LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಜೂ.28 ರಂದು ಲಯನ್ಸ್‌ ಅಧಿಕಾರ ಹಸ್ತಾಂತರ

ಜಮಖಂಡ ಲಯನ್ಸ್‌ ಸಂಸ್ಥೆಯ 57ನೇ ಅಧಿಕಾರ ಹಸ್ತಾಂತರ ಸಮಾರಂಭ ಜೂ.28 ರವಿವಾರ ನಗರದ ಬಸವ ಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಪಿ ತವನಪ್ಪಗೋಳ ತಿಳಿಸಿದರು. ಮಂಗಳವಾರ ನಗರದ ವಿಜಯಸೌಹಾರ್ದ ಬ್ಯಾಂಕ್‌ನ ಸಭಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಸಮಾರಂಭದ ಉದ್ಘಾಟಕರಾಗಿ ಡಾ. ಮುರುಗೇಶ ನಿರಾಣಿ ಅವರು ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಬೆಳಗಾವಿ ಕೆಎಲ್‌ಇ ಸಂಸ್ಥೆಯ ವೈದ್ಯಕೀಯ ನಿರ್ದೇಶಕರಾಗಿ ಡಾ ಮಲ್ಲಿಕಾರ್ಜುನ ಜಾಲಿ ಬಾಗಲಕೋಟ ಜಿಲ್ಲೆಯ ಪೋಲೀಸ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ ಭಾಗವಹಿಸಲಿದ್ದಾರೆ. ಅಧಿಕಾರ ಹಸ್ತಾಂತರ ಅಧಿಕಾರಿಯಾಗಿ ಲಯನ್ಸನ ವಸಂತಕುಮಾರ ಶೆಟ್ಟಿ ಆಗಮಿಸಲಿದ್ದಾರೆ ಎಂದು ಹೇಳಿದರು.

2026-27 ನೇ ಸಾಲಿನ ಲಯನ್ಸ್‌ ಸಂಸ್ಥೆಯ ಅಧ್ಯಕ್ಷರಾಗಿ ಸಂಗಮೇಶ ನಿರಾಣಿ, ಕಾರ್ಯದರ್ಶಿಯಾಗಿ ಸಂಗಮೇಶ ಕೌಜಲಗಿ ಹಾಗೂ ಖಜಾಂಚಿಯಾಗಿ ಚಿನ್ಮಯ ಜಿರಲಿ ಆಯ್ಕೆಯಾಗಿದ್ದಾರೆ. ಅದೇ ರೀತಿ ಜಂಟಿ ಕಾರ್ಯದರ್ಶಿಯಾಗಿ ರಮೇಶ ದೇವರವರ, ಟೇಲ್‌ ಟ್ವಿಸ್ಟರ ಮಹಾದೇವ ಮಲಕನ್ನವರ, ಲೈನ್‌ ಟೇಮರ್‌ ವಿನೋದ ದೇಶಪಾಂಡೆ, ಪ್ರಥಮ ಉಪಾಧ್ಯಕ್ಷರಾಗಿ ಡಾ ವಿದ್ಯಾಧರ ಪತ್ತಾರ, ದ್ವಿತೀಯ ಉಪಾಧ್ಯಕ್ಷರಾಗಿ ನಿತಿನ ಹುಲ್ಯಾಳಕರ, ಕ್ಲಬ್‌ ಸರ್ವೀಸ ಚೇರ್‌ಪರ್ಸನ್‌ ಡಾ ಗೋಪಾಲಕೃಷ್ಣ ಹವಲದಾರ, ಕ್ಲಬ್ ವಿಸ್ತರಣೆ ಹಾಗೂ ಸದಸ್ಯರ ಸೇರ್ಪಡೆ ಚೇರ್‌ ಪರ್ಸನ್‌ ಶ್ರೀಶೈಲ ಕಲ್ಯಾಣಿ, ಎಲ್‌ಸಿಆಐ.ಎಫ್‌ ಕೋ ಆರ್ಡಿನೇಟರ್‌ ಎಚ್‌ ಆರ್‌ ಮಹಾರಡ್ಡಿ, ಅಡ್ಮಿನಿಸ್ಟ್ರೇಟರ ಡಾ ಆರ್‌.ಎನ್‌. ಸೋನವಾಲ್ಕರ, ಮಾರ್ಕೆಟಿಂಗ್‌ ಆಫೀಸರ್‌ ರಾಜಶೇಖರ ಅಕ್ಕಿ, ಲೀಡರ್‌ಶಿಪ ಚೇರಪರ್ಸನ ವಿಜಯ ಕಟಗಿ ಆಯ್ಕೆಯಾಗಿದ್ದಾರೆ.ಎಂದು ಹೇಳಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಉದ್ಯಮಿ ಡಾ.ಸಂಗಮೇಶ ನಿರಾಣಿ ಮಾತನಾಡಿ ಲಯನ್ಸ್‌ ಸಂಸ್ಥೆ 6 ಧೇಯಗಳನ್ನಿಟ್ಟು ಕೊಂಡು ವಿಶ್ವವ್ಯಾಪಿ ಕೆಲಸ ಮಾಡುತ್ತದೆ. ಅದೇ ರೀತಿಯಲ್ಲಿ ಎಲ್ಲ ಸದಸ್ಯರ ಸಹಕಾರ ದೊಂದಿಗೆ ಸಮಾಜಕ್ಕೆ ಬೇಕಾಗುವ ಸೇವೆ ಯನ್ನು ಸಲ್ಲಿಸುವದು ತಮ್ಮ ಅಧಿಕಾರ ಅವಧಿಯ ಮುಖ್ಯ ಉದ್ದೇಶವಾಗಿದೆ. ಇದರ ಜೊತೆಗೆ ಪ್ರತಿಭಾ ವಂತ ಮಕ್ಕಳನ್ನು ದತ್ತು ಪಡೆದು ಮಕ್ಕಳ ವಿದ್ಯಾಅಭ್ಯಾಸದ ಪೂರ್ತಿ ಕರ್ಚು ನೋಡಿಕೊಳ್ಳಲು ಉದ್ದೇಶಿಸಲಾಗಿದೆ. ಪರಿಸರ, ಆರೋಗ್ಯ,ಜತೆಗೆ ಹಸಿವು ಮುಕ್ತ ನಗರವನ್ನಾಗಿಸುವ ಉದ್ದೆಶ ಹೊಂದಲಾಗಿದೆ ಎಂದು ಹೇಳಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್