LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
International News

ಮಡಗಾಸ್ಕರ್ ದೇಶದಲ್ಲಿ ಜೆನ್​​ ಝೀ ಆಕ್ರೋಶ​; ಹಿಂಸಾಚಾರದಲ್ಲಿ 22 ಮಂದಿ ಸಾವು

ಅಂಟಾನನರಿವೋ(ಮಡಗಾಸ್ಕರ್): ನೇಪಾಳದ ಬಳಿಕ ಪುಟ್ಟ ದ್ವೀಪ ದೇಶ ಮಡಗಾಸ್ಕರ್ ಜೆನ್​ ಝಿ ಪ್ರತಿಭಟನೆಗೆ ನಲುಗಿದ್ದು, ಅಲ್ಲಿನ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹಲವೆಡೆ ನಡೆದ ಪ್ರತಿಭಟನೆಗಳಲ್ಲಿ ಇಲ್ಲಿವರೆಗೆ 22 ಜನರು ಸಾವನ್ನಪ್ಪಿದ್ದಾರೆ ಮತ್ತು 100ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಅಧಿಕಾರಿಗಳು ತಿಳಿಸಿದ್ದಾರೆ.


ಕಾರಣವೇನು?: ದೇಶದಲ್ಲಿ ಕಳೆದ ಗುರುವಾರದಿಂದ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ವಿದ್ಯುತ್​ ಮತ್ತು ನೀರಿನ ಪೂರೈಕೆಯಲ್ಲಾದ ವ್ಯತ್ಯಯಕ್ಕೆ ಆಕ್ರೋಶ ಶುರುವಾಗಿತ್ತು. ಶಾಂತಿಯುತವಾಗಿ ಆರಂಭಗೊಂಡ ಪ್ರತಿಭಟನೆಗಳು ಕ್ರಮೇಣ ಹಿಂಸಾಚಾರಕ್ಕೆ ತಿರುಗಿವೆ. ಸರ್ಕಾರದ ವೈಫಲ್ಯದ ವಿರುದ್ಧ ಯುವಜನತೆ ತೀವ್ರ ಆಕ್ರೋಶ ಹೊರಹಾಕಿದ್ದು, ದೇಶದಲ್ಲಿ ಹೊಸ ಚುನಾವಣೆ ನಡೆಸಲೇಬೇಕೆಂದು ಆಗ್ರಹಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.


ಈ ಪ್ರತಿಭಟನೆಗಳ ಬೆನ್ನಲ್ಲೇ ಅಧ್ಯಕ್ಷ ರಾಜೋಲಿನಾ ಅವರು ಭಾನುವಾರ ಇಂಧನ ಸಚಿವರನ್ನು ವಜಾಗೊಳಿಸಿದ್ದಾರೆ. ಇದೇ ವೇಳೆ, ಅಂಟಾನನರಿವೊಗೆ ಭೇಟಿ ನೀಡಿದ್ದು, ಜನಜೀವನವನ್ನು ರಕ್ಷಿಸುವ ಮತ್ತು ಸುಧಾರಿಸುವ ಕುರಿತು ಭರವಸೆ ನೀಡಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST