LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಅನೀಶ್ ಸೌಹಾರ್ಧ ಸಹಕಾರಿ ಸಂಘದ ಮೊದಲ ವಾರ್ಷಿಕೋತ್ಸವ ಉದ್ಘಾಟನೆ



ಧಾರವಾಡ : ಸಹಕಾರಿ ಪತ್ತಿನ ಸಂಘಗಳು ಸದಾ ಮಾನವೀಯತೆ ಆಧಾರದ ಮೇಲೆ ತಮ್ಮ ಅಸ್ಥಿತ್ವವನ್ನು ಕಾಪಾಡಿಕೊಂಡು ಆರ್ಥಿಕ ಚಟುವಟಿಕೆಗಳೊಂದಿಗೆ ಸಾಮಾಜಿಕ ಕಳಕಳಿ, ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತಾ ಬಂದಿರುವ ಫಲವಾಗಿ ಇಂದು ಸಹಕಾರಿ ಪತ್ತಿನ ಸಂಘಗಳು ಜನತೆಯ ಜನಮನದಲ್ಲಿ ಹೆಸರುವಾಸಿಯಾಗಿವೆ ಎಂದು ಧಾರವಾಡದ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಇವರು ಹೇಳಿದರು.

ನಗರದ ಆಲೂರ ವೆಂಕಟರಾವ್ ಸಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ದೀಪಕ ಚಿಂಚೊರೆ ನೇತೃತ್ವದ ಅನೀಶ್ ಸೌಹಾರ್ಧ ಸಹಕಾರಿ ಸಂಘ ನಿ. ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಮತ್ತು ಉದ್ಘಾಟರಾಗಿ ಆಗಮಿಸಿ ಭಾರತರತ್ನ ರತನ ಟಾಟಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಸಾಮಾಜಿಕ ಮತ್ತು ಆರ್ಥಿಕ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿ ಪತ್ತಿನ ಸಂಘಗಳು ಮಹತ್ತರ ಪಾತ್ರ ವಹಿಸುತ್ತಲೇ ಬಂದಿವೆ. ಕರ್ನಾಟಕದಲ್ಲಿ ಸಹಕಾರಿ ಬೆಳವಣಿಗೆ ಗಮನಿಸಿದರೆ ಗದಗ ಹುಲಕೋಟಿಯ ಸೇವೆ ಗಣನೀಯವಾದುದು ಎಂದರು. ಅನೀಶ್ ವಾರ್ಷಿಕೋತ್ಸವದಲ್ಲಿ ವಾರ್ಷಿಕ ವರದಿ ಗಮನಿಸಿದರೇ ಕೇವಲ ಒಂದು ವರ್ಷದ ಅವಧಿಯಲ್ಲಿ ಈ ಸಹಕಾರಿ ಸಂಘ ವಿಶಿಷ್ಠ ಸಾಧನೆ ಮಾಡಿದೆ. ಆರ್ಥಿಕ ವಹಿವಾಟದೊಂದಿಗೆ ಮಾನವೀಯ ಸಂಬಂಧಗಳು ಬೆಸೆಯುವ ಕೆಲಸಗಳು ಕೇವಲ ಸಹಕಾರಿ ಸಂಘಗಳಲ್ಲಿ ಹೆಚ್ಚಾಗಿ ಕಾಣಬಹುದು ಎಂದು ಅಪರ ಜಿಲ್ಲಾಧಿಕಾರಿ ಗೀತಾ ತಿಳಿಸಿದರು.

ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಕೆಪಿಸಿಸಿ ಕಾರ್ಯದರ್ಶಿ ಹಾಗು ಧಾರವಾಡ ಅಂಜುಮನ ಎ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ ತಮಟಗಾರ ಮಾತನಾಡಿ, ಅನೀಶ್ ಸೌಹಾರ್ಧ ಸಹಕಾರಿ ಸಂಘದ ಕಾರ್ಯವೈಖರಿ ಸಾಧನೆ ನಿಜವಾಗಿಯೂ ಶ್ಲಾಘನೀಯವಾಗಿದೆ, ಕಡಿಮೆ ಅವಧಿಯಲ್ಲಿ ಜನರ ಮನೆ ಮನ ತಲುಪುವಲ್ಲಿ ಯಶಸ್ವೀಯಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು ತಮ್ಮ ಆರ್ಥಿಕ ಬೆಳವಣಿಗೆ ಮಾಡಿಕೊಳ್ಳುತ್ತಿದ್ದಾರೆ. ಮರುಪಾವತಿಯಲ್ಲಿ ಗ್ರಾಹಕರು ತಮ್ಮ ಜವಾಬ್ದಾರಿ ಕಾಳಜಿ ಇಲ್ಲಿ ಎದ್ದು ಕಾಣುತ್ತದೆ. ಅನೀಶ್ ಸೌಹಾರ್ಧ ಸಹಕಾರಿ ಸಂಘದಲ್ಲಿ ಗ್ರಾಹಕರ ಕಾಳಜಿ ವಹಿಸಲಾಗುತ್ತಿದೆ. ಯಾವುದೇ ಪತ್ತಿನ ಸಂಘವಿರಲಿ ಅದರ ಬೆಳವಣಿಗೆ ಉತ್ತಮ ಆಡಳಿತ ವರ್ಗ ಮತ್ತು ಗ್ರಾಹಕರ ಜೊತೆಗಿನ ಬಾಂಧವ್ಯವನ್ನು ಅವಲಂಬಿಸಿದೆ ಎಂದು ತಮಟಗಾರ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅನೀಶ್ ಸೌಹಾರ್ಧ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ದೀಪಕ ಚಿಂಚೋರೆ ಅವರು, ಯಾವುದೇ ಪತ್ತಿನ ಸಹಕಾರಿ ಸಂಘವಿರಲಿ ಕೇವಲ ಆರ್ಥಿಕ ಲಾಭದ ಉದ್ದೇಶ ಹೊಂದಿದ್ದರೆ ಸಾಲದು. ಸಾಮಾಜಿಕ, ಮಾನವೀಯ ಸಂಬಂಧಗಳನ್ನು ಬೆಸೆಯುವ ಕೊಂಡಿಗಳಾಗಿದ್ದರೇ ಅದು ಯಶಸ್ಸು ಕಾಣುವಲ್ಲಿ ಸಂಶಯವೇ ಇಲ್ಲ ಎಂದರು. ಅಲ್ಫಾವಧಿಯಲ್ಲಿಯೇ ಅನೀಶ್ ಸಹಕಾರಿ ಸಂಘ ಯಶಸ್ಸು ಕಾಣಲು ಉತ್ತಮ ಆಡಳಿತ ವರ್ಗ ಮತ್ತು ಜನಪ್ರೀಯ ಯೋಜನೆಗಳೇ ಸಾಕ್ಷಿ. ನಾವು ಬುದ್ಧ, ಬಸವ, ಅಂಬೇಡ್ಕರ ಮತ್ತು ಭಾರತರತ್ನ ರತನ ಟಾಟಾರವರ ಮಾರ್ಗದರ್ಶನವೇ ಕಾರಣ ಎಂದು ಚಿಂಚೋರೆ ಹೇಳಿದರು. ನಮಗೆ ಇಂಥ ಮಹಾನ್ ವ್ಯಕ್ತಿಗಳೇ ಆದರ್ಶರಾಗಿದ್ದರೆ. ಕಾಯಕವೇ ಕೈಲಾಸದಲ್ಲಿ ನಂಬಿಕೆ ಇಟ್ಟವರು. ಅನೀಶ್ ಸಹಕಾರಿ ಸಂಘಕ್ಕೆ ಹೆಚ್ಚಾಗಿ ಕೂಲಿಕಾರ್ಮಿಕರು ಗ್ರಾಹಕರಾಗಿದ್ದಾರೆ. ಎಲ್ಲ ವರ್ಗದ ಗ್ರಾಹಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸಾಮಾಜಿಕ ಕಾಳಜಿ ವಹಿಸಲಾಗುತ್ತಿದೆ ಎಂದರು.

ಅನೀಶ್ ಸೌಹಾರ್ಧ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ರವಿ ಕಟ್ಟಿ ಇವರು ವಾರ್ಷಿಕ ವರದಿಯನ್ನು ಪ್ರಸ್ತಾಪಿಸಿ ವಾಚನ ಮಾಡಿದರು. ಸಂಘದ ಬೆಳವಣಿಗೆ ಕುರಿತು ತಿಳಿಸಿದರು. ಗ್ರಾಹಕರಿಗೆ ಸಂಘವು ಕೊಡುತ್ತಿರುವ ಪ್ರತಿ ಜನಪ್ರೀಯ ಯೋಜನೆಗಳ ಮಾಹಿತಿ ನೀಡಿದರು.

ಹೈದ್ರಾಬಾದಿ ಜನಪ್ರೀಯ ಹಾಸ್ಯನಟ ಅಕ್ಬರ ಮಿಂದಾ ಈ ಸಮಾರಂಭದಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದರು. ಹೈಕೋರ್ಟ ನಿ. ನ್ಯಾಯಾಧೀಶ ಅಶೋಕ ಮುರಾರಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರಾದ ತಾನಾಜಿ ಶಿರ್ಕೆ,  ಪುಂಡಲೀಕ ಲಾತೂರಕರ, ಜಗದೀಶ ಗಜಾನನ, ವಿಶ್ವೇಶ್ವರ ಹೆಗಡೆ, ಶ್ರೀಶೈಲ ಗೊಕಾವಿ, ಬಸವರಾಜ ಮಿಣಜಗಿ, ಅನಿರುದ್ಧ ಚಿಂಚೋರೆ, ವಿಠಲ ಪಾಲನಕರ, ಗುರುಬಸಪ್ಪ ಕೋಟೂರ, ಸಂಗೀತಾ ಚಿಂಚೋರೆ, ಯಾಸೀನಲಿ ಹಾವೇರಿಪೇಟ, ಶಂಕರಪ್ಪ ಹರೀಜನ, ರಾಧಿಕಾ ಚಿಂಚೋರೆ, ಪ್ರತಿಭಾ ಕೋಟೂರ, ಶಶಿಕಲಾ ಚನ್ನಗೌಡರ ಮುಂತಾದವರನ್ನು ಸತ್ಕರಿಸಿ ಸನ್ಮಾನಿಸಲಾಯಿತು.

ಅನೀಶ ಸೌಹಾರ್ಧ ಸಂಘದ ಆಡಳಿತ ಮಂಡಳಿ, ಸಿಬ್ಬಂದಿವರ್ಗದವರಾದ ಜಯಶ್ರೀ ಲಂಬಿ, ಆಕಾಶ ಬಗರಿಕಾರ, ಸುನಂದಾ ಪುಡಕಲಕಟ್ಟಿ, ನಿಖಿಲ ಪಾಟೀಲ, ಪ್ರಿಯಾಂಕಾ ಬಡಿಗೇರ, ಮಹೇಶ ಹೊನಕೇರಿ, ಸರೋಜಾ ಹಾವನೂರ ಸೇರಿದಂತೆ ಸಾವಿರಾರು ಸದಸ್ಯರು, ಮುಖಂಡರು ಹಾಗು ದೀಪಕ ಚಿಂಚೋರೆ ಅಭಿಮಾನಿಗಳ ಬಳಗದ ಪದಾಧಿಕಾರಿಗಳಾದ ನಾಗರಾಜ ಗುರಿಕಾರ, ಮೆಹಬೂಬಖಾನ ಪಠಾಣ, ಜೈಲಾನಿ ಜಾಲೇಗಾರ, ಗೌಸಖಾನ ನವಲೂರ ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್