LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಶಿವಯೋಗದ ಮಹಾಪರ್ವತ ಶ್ರೀಮುರುಘೇಂದ್ರ ಶಿವಯೋಗಿಗಳು : ಡಾ.ಶಂಭುಲಿಂಗ ಹೆಗಡಾಳ

ಅಥಣಿ: ಅರಿವಿನ ತೃಪ್ತಿಗೆ ಅನುಭಾವವೇ ಆಶ್ರಯ ಎನ್ನುವದಕ್ಕೆ ಗಚ್ಚಿನಮಠದ ಮಹಾತಪಸ್ವಿ ಶ್ರೀಮುರುಘೇಂದ್ರ ಶಿವಯೋಗಿಗಳು ನಿಷ್ಠೆಯಿಂದ ಲಿಂಗಪೂಜಾ ನಿಷ್ಠರಾಗಿ ಅಭಿನವ ಅಲ್ಲಮರಾಗಿ ನಮಗೆಲ್ಲ ದಾರಿದೀಪವಾಗಿದ್ಧಾರೆ ಎಂದು ಧಾರವಾಡದ ಸಿ.ಎಸ್.ಐ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಶಂಭುಲಿAಗ ಹೆಗಡಾಳ ಹೇಳಿದರು.
 ಅವರು ಇಲ್ಲಿಯ ಗಚ್ಚಿನಮಠದಲ್ಲಿ  ಬುಧವಾರ ೧೫ರಂದು ಸಂಜೆ ೬  ಮಹಾತಪಸ್ವಿ ಶ್ರೀ ಮುರುಘೇಂದ್ರ ಶಿವಯೋಗಿಗಳ ೧೯೧ನೇ ಜಯಂತಿ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯ ಕಾರ್ಯಕ್ರಮ ಉದ್ಘಾಟನಾ ಸಮಾರಂಭದ ಮುಖ್ಯ ಉಪನ್ಯಾಸಕರಾಗಿ ಮಾತನಾಡುತಾ ಮಠದ ಪೀಠವನ್ನ ನಿರಾಕರಿಸಿ ತಮ್ಮ ಶಿಷ್ಯನನ್ನೆ ಮಠಾಧಿಪತಿಯನ್ನಾಗಿಸಿದ ನಾಡಿನ ಏಕೈಕ ಶಿವಯೋಗಿಗಳು ಅವರು ಎಂದು ಅಧಿಕಾರದ ಆಶೆ ಪಡಲಿಲ್ಲ ಸ್ವಾವಲಂಬಿ ಬದುಕು ಸಮಾಜಕ್ಕೆ ಸಮರ್ಪಿಸಿಕೊಂಡು ಭಕ್ತರ ಉದ್ದಾರವನ್ನ ಬಯಸಿದವರು ಮಠದಲ್ಲಿ ನಿರಂತರ ವಚನಾಧ್ಯಯನ,ಲಿಂಗಪೂಜೆ,ದಾಸೋಹ,ಅರಿವಿನ ಮನೆಯನ್ನಾಗಿಸಿದವರು ಶಿವಯೋಗದ ಮಹಾಪರ್ವತ ಅವರಾಗಿದ್ದರು ಅವರ ಗರಡಿಯಲ್ಲಿ ಬೆಳೆದ ಮಹನೀಯರು ಉನ್ನತ ಸ್ಥಾನ ಪಡೆದಿದ್ದಾರೆ ಅವರಲ್ಲಿ ವಚನಪಿತಾಮಹ ಫ.ಗು.ಹಳಕಟ್ಟಿ,ಹರ್ಡೇಕರ ಮಂಜಪ್ಪ,ಜಯದೇವ ಜಗದ್ಗುರು,ಮೃತುಂಜಯ ಸ್ವಾಮಿಜಿ,ಜಯವಿಭವ ಸ್ವಾಮಿಜಿ,ಬಿ.ಡಿ.ಜತ್ತಿ ಇನ್ನು ಹಲವು ಮಹನೀಯರು,ಪೂಜ್ಯರು ಇವರ ಆರ್ಶಿವಾದ ಮತ್ತು ಸೇವೆ ಫಲದಿಂದ ನಾಡಿನ ಉನ್ನತ ಮಠ,ಮಾನ್ಯಗಳಿಗೆ ದೇಶದ ಉನ್ನತ ಹುದ್ದೇ ಅಲಂಕರಿಸಿದ ಸಾಕ್ಷಿಗಳಿವೆ ಹೀಗಾಗಿ ಶಿವಯೋಗಿಗಳೆಂದರೆ ವರ್ತಮಾನದ ಉತ್ಸಾಹ ಎಂದರು.
 ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ಗಜಾನನ ಮಂಗಸೂಳಿ,ಗೀರಿಶ ಬುಟಾಳೆ ಮಾತನಾಡಿ ಶಿವಯೋಗದ ಶಿಖಿರ ಅಥಣಿ ಗಚ್ಚಿನಮಠವಾಗಿದೆ. ಶಿವಯೋಗಿಗಳು ಬಸವಣ್ಣನವರ ವಚನಗಳನ್ನ ತಮ್ಮ ಬದುಕಿನಲ್ಲಿ ಮೈಗೂಡಿಸಿಕೊಂಡು ಅದರಂತೆ ನಡೆದು ತೊರಿದ ಮಹಾತಪಸ್ವಿ ಅವರ ದಿವ್ಯಶಕ್ತಿ ಅಪಾರವಾಗಿದೆ ಇಲ್ಲಿ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿದವರಿಗೆ ಉತ್ತಮ ಫಲ ದೊರೆಯುತ್ತದೆ ಅದಕ್ಕಾಗಿ ತಾಯಂದಿರರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಪ್ರೀತಿ,ವಾತ್ಸಲ್ಯವನ್ನ ನೀಡಬೇಕು ಮಕ್ಕಳ ಬದುಕು ವಿಕಾಶವಾಗುತ್ತದೆ ಎಂದರು.
  ಹೊನವಾಡದ ಬಾಬುರಾವ ಮಹಾರಾಜರು ಮಾತನಾಡಿ ಬಸವಾದಿ ಶಿವಶರಣರ ತತ್ವಾದರ್ಶಗಳನ್ನ ಎಲ್ಲರೂ ಅನುಸರಿಸಬೇಕು ಮಾನಸಿಕ ನೆಮ್ಮದಿ ಹೊಂದಲು ಇಂತಹ ಆಧ್ಯಾತ್ಮಿಕ ಚಿಂತೆನಯಲ್ಲಿ ಪಾಲ್ಗೋಳುವದು ಅವಶ್ಯ ಇದರಿಂದ ನಮ್ಮ ಬದುಕಿನಲ್ಲಿ ಸರಳತೆ,ಆದರ್ಶ ಗುಣಗಳನ್ನ ಹೊಂದಿ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗೊಣ ಎಂದರು.
ಸಾನಿಧ್ಯವಹಿಸಿದ ಗಚ್ಚಿನಮಠದ ಶಿವಬಸವ ಸ್ವಾಮಿಜಿ ಮಾತನಾಡಿ ೧೨ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಸಾಮಾನ್ಯರಿಗೂ ಅನುಭಾವದ ದರ್ಶನ ನೀಡುವ ಜತೆಗೆ ಸಮಾನತೆಯನ್ನ ಸಾರಿದರು ಅದನ್ನೆ ಶಿವಯೋಗಿಗಳು ೨೧ನೇ ಶತಮಾನದಲ್ಲಿ ಸರ್ವಧರ್ಮಿಯರಿಗೆ ಮುಕ್ತ ಅವಕಾಶ ನೀಡಿದರು. ಅದಕ್ಕಾಗಿ ಗಚ್ಚಿನಮಠವು ಸರ್ವಧರ್ಮಿಯರು ಶಾಂತಿಯ ಮಂದಿರವಾಗಿದೆ ಹೀಗಾಗಿ ನಾಡಿನ ಅಸಂಖ್ಯಾತ ಭಕ್ತ ಸಮೂಹವನ್ನ ಹೊಂದಿದೆ ಎಂದರು.
ಬಾಲಶಿವಯೋಗಿಗೆ ನಾಮಕರಣ: ಶಿವಯೋಗಿಗಳ ಜಯಂತಿ ಅಂಗವಾಗಿ ಸುಮಂಗಲಿಯರಿAದ ಬಾಲಶಿವಯೋಗಿಗೆ ತೊಟ್ಟಿಲು ನಾಮಕರಣ ಜರುಗಿತು.
 ಈ ವೇಳೆ ತೆಲಸಂಗದ ವಿರೇಶ್ವರ ದೇವರು,ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮಿಜಿ,ಶಿವಾನಂದ ದಿವಾನಮಳ,ಪ್ರಕಾಶ ಮಹಾಜನ,ಶಿವಕುಮಾರ ಉಮರಾಣಿ,ಸುಭಾಷ ಕಬಾಡಗಿ,ಮಹಾಂತೇಶ ಉಕ್ಕಲಿ,ಸದಾಶಿವ ಪಾಟೀಲ,ಪಿ.ಆರ.ಉಮಚಗಿಮಠ,ಗಿರೀಶ ದಿವಾನಮಳ,ಶ್ರೀಶೈಲ ಹಳ್ಳದಮಳ,ಅಮರ ದುರ್ಗಣ್ಣವರ,ಸಂಜಯ ನಾಡಗೌಡ,ನಿತ್ಯಾನಂದ ಚರಂತಿಮಠ,ಸAಜು ಪಾರ್ಥನಹಳ್ಳಿ ಸೇರಿದಂತೆ ಮತ್ತಿತರರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್