LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಸಂಘಟನಾ ಶಕ್ತಿಯೇ ಸಂಘದ ಜೀವಾಳ: ಈಶ್ವರ ಶೆಟ್ಟರ


ಮಹಾಲಿಂಗಪುರ,ಜು,೨೦ : ಕರ್ನಾಟಕ ಕಾರ್ಮಿಕ ಪತ್ರಕರ್ತರ ಸಂಘ ಶತಮಾನದ ಸಂಭ್ರಮದ ಸಮೀಪದಲ್ಲಿದೆ. ಸಂಘಟನಾ ಶಕ್ತಿಯೇ ಇದರ ಜೀವಾಳ ಎಂದು ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಈಶ್ವರ ಶೆಟ್ಟರ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಹಾಲಿಂಗಪುರ ಘಟಕದ ವತಿಯಿಂದ ಪುರಸಭಾ ಸಭಾಭವನದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಬಾಗಲಕೋಟೆ ಕಾನಿಪ ಸಂಘದ ಇತಿಹಾಸದಲ್ಲಿ ಇದುವರೆಗೂ ಒಂದೇ ಒಂದು ಚುನಾವಣೆ ನಡೆದಿಲ್ಲ, ಪ್ರತಿ ಬಾರಿಯೂ ಅವಿರೋಧ ಆಯ್ಕೆಯೇ ಆಗಿದೆ, ಇದು ರಾಜ್ಯದ ಎಲ್ಲ ಸಂಘಗಳಿಗೆ ಮಾದರಿ. ಭಿನ್ನಾಭಿಪ್ರಾಯಗಳು ಆರೋಗ್ಯಕರವಾಗಿರಬೇಕು, ಇನ್ನೊಬ್ಬರ ಚಾರಿ ವಧೆ, ಗುಂಪುಗಾರಿಕೆ ಮಾಡಿದರೆ ಸಮಾಜಕ್ಕೆ ನಾವೇನು ಸಂದೇಶ ಕೊಡಲು ಸಾಧ್ಯ, ಆದ್ದರಿಂದ ಭಿನ್ನಾಭಿಪ್ರಾಯ, ಪೈಪೋಟಿಗಳಿದ್ದರೆ ಅವು ಸಮಾಜಮುಖಿ ಮತ್ತು ಸುಧಾರಣೆಯ ವಿಚಾರದಲ್ಲಿರಲಿ ಎಂದರು.
ಸಂಘದ ಜಿಲ್ಲಾ ಅಧ್ಯಕ್ಷ ಮಹೇಶ ಅಂಗಡಿ ಮಾತನಾಡಿ, ಸಂಘದ ಸದಸ್ಯತ್ವ ಬ್ಲಾಕ್ ಮೇಲ್ ಗೆ ಉಪಯೋಗವಾಗಬಾರದು, ಸಮಾಜಮುಖಿ ಕೆಲಸಗಳಿಗೆ ಉಪಯೋಗವಾಗಬೇಕು ಎಂದರು.
ಇಟಗಿ ಮಹೇಶ್ವರ ಪಪೂ ಕಾಲೇಜು ಪ್ರಾಚಾರ್ಯ ಗಂಗಾಧರ ಅವಟೇರ ಮಾತನಾಡಿ, ಪತ್ರಕರ್ತರು ತಮ್ಮ ಭ್ರಮೆಗಳನ್ನು ಸಾರ್ವಜನಿಕರ ಮೇಲೆ ಹೇರಬಾರದು, ಪತ್ರಕರ್ತನಿಗೆ ಕೋಪವಿರಬೇಕು ಆದರೆ ಈರ್ಷೆ, ದ್ವೇಷ, ಮತ್ಸರ ಇರಬಾರದು, ಲೋಕಾನುಭವದಿಂದ ವ್ಯಕ್ತಿತ್ವ ಗಟ್ಟಿಯಾಗುತ್ತದೆ, ವರ್ಷ ಬಿಡಿ ಸಮಾಜ ಸೇವೆಯನ್ನು ಮಾಡುವ ಪತ್ರಕರ್ತರ ದಿನಾಚರಣೆಯನ್ನು ಸಮಾಜವೇ ಮಾಡಬೇಕು ಎಂದರು.
ಸಿಪಿಐ ಆರ್.ಆರ್. ಪಾಟೀಲ ಮಾತನಾಡಿ , ಸಾಹಿತಿ ಭಾವಜೀವಿಯಾಗಿರುತ್ತಾನೆ. ಸಮಾಜ ಪ್ರಜಾಪ್ರಭುತ್ವ ಉಳಿವಿಗೆ ಪತ್ರಕರ್ತ ಒಬ್ಬ ಒಳ್ಳೆಯ ಸಾಹಿತಿಯಾಗಬೇಕು, ಪತ್ರಕರ್ತರ ಜ್ಞಾನ ಮತ್ತು ದುಡಿಮೆಗೆ ತಕ್ಕ ಫಲ ಸಿಗುತ್ತಿಲ್ಲ ಸಮಾಜ ಸರ್ಕಾರ ಅವರ ಬೆನ್ನಿಗೆ ನಿಲ್ಲಬೇಕು ಎಂದರು.
ಅಳಿಯ ಘಟಕದ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಸಭಾ ಮುಖ್ಯಾಧಿಕಾರಿ ಎನ್.ಎ.ಲಮಾಣಿ, ಕಾನಿಪ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ ಮೋರೆ, ಕಾರ್ಯದರ್ಶಿ ಮೀರಾ ತಟಗಾರ ಇದ್ದರು. 
ಮಹಾಲಕ್ಷ್ಮಿ ಗುಳದಳ್ಳಿ ಪ್ರಾರ್ಥಿಸಿ, ರಾಜೇಂದ್ರ ನಾವಿ ಸ್ವಾಗತಿಸಿ, ಜಯರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ನಾರನಗೌಡ ಉತ್ತಂಗಿ ನಿರೂಪಿಸಿ, ಇಲಾಹಿ ಜಮಖಂಡಿ ವಂದಿಸಿದರು.
ಸಂಘದ ಸದಸ್ಯರಾದ ಎಸ್.ಎಸ್.ಈಶ್ವರಪ್ಪಗೋಳ, ಮಹೇಶ ಆರಿ, ಹನಮಂತ ನಾವಿ, ಹನೀಫ್ ಚಿಕ್ಕೋಡಿ, ಲಕ್ಷ್ಮಣ ಕಿಶೋರಿ ಇದ್ದರು.
ಗಂಗಾಧರ ಅವಟೇರ ಅವರ ಮಾರ್ಗದರ್ಶನದಂತೆ ಪತ್ರಕರ್ತರಿಗಾಗಿ ದತ್ತಿನಿಧಿ ಸ್ಥಾಪಿಸಲು ಮುಖಂಡರಾದ ಜಿ.ಎಸ್.ಗೊಂಬಿ ೨೦ ಸಾವಿರ, ಬರಗಿ, ಚನ್ನಬಸು ಹುರಕಡ್ಲಿ, ಸಂಗಪ್ಪ ಹಲ್ಲಿ ತಲಾ ಹತ್ತು ಸಾವಿರ ರೂ. ಒಟ್ಟು ೫೦ ಸಾವಿರ ನೀಡುವುದಾಗಿ ಘೋಷಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್