LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಟೀಸರ್ ನಲ್ಲಿ ಸ್ಪಾರ್ಕ್ ಸತ್ಯಕ್ಕಾಗಿ ನಿರಂಜನ್ ಸುಧೀಂದ್ರ ಹೋರಾಟ







     ರಿಯಲ್‌ ಸ್ಟಾರ್‌ ಉಪೇಂದ್ರ ಅಣ್ಣನ ಮಗ ನಿರಂಜನ್‌ ಸುಧೀಂದ್ರ  ನಾಯಕನಾಗಿ ನಟಿಸುತ್ತಿರುವ ಸಿನಿಮಾ 'ಸ್ಪಾರ್ಕ್‌' . ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ.      ನಿರಂಜನ್  ಪತ್ರಕರ್ತನಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಒಂದು ವಿಶಿಷ್ಟ ಪಾತ್ರದಲ್ಲಿ ನೆನಪಿರಲಿ ಪ್ರೇಮ್ ಕಾಣಿಸಿಕೊಂಡಿದ್ದಾರೆ. ಒಂದು ಹಗರಣದ ಸುತ್ತ ಸಾಗುವ ಕಥೆಯನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಸತ್ಯಕ್ಕಾಗಿ ನಿರಂಜನ್ ಹೋರಾಟ ಹೇಗಿದೆ ಅನ್ನೋದನ್ನು ಟೀಸರ್ ನಲ್ಲಿ ತೋರಿಸಲಾಗಿದೆ.


     ಸಮಾರಂಭದಲ್ಲಿ ನಿರಂಜನ್ ಸುಧೀಂದ್ರ ಮಾತನಾಡಿ "ಸ್ಪಾರ್ಕ್' ಎಲ್ಲರ ಮನಸ್ಸಿನಲ್ಲಿರುವ ಕಿಡಿ. ಏನೇ ಹಗರಣ, ಏನೇ ನಡೆದರು‌ ಮೊದಲು ಧ್ವನಿ ಎತ್ತುವುದು‌ ಪತ್ರಕರ್ತರು. ಅವರಿಗೆ ಸಿಗುವ ಗೌರವ ಹಾಗೂ ಗುರುತಿಸುವಿಗೆ ಮಿಸ್ ಆಗುತ್ತಿದೆ. ನಾನು ಚಿತ್ರದಲ್ಲಿ ಜರ್ನಲಿಸ್ಟ್ ಪಾತ್ರ ನಿರ್ವಹಿಸುತ್ತಿದ್ದೇನೆ. ಇದು ದೊಡ್ಡ ಜವಾಬ್ದಾರಿ. ಇದರಲ್ಲಿ ಬರವಣಿಗೆ ತುಂಬಾ ಸ್ಟ್ರಾಂಗ್ ಆಗಿದೆ. ಇದು ಹಗರಣ ಕಥಾಹಂದರ ಹೊಂದಿರುವ ಚಿತ್ರ. ಕಮರ್ಷಿಯಲ್ ಆಗಿ ಈ ಸಿನಿಮಾ ಮೂಡಿ ಬಂದಿದೆ" ಎಂದರು.


    ನೆನಪಿರಲಿ ಪ್ರೇಮ್ "ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸುರಸುಂದರಾಗ ಹೀರೋಗಳು ಇದ್ದಾರೆ. ಅದಕ್ಕೆ ಹೊಸ ಸೇರ್ಪಡೆ ನಿರಂಜನ್. ಗರಿಮ ಮೇಡಂ  ನಿಮಗೆ ಕನ್ನಡದ ಮೇಲೆ ಇರುವ ಅಭಿಮಾನದಿಂದ ಕನ್ನಡ ಚಿತ್ರ ಮಾಡಿದ್ದೀರ. ಧನ್ಯವಾದ. ನಾನು ಇಂಡಸ್ಟ್ರಿಗೆ ಮಾಸ್ ಹೀರೋ ಅಗಬೇಕು ಎಂದು ಬಂದೆ. ಆದರೆ ಬ್ಯಾಕ್ ಟು ಬ್ಯಾಕ್ ಲವ್ ಸ್ಟೋರಿ ಸಿನಿಮಾ ಮಾಡಿ ಅದು ಹಿಟ್ ಆಗಿ ನನ್ನ ಕ್ಲಾಸ್ ಹೀರೋ ಎಂದು ಪ್ರಿಂಟ್ ಹೊಡೆದು ಇಟ್ಟರು. ನನ್ನಲ್ಲಿರುವ ಸ್ಪಾರ್ಕ್ ನೋಡಿ ಮಹಾಂತೇಶ್ ನನಗೆ ಮಾಸ್ ಕ್ಯಾರೆಕ್ಟರ್ ಕೊಟ್ಟಿದ್ದಾರೆ" ಎಂದರು.


     ನಿರ್ದೇಶಕ ಮಹಾಂತೇಶ್ "ಪ್ರೇಮ್ ಸರ್ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ಅವರ ಡೆಡಿಕೇಷನ್, ಪಾತ್ರಕ್ಕೆ ತಯಾರಾಗುವ ರೀತಿ ನೋಡಿ ನಾನು ಸ್ಫೂರ್ತಿ ಪಡೆದುಕೊಂಡೆ‌. ನಿರಂಜನ್ ಅವರು ತುಂಬಾ ಹಂಬಲ್ ನಟ. ಸ್ಪಾರ್ಕ್ ಸಿನಿಮಾ ಒಂದು ಸ್ಕ್ಯಾಮ್ ಬಗ್ಗೆ ಹೇಳೋದಿಕ್ಕೆ ಹೊರಟಿರುವ ಚಿತ್ರ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಸಚಿನ್ ಬಸ್ರೂರ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ" ಎಂದರು.

     ಚಿತ್ರದಲ್ಲಿ  ನಾಯಕಿಯಾಗಿ ರಚನಾ ಇಂದರ್ ಅಭಿನಯಿಸುತ್ತಿದ್ದಾರೆ. ರಮೇಶ್ ಇಂದಿರಾ, ಧರ್ಮಣ್ಣ ಕಡೂರು, ಸಾಧು ಕೋಕಿಲಾ, ಬಲರಾಜವಾಡಿ, ನರೇಂದ್ರ ಬಾಬು, ಗಣೇಶ್ ರಾವ್ ಇತರರು ತಾರಾಬಳಗದಲ್ಲಿದ್ದಾರೆ.


      ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸ್ಪಾರ್ಕ್‌ ಚಿತ್ರ ಡಾ.ಗರಿಮಾ ಅವಿನಾಶ್ ವಸಿಷ್ಠ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸ್ವಾಮಿ ಜೆ ಗೌಡ ಛಾಯಾಗ್ರಹಣ, ಸಚಿನ್ ಬಸ್ರೂರ್ ಸಂಗೀತ‌ ನಿರ್ದೇಶನ, ಮಧು ಸಂಕಲನವಿದೆ.



























Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್