LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ತೆರೆಗೆ ಬರಲಿದೆ ಆಪರೇಷನ್ ಡಿ









ತಿರುಮಲೇಶ್ ವಿ ನಿರ್ದೇಶನದ ಅದ್ವಿತ ಫಿಲಂ ಫ್ಯಾಕ್ಟರಿ  ಹಾಗೂ ಮಸ್ಕ್ಯುಲರ್ ಗ್ರೂಪ್ ಲಾಂಛನದಲ್ಲಿ ಭಾರ್ಗವಿ ಮುರಳಿ ಹಾಗೂ ರಂಗನಾಥ್ ಬಿ ನಿರ್ಮಿಸಿರುವ 'ಆಪರೇಶನ್ ಡಿ' ಚಿತ್ರವನ್ನು 2026 ಫೆಬ್ರವರಿ ಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದಾರೆ.

      ಹಿಂದೆ ಬಿಡುಗಡೆಗೊಂಡಿದ್ದ ಟೀಸರ್ ಗೆ ಆಕ್ಷನ್ ಪ್ರಿನ್ಸ್ ದ್ರುವಸರ್ಜಾ ಅವರು ಜೊತೆಗೆ ನಿರ್ದೇಶಕ ಶ್ರೀನಿ, ನಟ ಸುದರ್ಶನ್ ರಂಗಪ್ರಸಾದ್ ಹಾಗೂ ಸಂಗೀತ ಭಟ್ ಸುದರ್ಶನ್ ತಮ್ಮ ಕಂಠದೊಂದಿಗೆ ಸಾಥ್ ನೀಡಿದ್ದರು

     'ಆಪರೇಷನ್ ಡಿ' ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿ ಕಥೆ ಆಧರಿಸಿದ ಚಿತ್ರ ಬಹುತೇಕ ರಂಗಭೂಮಿ ಕಲಾವಿದರೆ ಇದರಲ್ಲಿ ಅಭಿನಯಿಸಿದ್ದಾರೆ ಎನ್ನುವುದು ವಿಶೇಷ. ಚಿತ್ರದಲ್ಲಿ ನಾಲ್ಕು ಹಾಡುಗಳಿದೆ, ವೇದಿಕ ಕೆಂಪಗಿರಿ ತಿರುಮಲೇಶ್ ಹಾಡನ್ನು ಬರೆದಿದ್ದಾರೆ , ಭಗೀರ, ಡೆವಿಲ್, ಮಾರ್ಕ್ ಖ್ಯಾತಿಯ ಗಾಯಕ ಅನಿರುದ್ಧಶಾಸ್ತ್ರಿ ಅವರ ಮೊದಲ ಆಲ್ಬಮ್, ಈ ಸಿನಿಮಾದ ಮೂಲಕ ಅವರು ಒಂದೇ ಸಿನಿಮಾದಲ್ಲಿ 4 ಹಾಡನ್ನು ಹಾಡಿದ್ದಾರೆ ಇವರ ಜೊತೆ ಪೃಥ್ವಿಭಟ್ ಹಾಗೂ ವೇದಿಕ ಧ್ವನಿಗೂಡಿಸಿದ್ದಾರೆ

ವೇದಿಕ ಹಾಗೂ ಸಂತೋಷ್ ಆರ್ಮುಗಮ್ ಸಂಗೀತ ನಿರ್ದೇಶನ ಹಾಗೂ ರಾಹುಲ್ ಅರ್ಜ್ ಕಲಾ ಬಿಜಿಎಂ  ನೀಡಿದ್ದಾರೆ ,  ಭಾರ್ಗವಿ ಮುರಳಿ, ರಂಗನಾಥ್ ಹಾಗೂ ಸುರೇಶ್ ಅವರು ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ

     ಚಿತ್ರದಲ್ಲಿ ರುದ್ರೇಶ್ ಬೂದನೂರು, ಸುಹಾಸ್ ಆತ್ರೇಯಸ್, ವಿನೋದ್ ದೇವ್, ಸ್ನೇಹ ಭಟ್, ಇಂಚರ ಭರತ್ ರಾಜ್, ಮಹೇಶ್ ಎಸ್ ಕಲಿ, ಶ್ರೀಧರ್, ಪೃಥ್ವಿ ಬನವಾಸಿ, ರೂಪ,  ಆಶಾ, ಧನಲಕ್ಷ್ಮೀ, ಶಿವಾನಂದ್,  ಸಂಚಯ ನಾಗರಾಜ್, ವೆಂಕಟಾಚಲ, ಸೂರ್ಯವಂಶಿ, ಶಿವಮಂಜು, ನಂಜಪ್ಪ ಎಸ್ ದೊಡ್ಡಮದುರೆ, ಶಿವಲಿಂಗು, ಕ್ರೇಜಿ ನಾಗರಾಜ್, ಜೂ.ನರಸಿಂಹರಾಜು ಹಾಗೂ ಮುಂತಾದವರು ನಟಿಸಿದ್ದಾರೆ.

     ಸಂಕಲನ ವಿಕ್ರಮ್ ಶ್ರೀಧರ್, ಛಾಯಾಗ್ರಾಹಣ ಕಾರ್ತಿಕ್ ಪ್ರಸಾದ್,

ಸಂಭಾಷಣೆ ರಾಜರವಿಶಂಕರ್, ನೃತ್ಯನಿರ್ದೇಶನ  ಜೈಹರಿಪ್ರಸಾದ್, ಕಲಾ ನಿರ್ದೇಶನ ತರ್ಮಾಕೋಲ್ ಶ್ರೀನಿವಾಸ್. "ಫೆಬ್ರವರಿ ಮೊದಲ ವಾರ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಯುತ್ತಿದೆ" ಎಂದು ನಿರ್ದೇಶಕ ತಿರುಮಲೇಶ್ ವಿ ತಿಳಿಸಿದ್ದಾರೆ































Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್