LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಗಲಿಬಿಲಿ ಗೋವಿಂದ ಇದು ಡಾ.ಸಂಗಮೇಶ ಉಪಾಸೆ  ಚಿತ್ರ


       ಕಿರುತೆರೆಯ ’ಸಿಲ್ಲಿ ಲಲ್ಲಿ’ ಧಾರವಾಹಿಯಲ್ಲಿ ’ಅರ್ಥವಾಯಿತು ಬಿಡಿ’ ಎಂದು ನಗಿಸುತ್ತಿದ್ದ ಡಾ.ಸಂಗಮೇಶ ಉಪಾಸೆ ಸಾಕಷ್ಟು ಚಿತ್ರಗಳಲ್ಲಿ ಕಾಮಿಡಿ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಇದೆಲ್ಲಾದರ ಅನುಭವದಿಂದ ಹೊಸ ಪ್ರಯತ್ನ, ಸಾಧನೆ ಎನ್ನುವಂತೆ ಈಗ 'ಗಲಿಬಿಲಿ ಗೋವಿಂದ’ ಚಿತ್ರದ ಮುಖಾಂತರ ನಿರ್ದೇಶನ ಜವಬ್ದಾರಿಯನ್ನು ಹೊತ್ತುಕೊಳ್ಳುವ ಜತೆಗೆ ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

     ಇವರ ಶ್ರಮಕ್ಕೆ ಬಿಜಾಪುರ ಮೂಲದ ಸಮಾನ ಮನಸ್ಕರುಗಳಾದ ಅಂಬರೀಷ ಬಣಜಿಗೇರ, ಸಂದೀಪ್ ರಾಠೋಡ್, ಚಿದಾನಂದ ಪರಗೊಂಡ, ಮಡಿವಾಳಪ್ಪ.ಎಮ್.ಗೋಗಿ ಮತ್ತು ಚಿದಾನಂದ ಪತ್ತಾರ ಜಂಟಿಯಾಗಿ ಬಂಡವಾಳ ಹೂಡುತಿದ್ದಾರೆ. ಶೀರ್ಷಿಕೆಗೆ  ’ನಗುವವರಿಗೆ ಮಾತ್ರ’ ಎಂಬ ಪಂಚಿಂಗ್ ಅಡಿಬರಹ ವಿಶೇಷವಾಗಿದೆ.

      ಚಡಚಣ ಸಮೀಪ ಇರುವ ಇಂಚಗೇರಿ ಮಠದ ಆವರಣದಲ್ಲಿ ಅದ್ದೂರಿಯಾಗಿ ಮುಹೂರ್ತ ಸಮಾರಂಭ ನಡೆಯಿತು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಸಂಗಮೇಶ್ ಸಾಧನೆ ಕೊಂಡಾಡಿ ತಂಡಕ್ಕೆ ಶುಭ ಹಾರೈಸಿದರು.

        ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು "ಗ್ರಾಮೀಣ ಭಾಗದಲ್ಲಿ ಅನಾಥ ಮಕ್ಕಳ ಕುರಿತು, ಅವರ ಸಮಸ್ಯೆ ಮೇಲೆ ಬೆಳಕು ಚೆಲ್ಲುವ ಹಾಗೂ ಮಕ್ಕಳು ಇದ್ದವರು, ಇಲ್ಲದವರ ಪೋಷಕರ ಪಾಡು ಹೇಗಿರುತ್ತೆ? ಎಂಬುದನ್ನು ಹಾಸ್ಯ ಧಾಟಿಯಲ್ಲಿ ತೋರಿಸುತ್ತಾ, ಕೊನೆಗೆ ಎಲ್ಲರಿಗೂ ಮನಮುಟ್ಟುವಂತಹ ಸಂದೇಶ ಹೇಳಲಾಗುತ್ತಿದೆ. ಹೂರ್ತಿ, ಅಂಜುಟಗಿ, ಬಿಜಾಪುರ, ಇಂಡಿ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗುವುದು. ಕಲಾವಿದರ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು" ಎಂದು  ಡಾ.ಸಂಗಮೇಶ ಉಪಾಸೆ ಮಾಹಿತಿ ಬಿಚ್ಚಿಟ್ಟರು.

       ಸಂಗೀತ ಪಳನಿ.ಡಿ.ಸೇನಾಪತಿ, ಛಾಯಾಗ್ರಹಣ ಆನಂದ ದಿಂಡ್ವರ್, ಸಂಕಲನ ರವಿತೇಜ್.ಸಿಹೆಚ್, ನೃತ್ಯ ಮಾಲೂರು ಶ್ರೀನಿವಾಸ್ ಅವರದಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್