LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ಐಪಿಎಸ್ ಅಧಿಕಾರಿ ಪೂರನ್​ ಆತ್ಮಹತ್ಯೆ ಕೇಸ್‌: ಡಿಜಿಪಿ ಕಪೂರ್‌ಗೆ ಸರ್ಕಾರ ರಜೆ ಘೋಷಣೆ

ಚಂಡೀಗಢ: ಐಪಿಎಸ್ ಅಧಿಕಾರಿ ವೈ ಪೂರನ್​ ಕುಮಾರ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಕೇಳಿ ಬಂದ ಹಿರಿಯ ಅಧಿಕಾರಿಗಳ ಕಿರುಕುಳ ಆರೋಪದ ವಿರುದ್ಧ ಕ್ರಮ ವಹಿಸುವಂತೆ ಮೃತ ಅಧಿಕಾರಿ ಕುಟುಂಬ ಹಾಗೂ ಪ್ರತಿಪಕ್ಷಗಳು ಬಿಜೆಪಿ ಸರ್ಕಾರಕ್ಕೆ ಒತ್ತಾಯಿಸಿವೆ. ಈ ಬೆನ್ನಲ್ಲೇ ಇದೀಗ ಹರಿಯಾಣ ಡಿಜಿಪಿ ಶತ್ರುಜೀತ್ ಕಪೂರ್ ಅವರನ್ನು ಸರ್ಕಾರ ರಜೆಯ ಮೇಲೆ ಕಳುಹಿಸಿದೆ.


ಸೋಮವಾರ ಈ ಬೆಳವಣಿಗೆ ನಡೆದಿದ್ದು, ರಾಜ್ಯ ಸರ್ಕಾರ ರೋಹ್ಟಕ್​​ ಎಸ್​ಪಿ ನರೇಂದ್ರ ಬಿಜರ್ನಿಯಾ ಅವರನ್ನು ವರ್ಗಾವಣೆ ಮಾಡಿದೆ.


ಈ ಕುರಿತು ಮಾತನಾಡಿರುವ ಹರಿಯಾಣ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ರಾಜೀವ್ ಜೈಟ್ಲಿ, ಹೌದು, ಡಿಜಿಪಿಯನ್ನು ರಜೆ ಮೇಲೆ ಸರ್ಕಾರ ಕಳುಹಿಸಿದೆ ಎಂದಿದ್ದಾರೆ.


ಐಪಿಎಸ್​ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಏಳು ದಿನಗಳ ನಂತರವೂ ಕುಮಾರ್ ಅವರ ಕುಟುಂಬವು ಸೋಮವಾರ ಸಹ ಶವಪರೀಕ್ಷೆ ಮತ್ತು ಅಂತ್ಯಕ್ರಿಯೆಗೆ ಒಪ್ಪಿಗೆ ನೀಡಿಲ್ಲ. ಈ ನಡುವೆ ಪ್ರಕರಣ ರಾಜಕೀಯ ಕಾವನ್ನು ಪಡೆದಿದ್ದು, ಇಂದು ಮೃತ ಅಧಿಕಾರಿ ಕುಟುಂಬಸ್ಥರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST