾಶಿ ಕಾಯಲು ತೆರಳಿದ್ದರು.
ರಾತ್ರಿ ಅಂದಾಜು ೧ ಗಂಟೆಯಿಂದ ೩ ಗಂಟೆಯ ಅವಧಿಯಲ್ಲಿ ಅತಿಯಾದ ಸಿಡಿಲು-ಮಳೆ ಸುರಿದಿದ್ದು, ಈ ವೇಳೆ ಸಿಡಿಲು ಬಡಿದು ಕೇದಾರಪ್ಪ ಬಸಪ್ಪ ಗುರ್ಲಹೊಸೂರ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸಿಡಿಲಿನ ಹೊಡೆತದಿಂದ ಭೀಮಪ್ಪ ಕೇದಾರಪ್ಪ ಗುರ್ಲಹೊಸೂರ ಅವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ಯರಗಟ್ಟಿ ತಹಶೀಲ್ದಾರ್ ಎಂ.ವಿ. ಗುಂಡಪ್ಪಗೋಳ ಅವರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಮುರಗೋಡ ಸಿಪಿಐ ಐ ಎಂ ಮಠಪತಿ, ಯರಗಟ್ಟಿ ಪಿಎ??? ಎಲ್ ಬಿ ಮಾಳಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST