LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ಮಾರಿಷಸ್ ಪ್ರವಾಸ ಮುಗಿಸಿದ ಮೋದಿ ಮರಳಿ ಭಾರತಕ್ಕೆ

ನವದೆಹಲಿ: ಎರಡು ದಿನಗಳ ಪ್ರವಾಸಕ್ಕಾಗಿ ಮಾರಿಷಸ್​​ಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರ ರಾಜಧಾನಿ ನವದೆಹಲಿಗೆ ಮರಳಿದರು. ಮಾರಿಷನ್​ನ ರಾಷ್ಟ್ರೀಯ ದಿನದ ಮುಖ್ಯ ಅತಿಥಿಯಾಗಿ ಅವರು ಪಾಲ್ಗೊಂಡಿದ್ದರು. 2015ರಲ್ಲೂ ಕೂಡ ಆಹ್ವಾನದ ಮೇರೆಗೆ ಮೋದಿ ಮಾರಿಷಸ್‌ಗೆ ಭೇಟಿ ನೀಡಿದ್ದರು.


ಮಾರಿಷಸ್​ ಪ್ರಧಾನಿ, ಜನರು ಮತ್ತು ಮಾರಿಷಸ್​ ಸರ್ಕಾರದ ಪ್ರೀತಿಗಾಗಿ ಧನ್ಯವಾದ ಸಲ್ಲಿಸಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಹಾಗೆಯೇ ತಮ್ಮ ಪ್ರವಾಸದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.


ಈ ಪ್ರವಾಸದ ವೇಳೆ ಮೋದಿ ಮಾರಿಷಸ್​ನಲ್ಲಿರುವ ಭಾರತೀಯ ಸಮುದಾಯದವರು ಹಾಗೂ ಮಾರಿಷಸ್​ ನಾಯಕರ ಜೊತೆಗೆ ಸಭೆ ನಡೆಸಿದ್ದರು. ಅಲ್ಲಿನ ಗಂಗಾ ತಲಾವೊಗೆ ಭೇಟಿ ನೀಡಿ, ಮಹಾಕುಂಭದಿಂದ ತೆಗೆದುಕೊಂಡು ಹೋಗಿದ್ದ ಪವಿತ್ರ ಗಂಗಾ ಜಲವನ್ನು ಅದಕ್ಕೆ ಮಿಶ್ರಣ ಮಾಡಿದ್ದರು.


"ಮಾರಿಷಸ್​​ನ ಗಂಗಾ ತಲಾವೊನಲ್ಲಿ ತ್ರಿವೇಣಿ ಸಂಗಮದ ಪವಿತ್ರ ಜಲವನ್ನು ಅರ್ಪಿಸಿದೆ. ಜಗತ್ತಿನಲ್ಲಿರುವ ಲಕ್ಷಾಂತರ ಹಿಂದುಗಳಿಗೆ ತ್ರಿವೇಣಿ ಸಂಗಮದ ಜಲ ವಿಶೇಷವಾಗಿದೆ. ಈ ಬಾರಿಯ ಮಹಾ ಕುಂಭಮೇಳ ಮಾರಿಷಸ್​ ಸೇರಿದಂತೆ ಜಗತ್ತಿನ ಎಲ್ಲೆಡೆಯ ಯಾತ್ರಿಕರನ್ನು ಸೆಳೆದಿದೆ. ಈ ನೀರನ್ನು ಸೇರಿಸುವ ಮೂಲಕ ಗಂಗಾ, ಯಮುನಾ ಮತ್ತು ಸರಸ್ವತಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಉಳಿಯಲಿ" ಎಂದು ಮೋದಿ ಆಶಿಸಿದ್ದಾರೆ.


ಈ ಭೇಟಿಯಲ್ಲಿ ಪ್ರಧಾನಿಗೆ ಮಾರಿಷಸ್​ ದೇಶದ ಅತ್ಯುನ್ನತ ಗೌರವ 'ಗ್ರಾಂಡ್​ ಕಮಾಂಡರ್​ ಆಫ್​ ದಿ ಆರ್ಡರ್​ ಆಫ್​ ದ ಸ್ಟಾರ್​ ಆ್ಯಂಡ್​ ಕೀ ಆಫ್‌ದ ಇಂಡಿಯನ್​ ಓಷನ್​ ಪ್ರಶಸ್ತಿ' ನೀಡಿ ಪುರಸ್ಕರಿಸಲಾಯಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್