LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಮಾಜಿ ಸಿಎಂ ಎಸ್ ಬಂಗಾರಪ್ಪನವರ ಕುರಿತು ಮನದಾಳ ಮಾತು ಬಿಚ್ಚಿಟ್ಟ ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ದಿವಂಗತ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ನನ್ನ ಜೀವನದ ಆದರ್ಶ ವ್ಯಕ್ತಿ ಎಂದು ಹೇಳುವ ಮೂಲಕ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಎಸ್ ಬಂಗಾರಪ್ಪನವರ ಕುರಿತು ಮನದಾಳದ ಮಾತು ಬಿಚ್ಚಿಟ್ಟರು.


ಹೌದು... ಇಂದು ಬೆಳಗಾವಿ ಸುವರ್ಣಸೌಧದಲ್ಲಿ ಬುಧವಾರ ಜರುಗಿದ ʻನಮ್ಮ‌ ಶಾಲೆ ನಮ್ಮ ಜವಾಬ್ದಾರಿʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ತಂದೆಯವರ ಜೊತೆ ನಾನು ಕೂಡಾ ರಾಜಕೀಯ ಪ್ರಾರಂಭ ಮಾಡಿದೇವು. ಆಗ ನಮಗೂ ಕೂಡಾ  ಎಸ್ ಬಂಗಾರಪ್ಪ ಅವರನ್ನು ನೋಡಬೇಕೆಂಬ ಕಾತುರ ಹೆಚ್ಚಾಗಿತ್ತು. ಅವರ ಡ್ರಸ್‌, ಅವರ ಕನ್ನಡಕ ಅವರ ಲೈಫ್‌ ಸ್ಟೈಟ್‌ ನೋಡವುದೇ ಒಂದು ಚೆಂದ ಎಂದು ಮಾಜಿ ಸಿಎಂ ದಿ. ಎಸ್ ಬಂಗಾರಪ್ಪನವರ ಕುರಿತು ಸಚಿವರು ತಮ್ಮದೆಯಾದ ದಾಟಿ ಮೂಲಕ ಹೊಗಳಿದರು.


ಕಲರ್ ಪುಲ್ ರಾಜಕಾರಣ, ಧೈರ್ಯಕ್ಕೆ ಎಸ್ ಬಂಗಾರಪ್ಪನವರಿಗೆ  ಎಸ್ ಬಂಗಾರಪ್ಪನವರೇ ಸಾಟಿ.  ನಾವು ರಾಜಕಾರಣಕ್ಕೆ ಕಾಲಿಟ್ಟಾಗ  ಎಸ್ ಬಂಗಾರಪ್ಪ ಅವರು ಕಲರ್ ಫುಲ್‌ ರಾಜಕಾರಣಿಯಾಗಿದ್ದರು. ನಾವು ಕೂಡಾ ಅವರ ತೋಟದ ಮನೆ ಕುಬಟೂರಿಗೆ ಹೋಗುತ್ತಿದ್ದೇವು. ಅಲ್ಲದೇ ರಾಜ್ಯದ ಅಭಿವೃದ್ಧಿಗೆ ಎಸ್.ಬಂಗಾರಪ್ಪ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.


ದಿ. ಎಸ್ ಬಂಗಾರಪ್ಪನವರು ನನ್ನ ಜೀವನದ ಆದರ್ಶ ವ್ಯಕ್ತಿ:  ಮಾಜಿ ಸಿಎಂ ಎಸ್‌ ಬಂಗರಪ್ಪನವರು ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡದೇ  ಗೆಲುವು ಸಾಧಿಸುತ್ತಿದ್ದರು. ನಾವು ಕೂಡಾ ಅವರನ್ನೇ ಆದರ್ಶವಾಗಿಟ್ಟುಕೊಂಡು ಅವರಂತೆ ಗೆಲ್ಲಬೇಕೆಂದು 2018ರ ಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗದೇ  ನಾನು ಕೂಡಾ ಚುನಾವಾಣೆಯಲ್ಲಿ ಗೆಲುವು ಸಾಧಿಸಿದೆ. ಅದರಂತೆ ಆಹಾರ ಪದ್ದತಿಯನ್ನು ಸಹ ಅವರಂತೆ ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಎಂದು ಹೇಳುವ ಮೂಲಕ ಎಸ್ ಬಂಗಾರಪ್ಪನವರ ಕುರಿತು ಮನದಾಳದ ಮಾತು ಬಿಚ್ಚಿಟ್ಟರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್