LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಮದ್ಯಮುಕ್ತ ಚುನಾವಣೆಗೆ ಬೆಂಬಲಿಸೋಣ ಕರಪತ್ರ ವಿತರಣೆ

ಗದಗ,03 : ಇದೇ ಮೇ. ೭ ರಂದು ಜರುಗುವ ಲೋಕಸಭಾ ಚುನಾವಣೆಯಲ್ಲಿ ವಿವಿಧ ಪಕ್ಷಗಳು ಮುಗ್ಧ ಜನರಿಗೆ ಮದ್ಯ ಕುಡಿಸಿ ಮತ ಪಡೆಯುವ ಪ್ರಯತ್ನ ಮಾಡಬಹುದು ಅಂತಹ
ಪ್ರಯತ್ನಗಳು ಎಲ್ಲಿ ಆಗಲಿ ಯಾರಿಂದಲೇ ಆಗುತ್ತಿದ್ದರೆ ಅದನ್ನು ಬಲವಾಗಿ ವಿರೋಧಿಸಿ ಮದ್ಯಮುಕ್ತ ಚುನಾವಣೆಗೆ ಎಲ್ಲರೂ ಬೆಂಬಲಿಸೋಣ ಎಂದು ಅಖಿಲ ಕನಾಟಕ ಜಿಲ್ಲಾ ಜನಜಾಗೃತಿ
ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೇಶ ಎ. ಅವರು ಹೇಳಿದರು.

ಸ್ಥಳೀಯ ರಾಜೀವಗಾಂಧಿ ನಗರದ ಈಶ್ವರ ದೇವಸ್ಥಾನದಲ್ಲಿ ಶುಕ್ರವಾರ ಜರುಗಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಮಟ್ಟದ ಸಭೆಯಲ್ಲಿ ಅವರು ಮದ್ಯಮುಕ್ತ ಚುನಾವಣೆಗೆ ಬೆಂಬಲಿಸೋಣ ಎಂಬ ಕರಪತ್ರವನ್ನು ಬಿಡುಗಡೆ ಬಿಡುಗಡೆಗೊಳಿಸಿ ಮಾತನಾಡಿ, ಪ್ರಜ್ಞಾವಂತ ನಾಗರಿಕರು ಮದ್ಯಪಾನದ ಅಮಿಷಕ್ಕೆ ಬಲಿ ಆಗಬಾರದು. ರಾಜಕೀಯ ಪಕ್ಷಗಳು ಮದ್ಯವನ್ನು ಹಂಚುವುದಿಲ್ಲ ಎನ್ನುವ ತೀರ್ಮಾನಕ್ಕೆ  ಬರಬೇಕು. ಹೆಂಡದ ಆಮೀಷಕ್ಕೆ ಬಲಿಯಾಗಿ ಮತ ಚಲಾಯಿಸಿದಲ್ಲಿ ಕೇವಲ ಹೆಂಡಕ್ಕಾಗಿ ನಮ್ಮನ್ನು ನಾವು ಮಾರಿಕೊಂಡಂತಾಗುತ್ತದೆ. ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಇಂತಹ ಪ್ರಯತ್ನಗಳು ನಡೆದಲ್ಲಿ ಜಾತಿ- ಮತ, ಭೇದ-ಭಾವ, ಪಕ್ಷಭೇದ ಮರೆತು ಸಾಮೂಹಿಕವಾಗಿ ಪ್ರತಿಭಟಿಸಬೇಕು. ಹೆಂಡದ ಆಮಿಷಕ್ಕೆ ಬಲಿಯಾಗದೆ ಸ್ವಾಭಿಮಾನವನ್ನು ಉಳಿಸಿಕೊಂಡು ಯೋಚಿಸಿ ಮತ ಚಲಾಯಿಸಬೇಕು. ಕರ್ನಾಟಕ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಲು  ಗ್ಯ ಜನಪ್ರತಿನಿಧಿಯನ್ನು ಆರಿಸಬೇಕು. ಮದ್ಯಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಧ್ಯೇಯೋದ್ದೇಶಗಳನ್ನು ಬೆಂಬಲಿಸುವ  ವುದೇ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾದರೂ ಅಂತವರಿಗೆ ಮತ ಚಲಾಯಿಸಬೇಕು. ಸದೃಢ, ದುಶ್ಚಟ ರಹಿತ, ಪಾರದರ್ಶಕ ಆಡಳಿತವನ್ನು ರೂಪಿಸಲು ಎಲ್ಲರೂ ಮದ್ಯಮುಕ್ತ ಚುನಾವಣೆಗೆ  ತಿಯೊಬ್ಬರು ಬೆಂಬಲಿಸೋಣ ಎಂದು ಹೇಳಿದರು.

ಈ ಸಭೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ  ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಶೇಖರ ಹುಣಸಿಕಟ್ಟಿ, ನಿಕಟ ಪೂರ್ವ ಅಧ್ಯಕ್ಷರಾದ ಪ್ರೊ.ಎಚ್.ಬಿ. ಅಸೂಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಿವಪ್ರಕಾಶ ಮಹಾಜನಶೆಟ್ಟರ ಹಾಗೂ ವೇದಿಕೆಯ ಸದಸ್ಯರುಗಳಾದ ಸರೋಜಾ ಘೋರ್ಪಡೆ, ಸ್ವಪ್ನಾ ರಾಯ್ಕರ, ಮಹಾಂತೇಶ ದಶಮನಿ, ಜಗದೀಶ ಕರಡಿ, ಜಯದೇವ ಭಟ್, ಗವಿಸಿದ್ದಯ್ಯ ಹಳ್ಳಿಕೇರಿಮಠ, ನಾಗೇಶ  ಹುಬ್ಬಳ್ಳಿ, ಪಾಂಡುರಂಗ ಪತ್ತಾರ, ಪ್ರಕಾಶ ಮದ್ದಿನ, ಫಕೀರೇಶ ರಟ್ಟಿಹಳ್ಳಿ, ಎ.ಕೆ. ಮುಲ್ಲಾನವರ, ವೆಂಕಟೇಶ  ಇಮರಾಪೂರ, ಶಿವಯೋಗಿ ಸವದತಿ, ದೇವೇಂದ್ರಪ್ಪ ಕಾಗನವರ, ತಾಲೂಕ ಯೋಜನಾಧಿಕಾರಿಗಳಾದ  ಸುರೇಂದ್ರ ನಾಯಕ, ಮಹಾಬಲೇಶ್ವರ ಪಟಗಾರ, ಪುನೀತ್ ಓಲೆಕಾರ,  ಗದೀಶ ಬಂಡಾರಿ, ವಿಶಾಲಾ ಮಲ್ಲಾಪುರ, ದಿನೇಶ ಶೆರಗಾರ, ಜಯಂತ ಕೆ. ಹಾಗೂ ನಾಗೇಶ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಇತ್ತೀಚಿಗೆ ನಿಧನರಾದ ಜನ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸದಸ್ಯರಾದ ಶಿರಹಟ್ಟಿಯ ವೈ.ಎಸ್. ಪಾಟೀಲ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಚರಣೆ  ಸಲ್ಲಿಸಲಾಯಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್