LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ನಮ್ಮ ಗಂಡು ನರೇಂದ್ರ ಮೋದಿ, ಕಾಂಗ್ರೆಸ್​ನಲ್ಲಿ ಮದುವೆ ಗಂಡು ಇಲ್ಲ: ಸಿಟಿ ರವಿ

ವಿಜಯಪುರ, ಏ.16: ದೇಶಕ್ಕೆ ಮೋದಿ, ವಿಜಯಪುರಕ್ಕೆ ಜಿಗಜಿಣಗಿ ಎಂದು ಸಿಟಿ ರವಿ ಹೇಳಿದ್ದಾರೆ. ವಿಜಯಪುರ  ನಗರದ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ಇಂದು(ಏ.16) ಹಮ್ಮಿಕೊಂಡಿದ್ದ ಬಿಜೆಪಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ ನಮ್ಮದು ಜನತಾದಳದ್ದು ಹೊಸ ಸಂಬಂಧ ಅಲ್ಲ, ಇದು ಹಳೆಯ ಸಂಬಂಧ. 1977 ರ ತುರ್ತು ಪರಿಸ್ಥಿತಿಯಲ್ಲಿ ಹಾಗೂ ರಾಮಕೃಷ್ಟ ಹೆಗಡೆ ಸಿಎಂ ಆಗಿದ್ದಾಗ ಕೂಡ ಬಿಜೆಪಿ ಬೆಂಬಲ ನೀಡಿದ್ದೇವೆ. ಹಿಂದೆ 20-20 ಮ್ಯಾಚ್ ಇದ್ದಾಗ ಕುಮಾರಸ್ವಾಮಿ ಸಿಎಂ ಮಾಡಿದ್ದೇವೆ. ದೇವೇಗೌಡರು ನಮಗೆ ಮಂಡಿ ನೋವಿದೆ. ಆದರೆ, ಬುದ್ದಿ ಇದೆ, ಹಾಗಾಗಿ ಮೋದಿ ಅವರಿಗೆ ಬೆಂಬಲ ನೀಡಿದ್ದೇವೆ ಎಂದಿದ್ದಾರೆ.

ಇದೇ ವೇಳೆ ನೆರೆದ ಜನರ ಎರಡೂ‌ ಕೈ ಮುಷ್ಟಿ ಕಟ್ಟಿಸಿ ಭಾರತ ಮಾತಾಕಿ, ಹರ ಹರ ಮಹಾದೇವ, ಬಸವಣ್ಣ, ಕನಕದಾಸ, ವಾಲ್ಮೀಕಿ ಅಂಬೇಡ್ಕರ್ ಪರ ಜಯ ಘೋಷ ಹಾಕಿಸಿದರು. ‘ಕಾಂಗ್ರೆಸ್​ನಲ್ಲಿ ಮದುವೆ ಗಂಡು ಇಲ್ಲ, ಯಾರು ಗಂಡು ಎಂದು ಅವರಿಗೆ ಗೊತ್ತಿಲ್ಲ. ಮದುವೆಗೆ ಗಂಡೇ ಇಲ್ಲದೇ ಮದುವೆ ಹೇಗೆ?, ರಾಹುಲ್ ಗಾಂಧಿ ಮದುವೆ ಗಂಡು ಎಂದರೆ ಓಡಿ ಹೋಗುತ್ತಾರೆ. ನಮ್ಮ ಗಂಡು ನರೇಂದ್ರ ಮೋದಿ, ಹತ್ತಾರು ಯೋಜನೆ‌ ಮಾಡಿರೋ ಗಂಡು‌ ನಮ್ಮ ಮೋದಿ. ಹತ್ತು‌‌ ಕೆಜಿ ಅಕ್ಕಿ ಎಲ್ಲಿ, ಮೋದಿ‌ ಕೊಡುವ ಅಕ್ಕಿ ಬಿಟ್ಟು, ಎಲ್ಲಿದೆ ಅಕ್ಕಿ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ