LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಅಮಾಯಕರನ್ನು ಜೈಲಿಗಟ್ಟಿದ್ದ ಪಿಎಸ್​ಐ ಸೇರಿ ನಾಲ್ವರು ಅಧಿಕಾರಿಗಳು ಅಮಾನತು

ಬೆಂಗಳೂರು, ಸೆಪ್ಟೆಂಬರ್​ 15: ನಕಲಿ ದೂರು ದಾಖಲಿಸಿ ಅಮಾಯಕರನ್ನು ಜೈಲಿಗಟ್ಟಿದ್ದ ಬೆಂಗಳೂರಿನ ಬನಶಂಕರಿ ಠಾಣೆ ಪಿಎಸ್​ಐ ಸೇರಿದಂತೆ ನಾಲ್ವರ ಪೊಲೀಸರ ಅಮಾನತು ಮಾಡಲಾಗಿದೆ. ಬನಶಂಕರಿ ಠಾಣೆ ಪಿಎಸ್ಐ ಶ್ರೀಧರ್ ಗುಗ್ರಿ, ಎಎಸ್ಐ ಎಸ್.ಕೆ.ರಾಜು, ಕಾನ್ಸ್​ಟೇಬಲ್​ಗಳಾದ ಸತೀಶ್ ಬಗಲಿ, ತಿಮ್ಮಪ್ಪ ಪೂಜಾರ ಅಮಾನತುಗೊಳಿಸಿ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಆದೇಶ ಹೊರಡಿಸಿದ್ದಾರೆ.





ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಫೀಮು ಮಾರುತ್ತಿದ್ದಾರೆಂದು ಕದಿರೇನಹಳ್ಳಿಯ ಇಬ್ಬರ ವಿರುದ್ಧ ರಾಜನ್, ಚೈತ್ರಾ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಜೈಲಿಗಟ್ಟಿದ್ದಾರೆಂದು ಕಮಿಷನರ್​​ಗೆ ಜೈಲಿಗೆ ಹೋಗಿದ್ದವರ ಸಂಬಂಧಿಕರು ಆಯುಕ್ತರಿಗೆ ದೂರು ನೀಡಿದ್ದರು. ಹಾಗಾಗಿ ತನಿಖೆ ನಡೆಸಿ ಸುಳ್ಳು ಕೇಸ್ ದಾಖಲಿಸಿ ಜೈಲಿಗಟ್ಟಿದ್ದ ಪೊಲೀಸರ ಸಸ್ಪೆಂಡ್ ಮಾಡಲಾಗಿದ್ದು, ತಪ್ಪು ಮಾಹಿತಿ ನೀಡಿದ್ದ ರಾಜನ್, ಚೈತ್ರಾರನ್ನು ಪೊಲೀಸರು ಬಂಧಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST