LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

"ಹೊಸಟ್ಟಿ ಗ್ರಾಮದಲ್ಲಿ ೧.೧೬ ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ"

ಮೂಡಲಗಿ : ಹೊಸಟ್ಟಿ ಗ್ರಾಮಸ್ಥರು ಒಂದಾಗಿ ಸೇರಿಕೊಂಡು ಗ್ರಾಮಾಭಿವೃದ್ಧಿಗೆ ದುಡಿಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ತಾಲ್ಲೂಕಿನ ಹೊಸಟ್ಟಿ ಗ್ರಾಮದಲ್ಲಿ ಸೋಮವಾರದಂದು ಒಟ್ಟು ೧.೧೬ ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು ನೆರವೇರಿಸಿ ಮಾತನಾಡಿದ ಅವರು, ಹೊಸಟ್ಟಿ ಗ್ರಾಮದ ಅಭಿವೃದ್ಧಿಗೆ ಹತ್ತು-ಹಲವಾರು ಯೋಜನೆಗಳನ್ನು ಜಾರಿ ಮಾಡಲಾಗಿದೆ. ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ. ಗ್ರಾಮಸ್ಥರು ಕೂಡಿಕೊಂಡು ಗ್ರಾಮದ ಸುಧಾರಣೆಗಾಗಿ ಹೋರಾಡುತ್ತಿರುವುದು ನಮಗೆ ಇನ್ನ? ಸಂತಸ ತಂದಿದ್ದು, ಇದೇ ಒಗ್ಗಟ್ಟು ಮುಂದಿನ ದಿನಗಳಲ್ಲಿಯೂ ಕಾಯ್ದುಕೊಂಡು ಹೊಸಟ್ಟಿ ಸುಧಾರಣೆಗೆ ಎಲ್ಲರೂ ಕೈಜೋಡಿಸುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದರು.
ಹೊಸಟ್ಟಿ ಕ್ರಾಸ್ ಬಳಿ ನೂತನವಾಗಿ ನಿರ್ಮಿಸಿರುವ ಹಾಲು ಉತ್ಪಾದಕ ಸಹಕಾರಿ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ರೈತರು ನಮ್ಮ ದೇಶದ ಬೆನ್ನೆಲುಬು ಎಂದು ತಿಳಿಸಿದರು. ಗ್ರಾಹಕರು, ಹೈನುದಾರ ರೈತರು ಮತ್ತು ಸಿಬ್ಬಂದಿಗಳ ಶ್ರಮದಿಂದ ಒಕ್ಕೂಟಕ್ಕೆ ಬಂದ ಲಾಭದಲ್ಲಿ ರೈತರಿಗೆ ಶೇ. ೬೦ ರ? ರಿಯಾಯ್ತಿಯೊಂದಿಗೆ ವಿವಿಧ ಸಲಕರಣೆಗಳನ್ನು ನೀಡುತ್ತಿರುವುದಾಗಿ ಅವರು ಹೇಳಿದರು.
೨೦ ಲಕ್ಷ ರೂಪಾಯಿ ವೆಚ್ಚದ ಅಂಗನವಾಡಿ ಕಟ್ಟಡ, ೧೦ ಲಕ್ಷ ರೂಪಾಯಿ ವೆಚ್ಚದ ಗರಡಿಮನೆ, ೫ ಲಕ್ಷ ರೂಪಾಯಿ ವೆಚ್ಚದ ಗ್ರಂಥಾಲಯ, ೧೭ ಲಕ್ಷ ರೂಪಾಯಿ ವೆಚ್ಚದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಭೋಜನಾಲಯ, ತಲಾ ೧೨ ಲಕ್ಷ ರೂಪಾಯಿ ವೆಚ್ಚದ ಎರಡು ಹೊಸ ಶಾಲಾ ಕೊಠಡಿಗಳು, ೧೦ ಲಕ್ಷ ರೂ, ವೆಚ್ಚದ ಹಾಲಿನ ಡೈರಿಯ ಕಟ್ಟಡವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಉದ್ಘಾಟಿಸಿದರು. ತಲಾ ೧೦ ಲಕ್ಷ ರೂಪಾಯಿ ವೆಚ್ಚದ ಲಕ್ಷ್ಮೀ ದೇವಸ್ಥಾನ, ದುರ್ಗಾದೇವಿ ದೇವಸ್ಥಾನ ಮತ್ತು ಎಸ್ಸಿ ಕಾಲನಿಯ ದುರ್ಗವ್ವ ದೇವಸ್ಥಾನದ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಕಾರ್ಯಕ್ರಮದ ಸಾನಿಧ್ಯವನ್ನು ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಮೂಡಲಗಿ ಬಿಇಓ ಪ್ರಕಾಶ ಹಿರೇಮಠ, ಅರಭಾವಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಲ್ಲಪ್ಪ ಗದಾಡಿ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಮಲ್ಲಪ್ಪ ಪಾಟೀಲ, ಗ್ರಾ.ಪಂ. ಮಾಜಿ ಅಧ್ಯಕ್ಷ ಜಗದೀಶ ಡೊಳ್ಳಿ, ಪ್ರಮುಖರಾದ ಸದಾಶಿವ ನಾಯಿಕ, ಮಲ್ಲಪ್ಪ ಕಬ್ಬೂರ, ಬಸವರಾಜ ಮಾಳೇದ, ಕೃ? ತಳವಾರ, ಪ್ರಕಾಶ ಕಬ್ಬೂರ, ವೆಂಕಪ್ಪ ಗಡ್ಡೇದ, ಬಸಪ್ಪ ಕುಬ್ಬನ್ನವರ, ಯಲ್ಲಪ್ಪ ಕಂಬಳಿ, ಯಲ್ಲಪ್ಪ ಬಗರನಾಳ, ಸಿದ್ದಪ್ಪ ಹೊಸಮನಿ, ಮಲ್ಲಪ್ಪ ನಾಯಿಕ, ಕಲ್ಲಪ್ಪ ದೊಡ್ಡಸಿನ್ನಿ, ಭೀಮಶಿ ಕೊಪ್ಪದ, ಯಮನಪ್ಪ ಗಡ್ಡೇದ, ಕೃ? ತಳವಾರ, ಶ್ರೀಶೈಲ ಬೆಳ್ಳಗಿ, ಶಂಕರ ಕೊಪ್ಪದ, ಬಸಪ್ಪ ಮೆಚ್ಚನವರ, ಪಿಡಿಓ ಉದಯ ಬೆಳ್ಳುಂಡಗಿ, ಕೆಜಿಎಸ್ ಪ್ರಗುರು ಮಾರುತಿ ಸಿದ್ಧಾಪೂರ,  ಗೋಪಾಲ ಗುಡ್ಲಿ ಉಪಸ್ಥಿತರಿದ್ದರು.

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್