LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

26 ಅಂತರರಾಷ್ಟ್ರೀಯ ಪ್ರಶಸ್ತಿ ಗಳಿಸಿದ  ಕಿರುಚಿತ್ರ ಲಕ್ಷ್ಮಿ









     ಕಿರುತೆರೆಯ ಸಾಕಷ್ಟು ವಿಭಾಗಗಳಲ್ಲಿ ಕೆಲಸಮಾಡಿ ಅನುಭವ ಪಡೆದ ಅಭಿಜಿತ್ ಪುರೋಹಿತ್ ಕಳೆದ ವರ್ಷ 'ಲಕ್ಷ್ಮಿ' ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದರು. ಆ ಚಿತ್ರವು ಇದೀಗ ದೇಶ ವಿದೇಶಗಳ ಫಿಲಂ ಫೆಸ್ಟಿವಲ್ ಗಳಲ್ಲಿ ಭಾಗವಹಿಸಿ ಪ್ರಶಂಸೆಯ ಜತೆ ಅಭಿನಯ, ನಿರ್ದೇಶನ, ಸಂಗೀತ, ಛಾಯಾಗ್ರಹಣ ಸೇರಿದಂತೆ ನಾನಾ ವಿಭಾಗಗಳಲ್ಲಿ  27 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.


       ಈ ಸಂಭ್ರಮವನ್ನು ನಿರ್ದೇಶಕ ಅಭಿಜಿತ್  ಮಾಧ್ಯಮದೊಂದಿಗೆ ಹಂಚಿಕೊಳ್ಳಲು ಪತ್ರಿಕಾ ಗೋಷ್ಟಿ ಆಯೋಜಿಸಿದ್ದರು.  ಇದೇ ಸಂದರ್ಭದಲ್ಲಿ , ತನ್ನ ತಾಯಿಯ ಮೇಲೆ ಅಪಾರ ಪ್ರೀತಿ ಗೌರವ ಇಟ್ಟುಕೊಂಡಿರುವ ಅಭಿಜಿತ್ ತಾಯಿ ನಳಿನಿ ಅವರ  70ನೇ ಹುಟ್ಟುಹಬ್ಬವನ್ನು 'ನಳಿನಿ at 70' ಅಡುಗೆ ಮನೆಯಿಂದ ರೆಡ್ ಕಾರ್ಪೆಟ್ ವರೆಗೆ ಶೀರ್ಷಿಕೆಯಡಿ  ಅರ್ಥಪೂರ್ಣವಾಗಿ ಸೆಲಬ್ರೇಟ್ ಮಾಡಿದರು. ಎಐ ತಂತ್ರಜ್ಞಾನದ ಮೂಲಕ ತಾಯಿ  ನಳಿನಿ ಅವರಿಗೆ ಅವರ  ಪತಿ, ತಂದೆ, ತಾಯಿ ಶುಭ ಹಾರೈಸುವ ವಿಡಿಯೋ ತೋರಿಸಿದರು‌. ಈ ಅನಿರೀಕ್ಷಿತ ಅಚ್ಚರಿ ಕಂಡು ನಳಿನಿ ಅವರ‌ ಕಣ್ಣಿಂದ ಆನಂದ ಭಾಷ್ಪ ಹರಿಯಿತು.


    ಆಭಿಜಿತ್ ಮಾತನಾಡಿ "ಈ  ಸಮಾರಂಭಕ್ಕೆ ಗಿರಿಜಮ್ಮ ಅವರೇ ಸೂಕ್ತ ವ್ಯಕ್ತಿ ಎಂದು ಅವರನ್ನು  ಆಹ್ವಾನಿಸಿದಾಗ ತುಂಬಾ  ಖುಷಿಯಿಂದ ಬಂದಿದ್ದಾರೆ.   ನಮ್ಮ ಅಮ್ಮನ 70ನೇ ಹುಟ್ಟುಹಬ್ಬಕ್ಕೆ ಅವರ  ಕಟೌಟ್ ಹಾಕಿಸಿದ್ದೇನೆ. ಒಬ್ಬ ಮಗನಾಗಿ 40 ವರ್ಷಗಳ ಹಿಂದೆಯೇ ಕಳೆದುಕೊಂಡಿದ್ದ ಅವರ ತಂದೆ, ತಾಯಿ ಅಲ್ಲದೆ ಪತಿಯನ್ನು ತೋರಿಸಿದ್ದೇನೆ" ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತನ್ನ ತಾಯಿಗೆ ಅವರ  ತಂದೆಯ ವಿಗ್ರಹವನ್ನು ಕೊಡುಗೆಯಾಗಿ ನೀಡಿದರು.


‌ ‌‌ ಮಗನ ಪ್ರೀತಿಗೆ ಕಣ್ಣೀರಾದ ನಳಿನಿ "ನನ್ನ ಮಗ ನನಗೆ ಪ್ರಶಸ್ತಿ, ಗೌರವ ಎಲ್ಲವನ್ನೂ ತಂದುಕೊಟ್ಟ. ಇಂಥ ಮಗನನ್ನು ಪಡೆಯಲು ನಾನು ನಿಜಕ್ಕೂ ಅದೃಷ್ಟ ಮಾಡಿದ್ದೆ" ಎಂದರು.      ಗಿರಿಜಾ ಲೋಕೇಶ್  "ಈ ಥರದ ಮಗ ಎಲ್ಲ ತಾಯಂದಿರಿಗೂ ಸಿಗಲ್ಲ. ತನ್ನ ತಾಯಿಗೆ ಆತ ಅದೆಂಥ ಸರ್ ಪ್ರೈಸ್  ಕೊಟ್ಟಿದ್ದಾನೆ. ನಳಿಸಿ ಅವರೀಗ ಸ್ಟಾರ್ ಆಗಿದ್ದಾರೆ. ನಾನೂ  'ಲಕ್ಷ್ಮಿ' ಚಿತ್ರವನ್ನು ನೋಡಿದೆ 20 ನಿಮಿಷದಲ್ಲಿ ಎಂತೆಂಥ ವಿಚಾರಗಳನ್ನು ಹೇಳಿದ್ದಾನೆ. ಹುಟ್ಟಿ ಬೆಳೆದ ಮನೆಯ ಜತೆ ಸಂಬಂಧಗಳನ್ನೂ ಉಳಿಸಿಕೊಳ್ಳುತ್ತಾನೆ" ಎಂದರು.

     ಚಿತ್ರದಲ್ಲಿ ನಟಿಸಿರುವ ಪದ್ಮಜಾರಾವ್  "ನನಗೆ ಇಂಥ ಮಹತ್ತರ ಪಾತ್ರ ಮಾಡಲು ಅಭಿ ಕಾರಣ. ಪ್ರಶಸ್ತಿಯೂ ಬಂತು" ಎಂದು ಹೇಳಿದರು. ನಿರ್ದೇಶಕ ರಘುರಾಮ್  ತಮ್ಮ ತಾಯಿಯನ್ನು ನೆನೆದು ಕಣ್ಣೀರಾದರರು. ಸಂಗೀತ ನಿರ್ದೇಶಕ ಗಿರಿಧರ ದೀವಾನ್ ಕೂಡ ವೇದಿಕೆಯಲ್ಲಿದ್ದರು.
















Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್