LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಜಿಮ್ ಗಳಲ್ಲಿನ ಹಲ್ಲೆ ದೌರ್ಜನ್ಯ ಅನಧಿಕೃತ ಚಟುವಟಿಕೆ ನಿಲ್ಲಿಸಲು ಡಿಜಿಪಿಗೆ ಪತ್ರ

ಬೆಂಗಳೂರು: ಮೇ.23:.. ವ್ಯಾಯಾಮ ಶಾಲೆ(ಜಿಮ್)ಗಳಲ್ಲಿ ನಡೆಯುವ ಹಲ್ಲೆ, ದೌರ್ಜನ್ಯ, ಸ್ಟೆರಾಯ್ಡ್ ಬಳಸಿ ಇತರರ ಮೇಲೆ ಅಮಾನವೀಯ ಕೃತ್ಯಗಳನ್ನೆಸುಗುವ ಹಾಗೂ ಅನಧಿಕೃತ ಚಟುವಟಿಕೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪನವರು ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಪತ್ರ ಬರೆದಿದ್ದಾರೆ! 
ಇತ್ತಿಚ್ಚೆಗೆ ಹಾಸನದ ಕುವೆಂಪು ನಗರದಲ್ಲಿನ ಎಂ ಜೆ ಫಿಟ್ನೆಸ್ ಜಿಮ್‌ನಲ್ಲಿ ವ್ಯಾಯಾಮ ಮಾಡುವ ವೇಳೆಯಲ್ಲಿ ಭುಜ ತಾಗಿತು ಎನ್ನುವ ಕ್ಷುಲ್ಲಕ ಕಾರಣಕ್ಕಾಗಿ ವರುಣ್ ಎನ್ನುವ ವ್ಯಕ್ತಿ ಕೀರ್ತನ್ ಎನ್ನುವ ಸಹಪಾಠಿಯ ತಲೆಗೆ ಬಲವಾಗಿ ಹೊಡೆದಿದ್ದರಿಂದ ಕೋಮ ಸ್ಥಿತಿಗೆ ತಲುಪಿರುವ ಅಮಾನವೀಯ ಘಟನೆಯೊಂದು ನಡೆದಿರುವುದು ಹಾಸನದ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ಉಲ್ಲೇಖಿಸಿ ಉತ್ತಮ ಆರೋಗ್ಯ ಮತ್ತು ಸದೃಢ ದೇಹ ಹೊಂದಲು ಯುವಕರು ವ್ಯಾಯಾಮ ಶಾಲೆ (ಜಿಮ್)ಗಳಲ್ಲಿ ಉತ್ತಮ ಜೀವನಶೈಲಿಯೊಂದಿಗೆ ನೈಸರ್ಗಿಕ ಪಾನೀಯ ಮತ್ತು ಪ್ರೋಟೀನ್‌ಗಳನ್ನು ಸೇವಿಸುತ್ತಾ ವ್ಯಾಯಾಮಗಳನ್ನು ಮಾಡಿಕೊಂಡು ರಾಜ್ಯದಲ್ಲಿನ ವ್ಯಕ್ತಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಮತ್ತು ವೈಯಕ್ತಿಕವಾಗಿ ಹಲವಾರು ಸಾಧನೆಗಳನ್ನು ಮಾಡಿ ರಾಜ್ಯಕ್ಕೆ ಕೀರ್ತಿ ತಂದಿರುವುದು ಅವಿಸ್ಮರಣೀಯ, ಆದರೆ ಇತ್ತಿಚ್ಚಿಗೆ ಕೆಲವು ಯುವಕರು ಅಡ್ಡದಾರಿಯಲ್ಲಿ ಮೈಕಟ್ಟನ್ನು ಹೊಂದಲು ಆಯಾ ಜಿಮ್ ಗಳಲ್ಲಿ ದೀರ್ಘಸಮಯದವರೆಗೆ ಕಸರತ್ತು ಮಾಡಲು ಪೂರ್ವ ವ್ಯಾಯಾಮ ಪೂರಕಗಳು, ಮಾದಕ ಮತ್ತು ಅಮಲು ಪದಾರ್ಥಗಳು, ಸ್ಟೇರಾಯಿಡ್ಗಳನ್ನು ಬಳಸುತ್ತಿರುವುದರಿಂದ ಮನುಷ್ಯತ್ವ ಕಳೆದುಕೊಂಡು ಇತರರ ಮೇಲೆ ಮೃಗೀಯ ವರ್ತನೆ ತೋರುತ್ತಿದ್ದು ಇನ್ನು ಕೆಲವರು ತಮ್ಮನ್ನು ತಾವು ಇತರರು ಗುರುತಿಸಿ ಗೌರವ ಮರ್ಯಾದೆ ನೀಡಲಿ ಎನ್ನುವ ಮನೋಭಾವನೆಯಿಂದ ಸಹಪಾಠಿಗಳ ಮೇಲೆ ಜಿಮ್‌ಗಳಲ್ಲಿ ಹಲ್ಲೆ ದೌರ್ಜನ್ಯಗಳನ್ನು ನಡೆಸುತ್ತಿರುವುದು ಮತ್ತು ಕೆಲವು ಪುಂಡ ಪೋಕರಿಗಳು ಜಿಮ್‌ ಗಳಿಗೆ ಬರುವ ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿರುವುದು ಕಂಡು ಬಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪತ್ರಿಕೆಗಳಲ್ಲಿ ವರದಿಯಾಗುತ್ತಿರುತ್ತವೆ, ಅಲ್ಲದೆ ಕೆಲವು ಜಿಮ್ ಗಳಲ್ಲಿ ಮಾಲೀಕರು ಮತ್ತು ತರಬೇತುದಾರರೇ ವ್ಯಾಯಾಮಕ್ಕೆ ಬರುವವರಿಗೆ ಟೆಸ್ಟೋಸ್ಟೆರಾನ್ ಹೆಚ್ಚಿಸಲು ಸ್ಟೇರಾಯಿಡ್ ಇಂಜೆಕ್ಟ್ ಮಾಡುವುದು ಮತ್ತು ಮಾದಕ ವಸ್ತು, ಅಮಲು ಪದಾರ್ಥಗಳನ್ನು ಸೇವಿಸಲು ನೀಡುತ್ತಿರುವುದಾಗಿ ಪ್ರೇರೆಪಿಸುತ್ತಿರುವುದಾಗಿ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದರಿಂದ ಗಂಭೀರವಾಗಿ ಪರಿಗಣಿಸಿ ಮುಂದಾಗುವ ಅಪರಾಧಗಳನ್ನು ತಪ್ಪಿಸಲು ಮುಂಜಾಗೃತವಾಗಿ ರಾಜ್ಯದ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಎಲ್ಲಾ ಜಿಮ್ ಗಳಿಗೆ ಆಯಾ ಠಾಣಾಧಿಕಾರಿಗಳು ಭೇಟಿ ನೀಡಿ ಪ್ರತಿ ಜಿಮ್‌ಗಳಲ್ಲಿ ಸಿಸಿಟಿವಿಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಮತ್ತು ಮಾದಕ ವಸ್ತು, ಸ್ಟೇರಾಯಿಡ್ ಹಾಗೂ ಇನ್ನಿತರ ನಿಷೇಧಿತ ಪದಾರ್ಥಗಳ ಬಳಕೆಗೆ/ಬಳಸುವವರಿಗೆ ಜಿಮ್ ಗಳಲ್ಲಿ ಪ್ರವೇಶ ನೀಡದಂತೆ, ಸೇವಿಸಲು ಪ್ರೇರೆಪಿಸದಂತೆ ಮತ್ತು ಯಾವುದೇ ಘಟನೆಗಳು ನಡೆದಲ್ಲಿ ಕೂಡಲೇ ಠಾಣೆಗೆ ಮಾಹಿತಿ ನೀಡುವಂತೆ ಸೇರಿ ಆಯಾ ಜಿಮ್‌ಗಳಲ್ಲಿ ಯಾವುದೇ ಅಹಿತಕರ ಘಟನೆಗಳು, ಅನಧಿಕೃತ ಚಟುವಟಿಕೆಗಳನ್ನು ನಡೆಸಿದ್ದಲ್ಲಿ/ನಡೆದಲ್ಲಿ ಶಾಶ್ವತವಾಗಿ ಜಿಮ್‌ಗಳನ್ನು ಮುಚ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸೂಕ್ತ ಕಟ್ಟೆಚ್ಚರಗಳನ್ನು ನೀಡಲು ವಿಶೇಷ ಕಾರ್ಯಾಚರಣೆ ನಡೆಸುವಂತೆ ಹಾಗೂ ಕಾಲಕಾಲಕ್ಕೆ ಕಾಲಕಾಲಕ್ಕೆ ಜಿಮ್ ಗಳಿಗೆ ಭೇಟಿ ನೀಡಿ ನಿಗಾವಹಿಸುವಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಪತ್ರ ಬರೆದಿರುತ್ತಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್