LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

13 ಸಾವಿರ ಅಡಿ ಸ್ಕೈಡೈವಿಂಗ್ ಮೂಲಕ ಮೋದಿ ಪರ ಯುವಕರ ಪ್ರಚಾರ!

ಬೆಂಗಳೂರು, ಏಪ್ರಿಲ್​ 08:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರ  ಪರವಾಗಿ ಯುವಕರು ವಿಶಿಷ್ಟವಾಗಿ ಪ್ರಚಾರ ಮಾಡಿದ್ದಾರೆ. ನಾಲ್ವರು ಮೋದಿ ಅಭಿಮಾನಿಗಳು ನಮೋ ಬ್ರಿಗೇಡ್​ 2.O  ಎಂದು ಬರೆದಿರುವ ಬ್ಯಾನರ್​ ಹಿಡಿದುಕೊಂಡು ಸ್ಕೈಡೈವಿಂಗ್ ಮಾಡಿದ್ದಾರೆ.

ವಿಜಯಪುರದ ಉದ್ಯಮಿ ರಾಜಶೇಖರ ಮುತ್ತಿನಪೆಂಡಿಮಠ, ಬೆಂಗಳೂರಿನ ರಾಹುಲ ಡಾಕ್ರೆ, ಅನುಭವ ಅಗರವಾಲ್ ಮತ್ತು ಮಹರಾಷ್ಟ್ರದ ಹಿಮಾಂಶು ಸಾಬಳೆ ನಾಲ್ವರು ಬ್ಯಾಂಕಾಕ್​ನ ಖಾವ್ಯಾವ್ ಡ್ರಾಪ್ ಝೋನ್​ನಿಂದ ಮೋದಿ ಭಾವಚಿತ್ರವಿರು ಬಾವುಟ ಹಿಡಿದುಕೊಂಡು 13,000 ಅಡಿ ಎತ್ತರದಿಂದ ಹಾರಿದ್ದಾರೆ. ರಾಜಶೇಖರ್ ಹಾಗೂ ಅವರ ತಂಡ ಸ್ಕೈಡೈವಿಂಗ್ ಮಾಡಿರುವ ವಿಡಿಯೋ ಸಾಮಾಜಿಕ ಜಲತಾಣಲ್ಲಿ ವೈರಲ್ ಆಗಿದೆ.

ಈ ನಾಲ್ವರು ಯುವಕರು ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ವೇಳೆಯೂ ಸ್ಕೈ ಡೈವಿಂಗ್​ ಮಾಡಿದ್ದರು. ಕೈಯ್ಯಲ್ಲಿ ಜೈ ಶ್ರೀರಾಮ ಎಂದು ಬರೆದಿರುವ ಮತ್ತು ರಾಮ ಮಂದಿರದ ಫೋಟೋ ಇರುವ ಬ್ಯಾನರ್ ಹಿಡಿದು ಸ್ಕೈ ಡೈವಿಂಗ್ ಮೂಲಕ 13 ಸಾವಿರ ಅಡಿಯ ಮೇಲಿನಿಂದ ಜೈ ಶ್ರೀ ರಾಮ್ ಎಂದು ಧುಮುಕಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST