LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ಮಧ್ಯ ಪ್ರದೇಶದಲ್ಲಿ ಹೊಸ ಮದ್ಯ ನೀತಿ; ಇನ್ಮೇಲೆ ಕಡಿಮೆ ಆಲ್ಕೋಹಾಲ್‌ ಬಾರ್‌!

ಭೋಪಾಲ್(ಮಧ್ಯ ಪ್ರದೇಶ)​: ಇದೇ ಮೊದಲ ಬಾರಿಗೆ ಮಧ್ಯ ಪ್ರದೇಶದಲ್ಲಿ ಕಡಿಮೆ ಆಲ್ಕೋಹಾಲ್‌ಯುಕ್ತ ಪಾನೀಯಗಳ ಬಾರ್​ಗಳು ತಲೆ ಎತ್ತಲು ಸಜ್ಜಾಗಿವೆ. ಹೊಸ ಆರ್ಥಿಕ ವರ್ಷದಿಂದ (ಏಪ್ರಿಲ್​ 1) ಹೊಸ ಮದ್ಯ ನೀತಿ ಅಡಿಯಲ್ಲಿ ಇವುಗಳನ್ನು ಕಾಣಬಹುದು. ಇದೇ ವೇಳೆ, 17 ಪವಿತ್ರ ನಗರಗಳೂ ಸೇರಿದಂತೆ 19 ಸ್ಥಳಗಳಲ್ಲಿ ಮದ್ಯ​ ಮಾರಾಟಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.


ಭಾನುವಾರ ಹೊಸ ಮದ್ಯ ನೀತಿಯನ್ನು ಬಿಡುಗಡೆ ಮಾಡಿದ ಮಧ್ಯ ಪ್ರದೇಶ ಸರ್ಕಾರ, ಕಡಿಮೆ ಆಲ್ಕೋಹಾಲ್​ಯುಕ್ತ ಪಾನೀಯಗಳ ಬಾರ್​ಗಳಲ್ಲಿ ಕೇವಲ ಬಿಯರ್​, ವೈನ್​ ಮತ್ತು ಗರಿಷ್ಠ ಶೇ.10ರಷ್ಟು ವಿ/ವಿ ಆಲ್ಕೋಹಾಲ್​ ಅಂಶ ಹೊಂದಿರುವ ರೆಡಿ-ಟು ಡ್ರಿಂಕ್​ ಆಲ್ಕೋಹಾಲಿಕ್​ ಪಾನೀಯಗಳನ್ನು ಮಾರಾಟ ಮಾಡಲು ಅನುಮತಿಸಿದೆ. ಇಂತಹ ಬಾರ್‌ಗಳಲ್ಲಿ ಹೆಚ್ಚಿನ ಆಲ್ಕೋಹಾಲ್​ಯುಕ್ತ ಮದ್ಯಗಳ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.


ಸದ್ಯ ಮಧ್ಯ ಪ್ರದೇಶದೆಲ್ಲೆಡೆ 460ರಿಂದ 470 ಲಿಕ್ಕರ್​, ಬಿಯರ್​ ಬಾರ್​ಗಳಿವೆ. ಈ ಹೊಸ ಬಾರ್​ಗಳಿಂದಾಗಿ ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


ಮದ್ಯ ಮಾರಾಟ ನಿರ್ಬಂಧದ ಅಡಿಯಲ್ಲಿ ಏಪ್ರಿಲ್​ 1ರಿಂದ 17 ಪವಿತ್ರ ನಗರಗಳು ಸೇರಿದಂತೆ 19 ಸ್ಥಳಗಳಲ್ಲಿ 47 ಮದ್ಯದಂಗಡಿಯನ್ನು ಮುಚ್ಚಲಾಗುವುದು. ಇವುಗಳಲ್ಲಿ ಭಾರತ ನಿರ್ಮಿತ ವಿದೇಶಿ ಮದ್ಯ ಮತ್ತು ಕಂಟ್ರಿ ಲಿಕ್ಕರ್​ ಅಂಗಡಿಗಳೂ ಇವೆ. ಉಜ್ಜೈನಿ, ಓಂಕಾರೇಶ್ವರ, ಮಹೇಶ್ವರ್​, ಮಂಡ್ಲೇಶ್ವರ್​, ಓರ್ಚಾ, ಮೈಹಾರ್, ಚಿತ್ರಕೂಟ, ದಾತಿಯಾ, ಅಮರಕಂಟಕ್ ಮತ್ತು ಸಲ್ಕನ್‌ಪುರನಂತಹ ಕೆಲವು ಪುಣ್ಯ ಕ್ಷೇತ್ರಗಳಲ್ಲಿ ಮಾರಾಟವನ್ನು ಬಂದ್​ ಮಾಡಲಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್