LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ಡಿಸೆಂಬರ್​ 21ಕ್ಕೆ ಜೈಸಲ್ಮೇರ್​ನಲ್ಲಿ ಜಿಎಸ್​ಟಿ ಮಂಡಳಿ ಸಭೆ

ನವದೆಹಲಿ: ಜಿಎಸ್​ಟಿ ಮಂಡಳಿಯು ಇದೇ ಡಿಸೆಂಬರ್​ 21ರಂದು ರಾಜಸ್ಥಾನದ ಜೈಸಲ್ಮೇರ್​ನಲ್ಲಿ ಸಭೆ ಸೇರಲಿದ್ದು, ಇಲ್ಲಿ ಬಹು ನಿರೀಕ್ಷಿತ ಆರೋಗ್ಯ, ಜೀವ ವಿಮೆ ಮೇಲಿನ ಜಿಎಸ್​ಟಿ ವಿನಾಯಿತಿ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.


ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅಧ್ಯಕ್ಷತೆಯಲ್ಲಿ ರಾಜ್ಯದ ಇತರೆ ಅಧಿಕಾರಿಗಳು ಮಂಡಳಿಯಲ್ಲಿರಲಿದ್ದಾರೆ. ರಾಜ್ಯ ಸಚಿವರ ಸಮಿತಿ ಶಿಫಾರಸ್ಸಿನ ಅನ್ವಯ ತೆರಿಗೆ ದರ ಕಡಿತ ಮತ್ತು ಸಾಮಾನ್ಯ ವಸ್ತುಗಳ ಮೇಲೆ ಶೇ 12ರಿಂದ 5ರಷ್ಟು ಸ್ಲಾಬ್​ ಇಳಿಕೆ ಕುರಿತು ನಿರ್ಧಾರ ನಡೆಸುವ ಸಾಧ್ಯತೆ ಇದೆ.


ಈ ಸಂಬಂಧ ಪೋಸ್ಟ್​ ಮಾಡಿರುವ ಜಿಎಸ್​ಟಿ ಮಂಡಳಿ 2024ರ ಡಿಸೆಂಬರ್​ 21ರಂದು ರಾಜಸ್ಥಾನದ ಜೈಸಲ್ಮೇರ್​ನಲ್ಲಿ ಜಿಎಸ್​ಟಿ ಸಭೆ ನಡೆಯಲಿದೆ ಎಂದು ತಿಳಿಸಿದೆ.


ಮಂಡಳಿಯು ಕಳೆದ ಸಭೆಯನ್ನು ಸೆಪ್ಟೆಂಬರ್​ 9ರಂದು ನಡೆಸಿತ್ತು. ಇಲ್ಲಿ ಸಚಿವರ ಗುಂಪು ಅಕ್ಟೋಬರ್​ ಅಂತ್ಯದೊಳಗೆ ವಿಮೆ ಜಿಎಸ್​ಟಿ ಅಂತ್ಯಗೊಳಿಸುವ ಕುರಿತು ನಿರ್ಣಯ ಕೈಗೊಂಡಿದ್ದಾರೆ. ಇದರ ಬೆನ್ನಲ್ಲೇ ಸಚಿವರ ಗುಂಪು ಕಳೆದ ತಿಂಗಳು ವಿಮಾ ಪಾಲಿಸಿಗಳಿಗೆ ಪಾವತಿಸಿದ ವಿಮಾ ಕಂತುಗಳನ್ನು ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆಯನ್ನು ಜಿಎಸ್​ಟಿಯಿಂದ ವಿನಾಯಿತಿ ನೀಡಲು ಒಪ್ಪಿಕೊಂಡಿದೆ.


ಹಿರಿಯ ನಾಗರಿಕರ ಹೊರತಾಗಿ ವೈಯಕ್ತಿಕವಾಗಿ ಪಾವತಿಯಾದ ಐದು ಲಕ್ಷದವರೆಗಿನ ಆರೋಗ್ಯ ವಿಮೆಗೆ ವಿನಾಯಿತಿ ಪ್ರಸ್ತಾಪ ಮಾಡಲಾಗಿದೆ. ಆದಾಗ್ಯೂ, 5 ಲಕ್ಷಕ್ಕಿಂತ ಹೆಚ್ಚಿನ ಆರೋಗ್ಯ ವಿಮಾ ರಕ್ಷಣೆಯೊಂದಿಗೆ ಪಾಲಿಸಿಗಳಿಗೆ ಪಾವತಿಸಿದ ಪ್ರೀಮಿಯಂಗಳ ಮೇಲೆ ಶೇ 18ರಷ್ಟು ಜಿಎಸ್‌ಟಿ ಮುಂದುವರಿಯಲಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST