LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

‘ಗೋಯ್ ರಖೋನ್ನ ಯಾತ್ರೆ’ ಪೂರ್ವಭಾವಿ ಸಭೆಯಲ್ಲಿ ಮೃಣಾಲ್ ಹೆಬ್ಬಾಳಕರ್

ಗೋವಾ ಚುನಾವಣೆಗೆ ಕಾಂಗ್ರೆಸ್‌ನ ಜನಸಂಪರ್ಕ ಅಭಿಯಾನಕ್ಕೆ ಸಿದ್ಧತೆ

ಪಣಜಿ: ಗೋವಾ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ‘ಗೋಯ್ ರಖೋನ್ನ ಯಾತ್ರೆ’ಯ ಪೂರ್ವಭಾವಿ ಸಭೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯಿಂದ ಗೋವಾ ವಿಧಾನಸಭಾ ಚುನಾವಣೆಯ ಮಾಧ್ಯಮ ಹಾಗೂ ಪ್ರಚಾರ ಚಟುವಟಿಕೆಗಳ ಸಮನ್ವಯಕ್ಕಾಗಿ ನೇಮಕಗೊಂಡಿರುವ ಮೃಣಾಲ್ ಹೆಬ್ಬಾಳಕರ್ ಭಾಗವಹಿಸಿದರು.
ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ (GPCC) ಆಯೋಜಿಸಿರುವ ಈ 27 ದಿನಗಳ ಬೃಹತ್ ಜನಸಂಪರ್ಕ ಯಾತ್ರೆ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 18ರವರೆಗೆ ನಡೆಯಲಿದ್ದು, ರಾಜ್ಯದ ಎಲ್ಲ 40 ವಿಧಾನಸಭಾ ಕ್ಷೇತ್ರಗಳ ಮೂಲಕ 355ಕ್ಕೂ ಹೆಚ್ಚು ಕಿ.ಮೀ. ಸಂಚರಿಸಲಿದೆ.
ಗೋವಾದ ಅಸ್ಮಿತೆ, ಭೂಮಿ, ಪರಿಸರ, ನೈಸರ್ಗಿಕ ಸಂಪತ್ತು ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಜತೆಗೆ, ರಾಜ್ಯದ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಅವರ ಧ್ವನಿಯನ್ನು ಪ್ರತಿಧ್ವನಿಸುವ ಉದ್ದೇಶವನ್ನು ಯಾತ್ರೆ ಹೊಂದಿದೆ ಎಂದು ಕಾಂಗ್ರೆಸ್ ತಿಳಿಸಿದೆ. ಭೂಮಿ ಪರಿವರ್ತನೆ, ಪರಿಸರ ಸಂರಕ್ಷಣೆ, ನಿರುದ್ಯೋಗ, ಕಾನೂನು ಸುವ್ಯವಸ್ಥೆ, ಮಹಿಳಾ ಸುರಕ್ಷತೆ ಸೇರಿದಂತೆ ಹಲವು ವಿಷಯಗಳು ಯಾತ್ರೆಯ ಸಂದರ್ಭದಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿವೆ.
ಈ ಹಿನ್ನೆಲೆಯಲ್ಲಿ ಯಾತ್ರೆಯ ಸಿದ್ಧತೆಗಳು, ವಿವಿಧ ಹಂತಗಳ ಕಾರ್ಯಕ್ರಮಗಳ ಸಮನ್ವಯ, ಮಾಧ್ಯಮ ಹಾಗೂ ಪ್ರಚಾರ ಚಟುವಟಿಕೆಗಳ ಕುರಿತು ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಯಾತ್ರೆಯನ್ನು ಪರಿಣಾಮಕಾರಿಯಾಗಿ ತಲುಪಿಸುವುದು, ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ನೀಡುವುದು ಹಾಗೂ ಜನರೊಂದಿಗೆ ನೇರ ಸಂವಾದಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವ ಕುರಿತು ಚರ್ಚೆ ನಡೆಯಿತು.
ಸಭೆಯಲ್ಲಿ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ್ ಚೋಡಣ್ಕರ್, ಕಾರ್ಯಾಧ್ಯಕ್ಷ ಸುನಿಲ್ ಕವತಾಂಕರ, ರಾಷ್ಟ್ರೀಯ ಮಾಧ್ಯಮ ಸಂಯೋಜಕ ಮ್ಯಾಥ್ಯೂ ಆಂಥನಿ, ಸಂಯೋಜಕ ನಿಶಾಂತ್ ಆನಂದ್ ಹಾಗೂ ಕಾಂಗ್ರೆಸ್ ಮುಖಂಡ ವರದ್ ಮರ್ಡೋಲ್ಕರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಗೋವಾ ಕಾಂಗ್ರೆಸ್‌ನ ಮಾಧ್ಯಮ ಕಾರ್ಯತಂತ್ರದಲ್ಲಿ ಮೃಣಾಲ್‌ಗೆ ಪ್ರಮುಖ ಜವಾಬ್ದಾರಿ
ಗೋವಾ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಐಸಿಸಿ ಸೆಪ್ಟೆಂಬರ್ 14ರಂದು ಮಾಧ್ಯಮ ಹಾಗೂ ಪ್ರಚಾರ ಚಟುವಟಿಕೆಗಳ ಸಮನ್ವಯಕ್ಕಾಗಿ ಮೃಣಾಲ್ ಹೆಬ್ಬಾಳಕರ್ ಸೇರಿದಂತೆ ನಾಲ್ವರು ಸಂಯೋಜಕರನ್ನು ನೇಮಕ ಮಾಡಿತ್ತು. ಮೃಣಾಲ್ ಹೆಬ್ಬಾಳಕರ್, ಮ್ಯಾಥ್ಯೂ ಆಂಥನಿ, ನಿಶಾಂತ್ ಆನಂದ್ ಹಾಗೂ ಅಲಿ ಮೆಹ್ದಿ ಅವರನ್ನು ಈ ಜವಾಬ್ದಾರಿಗೆ ನೇಮಿಸಲಾಗಿತ್ತು.
ಎಐಸಿಸಿ ನೀಡಿರುವ ಜವಾಬ್ದಾರಿಯ ಭಾಗವಾಗಿ ಮೃಣಾಲ್ ಹೆಬ್ಬಾಳಕರ್ ಅವರು ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯೊಂದಿಗೆ ಸಮನ್ವಯ ಸಾಧಿಸಿ ಮಾಧ್ಯಮ ಮತ್ತು ಪ್ರಚಾರ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ‘ಗೋಯ್ ರಖೋನ್ನ ಯಾತ್ರೆ’ಯಂತಹ ರಾಜ್ಯವ್ಯಾಪಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರ ಭಾಗವಹಿಸುವಿಕೆ ಈ ಜವಾಬ್ದಾರಿಯ ಮುಂದುವರಿದ ಭಾಗವಾಗಿದೆ.
ಸೆಪ್ಟೆಂಬರ್ 22ರಂದು ಪಣಜಿಯ ಅಂಬೇಡ್ಕರ್ ಪಾರ್ಕ್‌ನಿಂದ ಯಾತ್ರೆ ಆರಂಭವಾಗಲಿದ್ದು, 27 ದಿನಗಳ ಅವಧಿಯಲ್ಲಿ ರಾಜ್ಯದ ಎಲ್ಲ 40 ವಿಧಾನಸಭಾ ಕ್ಷೇತ್ರಗಳನ್ನು ತಲುಪುವ ಕಾರ್ಯಕ್ರಮ ರೂಪಿಸಲಾಗಿದೆ.
ಗೋವಾ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಹಾಗೂ ಜನಸಂಪರ್ಕ ಚಟುವಟಿಕೆಗಳಿಗೆ ಒತ್ತು ನೀಡುತ್ತಿದ್ದು, ‘ಗೋಯ್ ರಖೋನ್ನ ಯಾತ್ರೆ’ಯನ್ನು ರಾಜ್ಯವ್ಯಾಪಿ ಅಭಿಯಾನವಾಗಿ ರೂಪಿಸಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST