LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಶೂಟಿಂಗ್​ನಲ್ಲಿ ಕಂಚು ಗೆದ್ದ  ಭಾರತದ ಸ್ವಪ್ನಿಲ್​ ಕುಸಾಲೆ

ಪ್ಯಾರಿಸ್​ (ಫ್ರಾನ್ಸ್​): ಭಾರತದ ಶೂಟರ್ ಸ್ವಪ್ನಿಲ್ ಕುಸಾಲೆ 50 ಮೀಟರ್ ಏರ್ ರೈಫಲ್ 3 ಪೊಸಿಶನ್​ ಫೈನಲ್​ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಇಂದು ನಡೆದ ಫೈನಲ್​ ಪಂದ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡರು. ಇದರೊಂದಿಗೆ ಭಾರತ ಶೂಟಿಂಗ್​ ಸ್ಪರ್ಧೆಯಲ್ಲಿ ಮೂರನೇ ಪದಕ ಜಯಿಸಿದೆ. ಅವರು 451.4 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಪ್ಯಾರಿಸ್ ಒಲಿಂಪಿಕ್ಸ್‌ನ ಆರನೇ ದಿನವಾದ ಇಂದು ಭಾರತದ ಏಕೈಕ ಪದಕದ ಭರವಸೆ ಅವರ ಮೇಲಿತ್ತು. ಅದರಂತೆ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ವಪ್ನೀಲ್​ ತನ್ನ ಮೊದಲ ಶಾಟ್‌ನಲ್ಲಿ 9.6 ಅಂಕಗಳನ್ನು ಕಲೆಹಾಕಿಉತ್ತಮ ಆರಂಭವನ್ನು ಪಡೆದರು. ನಂತರ ಮೊಣಕಾಲಿನ ಭಂಗಿಯ ಹಂತದ ಮೊದಲ ಸರಣಿಯ ಸುತ್ತುಗಳಲ್ಲಿ 10 ಕ್ಕೂ ಹೆಚ್ಚು ಹೊಡೆತಗಳನ್ನು ಹೊಡೆದರು. ಎರಡನೇ ಸರಣಿಯನ್ನು 10.1 ಪಾಯಿಂಟರ್‌ನೊಂದಿಗೆ ಪ್ರಾರಂಭಿಸಿದರು, ಆದರೆ ಇದೇ ವೇಗವನ್ನು ಕಾಯ್ದುಕೊಳ್ಳಲು ವಿಫಲರಾದ ಅವರು ಮುಂದಿನ ಹಂತದಲ್ಲಿ 9.9-ಪಾಯಿಂಟ್ ಅಂಕ ಗಳಿಸಿದರು. ಆದಾಗ್ಯೂ, ಮಂಡಿಯೂರಿ ಹಂತದ ಮೂರನೇ ಮತ್ತು ಅಂತಿಮ ಸರಣಿಯಲ್ಲಿ ಅವರು ಕಮ್​ ಬ್ಯಾಕ್​ ಮಾಡಿದರು. ಈ ಸುತ್ತಿನ ಬಳಿಕ 153.3 ಅಂಕಗಳೊಂದಿಗೆ ಆರನೇ ಸ್ಥಾನಕ್ಕೇರಿ ಅರ್ಹತಾ ಹಂತದಲ್ಲೂ ಸ್ಥಾನ ಪಡೆದರು.




ಆಟ ಮುಂದುವರೆದಂತೆ, ಅವರ ಹೊಡೆತಗಳ ನಿಖರತೆ ಸುಧಾರಿಸಿತು. ಮುಂದಿನ 15 ಪ್ರಯತ್ನಗಳಲ್ಲಿ ಸತತವಾಗಿ 10+ ಪಾಯಿಂಟ್ ಶಾಟ್‌ಗಳನ್ನು ಗಳಿಸಿ 310.1 ಅಂಕಗಳೊಂದಿಗೆ ಪ್ರೋನ್ ಹಂತಕ್ಕೆ ಎಂಟ್ರಿ ಪಡೆದರು. ಇದರಲ್ಲಿ ಮೊದಲ ಸುತ್ತಿನಲ್ಲಿ 52.7 ಅಂಕಗಳನ್ನು ಗಳಿಸಿ, ಎರಡನೇಯ ಸುತ್ತಿನಲ್ಲಿ 52.2 ಮತ್ತು ಮೂರನೇ ಸುತ್ತಿನಲ್ಲಿ 51.9 ಅಂಕಗಳನ್ನು ಗಳಿಸಿದರು, ಇದರಲ್ಲಿ ಅವರ ಅತ್ಯುತ್ತಮ ಹೊಡೆತ 10.8 ಆಗಿತ್ತು.


ಬಳಿಕ ಅಂತಿಮ ಹಂತದ ಮೊದಲ ಪ್ರಯತ್ನದಲ್ಲಿ 9.9-ಪಾಯಿಂಟ ಸಾಧಿಸಿದರು, ನಂತರ 10.7-ಪಾಯಿಂಟ್ ಶಾಟ್ನೊಂದಿಗೆ ಅದ್ಭುತ ಪುನರಾಗಮನ ಮಾಡಿದರು. ಅವರು ಮೊದಲ ಸುತ್ತಿನಿಂದ 51.1 ಅಂಕ ಮತ್ತು ನಂತರ ಎರಡನೇ ಸುತ್ತಿನಿಂದ 50.4 ಅಂಕ ಕಲೆ ಹಾಕಿದರು. ಒಟ್ಟಾರೇ 411.6 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು ಎಲಿಮಿನೇಷನ್ ಸರಣಿಯನ್ನು ಪ್ರವೇಶಿಸಿದರು.


ಮೂರನೇ ಮತ್ತು ಅಂತಿಮ ಎಲಿಮಿನೇಷನ್ ಸುತ್ತಿನಲ್ಲಿ, ಅವರು ಮೊದಲ ಹಂತದಲ್ಲಿ 10.5 ಅಂಕ ಕಲೆಹಾಕಿ ಮೂರನೇ ಸ್ಥಾನ ಭದ್ರಪಡಿಸಿಕೊಂಡರು. ಕೊನೆಯಲ್ಲಿ 451.4 ಅಂಕಗಳೊಂದಿಗೆ ಕಂಚಿನ ಪದಕವನ್ನು ವಶಪಡಿಸಿಕೊಂಡರು.



Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್