LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ಕ್ಷಿಪಣಿ ವಿಜ್ಞಾನಿ ರಾಮ್ ನಾರಾಯಣ್ ಅಗರ್ವಾಲ್ ಹೈದರಾಬಾದ್​ನಲ್ಲಿ ನಿಧನ

ಹೈದರಾಬಾದ್: ದೇಶದ ಖ್ಯಾತ ಕ್ಷಿಪಣಿ ವಿಜ್ಞಾನಿ ರಾಮ್ ನಾರಾಯಣ್ ಅಗರ್ವಾಲ್(83) ಹೈದರಾಬಾದ್​ನಲ್ಲಿ ನಿಧನರಾಗಿದ್ದಾರೆ. ಅವರು ಭಾರತದ ದೀರ್ಘ-ಶ್ರೇಣಿಯ ಬ್ಯಾಲಿಸ್ಟಿಕ್​ ಕ್ಷಿಪಣಿ ತಯಾರಿಕೆಯಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ. ರಾಮ್ ನಾರಾಯಣ್ ಅವರನ್ನು ಅಗ್ನಿ ಕ್ಷಿಪಣಿ ಪಿತಾಮಹ ಎಂದೇ ಕರೆಯುತ್ತಿದ್ದರು. ಪದ್ಮಭೂಷಣ ಪುರಸ್ಕೃತ ಆರ್​ಎನ್ ಅಗರ್ವಾಲ್ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೈದರಾಬಾದ್​ನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಡಿಆರ್​ಡಿಓ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದು, ಡಾ. ರಾಮ್ ನಾರಾಯಣ್ ಅಗರ್ವಾಲ್ ಅವರು ಅತ್ಯುತ್ತಮ ವೈಮಾನಿಕ ವಿಜ್ಞಾನಿ ಅವರ ನಿದನದಿಂದ ತುಂಬಾ ದುಃಖವಾಗಿದೆ. ಭಾರತದ ದೀರ್ಘ ವ್ಯಾಪ್ತಿಯ ಕ್ಷಿಪಣಿ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದಿದ್ದಾರೆ.

DRDO ತಯಾರಿಸಿದ ಅಗ್ನಿ ಕ್ಷಿಪಣಿಯನ್ನು ಭಾರತದ ಪರಮಾಣು ಸಾಮರ್ಥ್ಯದ ಬೆನ್ನೆಲುಬು ಎಂದು ಪರಿಗಣಿಸಲಾಗಿದೆ. ಇಲ್ಲಿಯವರೆಗೆ, ಅಗ್ನಿ ಕ್ಷಿಪಣಿಯ ಐದು ರೂಪಾಂತರಗಳನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಕ್ಷಿಪಣಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವಂತೆ ಮಾಡುವುದು ಇದರ ಉದ್ದೇಶವಾಗಿತ್ತು. ಅಗ್ನಿ 1- 700-800 ಕಿ.ಮೀ, ಅಗ್ನಿ 2 – 2000 ಕಿ.ಮೀಗಿಂತ ಹೆಚ್ಚು, ಅಗ್ನಿ 3 – 2500 ಕಿ.ಮೀಗಿಂತ ಹೆಚ್ಚು, ಅಗ್ನಿ 4 – 3500 ಕಿ.ಮೀಗಿಂತ ಹೆಚ್ಚು ಮತ್ತು ಅಗ್ನಿ 5 – 5000 ಕಿ.ಮೀಗಿಂತ ಹೆಚ್ಚು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

ಡಾ. ಅಗರ್ವಾಲ್ ಅವರು ಎಎಸ್​ಎಲ್​ ನಿರ್ದೇಶಕರಾಗಿ ನಿವೃತ್ತರಾದರು ಮತ್ತು ಎರಡು ದಶಕಗಳ ಕಾಲ ದೇಶದ ಮಹತ್ವಾಕಾಂಕ್ಷೆಯ ಅಗ್ನಿ ಕ್ಷಿಪಣಿ ಕಾರ್ಯಕ್ರಮವನ್ನು ಮನ್ನಡೆಸಿದರು. ವಿಜ್ಞಾನಿಯಾಗಿ ತಮ್ಮ ವೃತ್ತಿಜೀವನದಲ್ಲಿ, ಡಾ ಅಗರ್ವಾಲ್ ಡಾ ಅರುಣಾಚಲಂ ಮತ್ತು ಡಾ ಎಪಿಜೆ ಅಬ್ದುಲ್ ಕಲಾಂ ಅವರಂತಹ ವಿಜ್ಞಾನಿಗಳೊಂದಿಗೆ ಕೆಲಸ ಮಾಡಿದ್ದಾರೆ.

ಅಗ್ನಿ ಕ್ಷಿಪಣಿಯು 1983 ರಲ್ಲಿ ಕೇಂದ್ರ ಸರ್ಕಾರವು ಪ್ರಾರಂಭಿಸಿದ ಇಂಟಿಗ್ರೇಟೆಡ್ ಗೈಡೆಡ್ ಮಿಸೈಲ್ ಡೆವಲಪ್‌ಮೆಂಟ್ ಪ್ರೋಗ್ರಾಂ ಅಡಿಯಲ್ಲಿ ಅಭಿವೃದ್ಧಿಪಡಿಸಲು ಬಯಸಿದ ಐದು ಕ್ಷಿಪಣಿಗಳಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್