LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಪ್ರಯಾಣಿಕರು ಹತ್ತು ಗಂಟೆಗಳ ಕಾಲ ವಿಮಾನದಲ್ಲೇ ಲಾಕ್

ದೇವನಹಳ್ಳಿ, ಜುಲೈ.06: ದೆಹಲಿಯಿಂದ ಬೆಂಗಳೂರಿಗೆ ಹಾರಬೇಕಿದ್ದ ಸ್ಪೈಸ್​​​ಜೆಟ್ ಏರ್​​​​​ಲೈನ್ಸ್  ಸಿಬ್ಬಂದಿ ಎಡವಟ್ಟಿನಿಂದಾಗಿ ಪ್ರಯಾಣಿಕರು ಹತ್ತು ಗಂಟೆಗಳ ಕಾಲ ವಿಮಾನದಲ್ಲೇ ಲಾಕ್ ಆಗಿ ಪರದಾಡುವಂತಹ ಪರಿಸ್ಥಿತಿ ನಡೆದಿದೆ.

ನಿನ್ನೆ ಸಂಜೆ ದೆಹಲಿಯಿಂದ ಬೆಂಗಳೂರಿಗೆ ಹೋಗುವ SG 8151ನ ಸ್ಪೈಸ್​​​ಜೆಟ್ ಏರ್​​​​​ಲೈನ್ಸ್ ವಿಮಾನವನ್ನು ಏರಿದ ಸುಮಾರು 60 ಪ್ರಯಾಣಿಕರು ಸತತ 12 ಗಂಟೆಗಳಿಗೂ ಅಧಿಕ ಕಾಲ ವಿಮಾನದೊಳಗೆ ಲಾಕ್ ಆಗಿ ಪರದಾಡಿದ್ದಾರೆ. ತಾಂತ್ರಿಕ ದೋಷ ಎಂದು ನಿನ್ನೆ ಸಂಜೆಯಿಂದ ಬೆಳಗ್ಗೆ ವರೆಗೂ ದೆಹಲಿ ಏರ್ಪೋಟ್​ನಲ್ಲೆ ಫ್ಲೈಟ್ ನಿಲ್ಲಿಸಲಾಗಿದ್ದು ಪ್ರಯಾಣಿಕರನ್ನು ಹೊರಗೆ ಬಿಡದೆ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ.

ಅಲ್ಲದೆ ಪ್ರಯಾಣಿಕರಿಗೆ ಊಟ, ತಿಂಡಿ ವ್ಯವಸ್ಥೆಯೂ ಮಾಡದೆ ಫ್ಲೈಟ್​ನಲ್ಲೇ ಕೂರಿಸಿದ್ದಾರೆ. ಆಚೆಯೂ ಹೋಗಲಾಗದೆ ಒಳಗೂ ಇರಲಾಗದೆ ಪರದಾಡುತ್ತಿರುವ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.

ಸ್ಪೈಸ್​​​ಜೆಟ್ ಏರ್​​​​​ಲೈನ್ಸ್ ವಿಮಾನ ನಿನ್ನೆ ರಾತ್ರಿ 7.40ಕ್ಕೆ ದೆಹಲಿಯ ಟರ್ಮಿನಲ್ 3 ಯಿಂದ ಟೇಕಾಫ್ ಆಗಬೇಕಿತ್ತು. ಆದರೆ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ಟೇಕಾಫ್ ಆಗಿಲ್ಲ. ಬೆಳಗಿನ ಜಾವ 7 ಗಂಟೆಯಾದರೂ ವಿಮಾನ ದೆಹಲಿಯಿಂದ ಹೊರಡಿಲ್ಲ. ಆದಷ್ಟು ಬೇಗ ಟೇಕಾಫ್ ಮಾಡ್ತೀವಿ ಎಂದು ಸಿಬ್ಬಂದಿ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್