ಯರಗಟ್ಟಿ : ಪಟ್ಟಣದ ಖಾದಲಿಂಗೇಶ್ವರ ಗಜಾನನ ಯುವಕ ಮಂಡಳಿ ಹಾಗೂ ಭಗತ್ ಸಿಂಗ್ ಯುವಕ ಮಂಡಳಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಾಹಸಮಯ ೧ ನಿಮಿ?ದ ಮುಕ್ತ ಗಾಡಾ ಬಂಡಿ ಸ್ಪರ್ಧೆ’ಗೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ?ನಮ್ಮ ಗ್ರಾಮೀಣ ಸಂಸ್ಕೃತಿ, ಜಾನಪದ ಕ್ರೀಡೆ ಹಾಗೂ ರೈತರ ಶಕ್ತಿಯ ಸಂಕೇತವಾಗಿರುವ ಇಂತಹ ಗಾಡಾ ಬಂಡಿ ಸ್ಪರ್ಧೆಗಳು ಗ್ರಾಮೀಣ ಯುವಕರ ಉತ್ಸಾಹವನ್ನು ಹೆಚ್ಚಿಸುತ್ತವೆ ಎಂದರು.
?ಈ ರೋಮಾಂಚನಕಾರಿ ಸ್ಪರ್ಧೆಯನ್ನು ವೀಕ್ಷಿಸಲು ಆಗಮಿಸಿದ ಅಪಾರ ಸಂಖ್ಯೆಯ ಸಾರ್ವಜನಿಕರಿದ್ದರು.
ಈ ವೇಳ ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬನ್ನವರ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಪ. ಪಂ. ಸದಸ್ಯ ನಿಖಿಲ ಪಾಟೀಲ, ಶಿವಾನಂದ ಕರಿಗೊಣ್ಣವರ, ಮಾರುತಿ ಯರಝರ್ವಿ, ರಾಜು ಶೆಟ್ಟಿ, ಸುರೇಶ ಭಜಂತ್ರಿ, ಪ್ರಕಾಶ ವಾಲಿ, ವಿಠ್ಠಲಗೌಡ ದೇವರಡ್ಡಿ, ಮಹಾದೇವ ಯಡ್ರಾಂವಿ, ಬನಪ್ಪಗೌಡ ಪಾಟೀಲ, ವೆಂಕಣ್ಣಾ ಕಳ್ಳಿಗುದ್ದಿ, ಫಕ್ಕೀರಪ್ಪ ಬಸಿಡೋಣಿ, ತಮ್ಮಣ್ಣಾ ಕರಿಗೊಣ್ಣವರ, ಕೃಷ್ಣಾ ಕರಿಗಾರ, ಮಾಳಪ್ಪ ಕರಿಗಾರ, ಕೃಷ್ಣಾ ಹಿರೂರ, ರಮೇಶ ಕರಿಗಿಣ್ಣವರ ಗಜಾನನ ಯುವಕ ಮಂಡಳಿಯ ಸದಸ್ಯರು ಇದ್ದರು.