LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

Online Liquor Delivery

ಬೆಂಗಳೂರು,

Online Liquor Delivery: ಮದ್ಯಪ್ರಿಯರಿಗೆ ಗುಡ್ ನ್ಯೂಸ್; ಮನೆಯಲ್ಲಿ ಪಾರ್ಟಿ ಮಾಡುವ ವೇಳೆ ಎಣ್ಣೆ ಖಾಲಿಯಾದ್ರೆ ಚಿಂತೆ ಬೇಡ! ರಾಜ್ಯದಲ್ಲಿ ಶೀಘ್ರ ಆನ್‌ಲೈನ್ ಎಣ್ಣೆ ಮಾರಾಟ?

ಯಾರೇ ಆಗಲಿ ಮನೆಯಲ್ಲಿ ಪಾರ್ಟಿ (Party) ಮಾಡುವಾಗ ಎಣ್ಣೆ ಶಾರ್ಟೇಜ್​ (Liquor Shortage) ಆಗೇ ಆಗುತ್ತೆ.! ಆಗ ಬೇರೆ ವಿಧಿಯಿಲ್ಲದೆ ಬಂಡ್‌ ಧೈರ್ಯ ಮಾಡಿ, ಮದ್ಯ ಕುಡಿದೇ ಎಣೆ ತರಲು ಗಾಡಿ ಓಡಿಸಿಕೊಂಡು ಹೋಗುತ್ತಾರೆ. ಆಗ ಪೊಲೀಸ್​ ಹತ್ತಿರ ಸಿಕ್ಕಿಕೊಂಡ್ರೆ ಕಥೆ ಮುಗಿಯಿತು. ಆದರೆ, ಇಂತಹ ಪಜೀತಿಗೆ ಸರ್ಕಾರವೇ ಪರಿಹಾರ ಕಂಡುಹಿಡಿದಿದೆ.!

ಬೆಂಗಳೂರಿನ (Bangalore) ಮದ್ಯಪ್ರಿಯರಿಗೆ (Alcohol lovers) ಇಲ್ಲಿದೆ ಒಂದು ಭರ್ಜರಿ ಸಿಹಿ ಸುದ್ದಿ! ಇನ್ಮುಂದೆ ನಿಮ್ಮ ನೆಚ್ಚಿನ ಬ್ರ್ಯಾಂಡ್ ಎಣ್ಣೆ ಖರೀದಿಸಲು ಟ್ರಾಫಿಕ್‌ನಲ್ಲಿ ಸಿಲುಕಿ ವೈನ್ ಶಾಪ್ (Wine Shop) ಮುಂದೆ ಕ್ಯೂ ನಿಲ್ಲುವ ಅವಶ್ಯಕತೆಯಿಲ್ಲ. ಯಾಕಂದ್ರೆ, ಕೇವಲ ಒಂದು ಕ್ಲಿಕ್ ಮೂಲಕ ನಿಮ್ಮ ಮನೆ ಬಾಗಿಲಿಗೇ ಬರಲಿದೆ ಎಣ್ಣೆ ಭಾಗ್ಯ...!

ಕರ್ನಾಟಕದ ಸಂಪನ್ಮೂಲ ಕ್ರೋಢೀಕರಣ ಸಮಿತಿಯು ಅಬಕಾರಿ ವಲಯದ ವ್ಯಾಪಕ ಸುಧಾರಣೆಗಳ ಭಾಗವಾಗಿ ರಾಜ್ಯದಲ್ಲಿ ಆನ್‌ಲೈನ್ ಮದ್ಯ ಮಾರಾಟಕ್ಕೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.

ಏತನ್ಮಧ್ಯೆ, ಈಗಾಗಲೇ ಕೆಲವು ಭಾರತದ ರಾಜ್ಯಗಳಲ್ಲಿ ಮದ್ಯ ಮಾರಾಟವನ್ನು ಕಟ್ಟನಿಟ್ಟಾಗಿ ಜಾರಿ ಮಾಡಲಾಗಿದೆ. ಅದನ್ನು ಆಧರಿಸಿಯೇ ಈ ವರದಿಯನ್ನು ಸಿದ್ಧಪಡಿಸಲಾಗಿದ್ದು, ಈ ಮೂಲಕ ರಾಜ್ಯದಲ್ಲಿ ಅಬಕಾರಿ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕವಾಗಿ ಹಾಗೂ ಆಡಳಿತಾತ್ಮಕವಾಗಿಯೂ ನಿರ್ವಹಿಸಬಹುದಾದ ವಿಸ್ತರಣೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸಮಿತಿ ಹೇಳಿದೆ.

news_1777041314_0_576.webp

 

1) ಪ್ರತಿಯೊಂದು ವಹಿವಾಟಿನ ಡಿಜಿಟಲ್ ದಾಖಲೆ ಇರುವುದರಿಂದ ತೆರಿಗೆ ವಂಚನೆ ಮತ್ತು ಅಕ್ರಮ ಸಾಗಾಟವನ್ನು ತಡೆಯಬಹುದು.

2) ಇದರೊಂದಿಗೆ, ನಗರ ಪ್ರದೇಶಗಳಲ್ಲಿ ಮದ್ಯದ ಅಂಗಡಿಗಳ ಮುಂದೆ ಉಂಟಾಗುವ ದಟ್ಟಣೆಯನ್ನು ಕಡಿಮೆ ಮಾಡಲು ಇದು ಸಹಕಾರಿ.

3) ಜೊತೆಗೆ ಅನಧಿಕೃತ ಸರಬರಾಜು ಜಾಲಗಳ ಮೇಲಿನ ಅವಲಂಬನೆ ಕೂಡ ಕಡಿಮೆಯಾಗುತ್ತದೆ.

4) ಮುಂದುವರೆದು, ಆನ್‌ಲೈನ್ ಆ್ಯಪ್​ ಮೂಲಕ ಮದ್ಯ ಆರ್ಡರ್ ಮಾಡುವಾಗ ಮತ್ತು ವಿತರಿಸುವಾಗ ಗುರುತಿನ ಚೀಟಿ ಪರಿಶೀಲನೆ ನಡೆಸುವುದರಿಂದ, ಅಪ್ರಾಪ್ತ ವಯಸ್ಕರಿಗೆ ಎಣ್ಣೆ ಸಿಗದಂತೆ ತಡೆಯಲು ಮತ್ತು ಮಿತಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಸವಾಲುಗಳೇನು?

ಅಪ್ರಾಪ್ತ ವಯಸ್ಕರಿಗೆ ಸುಲಭವಾಗಿ ಎಣ್ಣೆ ಲಭ್ಯವಾಗುವ ಸಾಧ್ಯತೆ. ಇದರೊಂದಿಗೆ, ಸೌಕರ್ಯ ಹೆಚ್ಚಾದಂತೆ ಮದ್ಯದ ಬಳಕೆಯೂ ಹೆಚ್ಚಾಗುವ ಭೀತಿ. ಜೊತೆಗೆ ಅನಧಿಕೃತ ಮಧ್ಯವರ್ತಿಗಳಿಗೆ ಮಾರಾಟಕ್ಕೆ ಸುಲಭವಾಗಿ ಪ್ರವೇಶ ಸಾಧ್ಯತೆ.

ಆದ್ದರಿಂದ, ಈ ಯೋಜನೆಯನ್ನು ಅತ್ಯಂತ ಎಚ್ಚರಿಕೆಯಿಂದ ವಿನ್ಯಾಸಗೊಳಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ. ಅದರಂತೆ, ಕೇವಲ ಪರವಾನಗಿ ಪಡೆದ ಮಾರಾಟಗಾರರು ಅಥವಾ ಅಧಿಕೃತ ವೇದಿಕೆಗಳಿಗೆ ಮಾತ್ರವೇ ಎಣ್ಣೆ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ತಿಳಿಸಲಾಗಿದ್ದು, ಡಿಜಿಟಲ್ ಪಾವತಿ, ವಯಸ್ಸಿನ ದೃಢೀಕರಣ, ವಿತರಣಾ ದೃಢೀಕರಣ ಮತ್ತು ಪ್ರಮಾಣದ ಮಿತಿಗಳನ್ನು ಅಬಕಾರಿ ವ್ಯವಸ್ಥೆಯೊಂದಿಗೆ ಜೋಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಏತನ್ಮಧ್ಯೆ, ಈ ಹಿಂದೆಯೂ ಇಂತಹ ಪ್ರಸ್ತಾವನೆಗಳಿಗೆ ವಿರೋಧ ವ್ಯಕ್ತವಾಗಿತ್ತು. ಕೆಲ ತಿಂಗಳ ಹಿಂದೆ ಇದೇ ಸಮಿತಿಯು ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಬೇಕು ಎಂದಾಗ, ಅಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಸಾಮಾಜಿಕ ಪರಿಣಾಮಗಳ ಆತಂಕದಿಂದಾಗಿ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು. ಆದರೆ, ಮತ್ತೊಮ್ಮೆ ಸಮಿತಿಯು ವರದಿ ಸಲ್ಲಿಸಿರುವುದರಿಂದ ಹೊಸ ಚರ್ಚೆಗೆ ನಾಂದಿ ಹಾಡುವ ಸಾಧ್ಯತೆಯಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್