ಮುದ್ದೇಬಿಹಾಳ ,21 : ಮುದ್ದೇಬಿಹಾಳ ಶರಣು ಸಜ್ಜನ ಕೇಲವ ಸ್ನೇಹ ಜೀವಿ ಮಾತ್ರವಲ್ಲದೇ ಸದಾ ಸಾಮಾಜಿಕ ಕಳಕಳಿಯನ್ನು ಹೊಂದಿದ ಹೆಸರಿಗೆ ತಕ್ಕಂತೆ ಸರಳ ಸಜ್ಜನ ವ್ಯಕ್ತಿತ್ವವನ್ನು ಹೊಂದಿದೆ ನಿಜವಾದ ಕ್ರೀಯಾಶಿಲ ಸಮಾಜ ಸೇವಕ ಅವರ ಸಾಧನೆ ಗುರ್ತಿಸಿ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಡಳಿತ ಮಂಡಳಿಯ ನೂತನ ನಿರ್ಧೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡಿರುವುದು ನಿಜಕ್ಕೂಶ್ಲಾಘನಿಯ ಎಂದು ಜಿಲ್ಲಾ ಪಂಚಾಯತ ಉಪಾದ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.
ಪಟ್ಟಣದ ಎಪಿಎಂಸಿ ಬಡಾವಣೆಯಲ್ಲಿರುವ ಕರ್ನಾಟಕ ಕೋ ಆಪ್ ಬ್ಯಾಂಕ ಮಂಗಲಭವನದಲ್ಲಿ ಭಾನುವಾರ ಸಾಯಂಕಾಲ ವರ್ತಕರ ಬಳಗ ಹಾಗೂ ಶರಣು ಸಜ್ಜನ ಸ್ನೇಹಿತರ ಬಳಗದ ನೇತೃತ್ವದ ಹಮ್ಮಿಕೊಂಡಿದ್ದ ಗೌರವ ಸನ್ಮಾನ ಸಮಾರಂಭದಲ್ಲಿ ಬಾಗವಹಿಸಿ ಅವರು ಮಾತನಾಡಿದರು.
ಅತ್ಯಂತ ಕಡಿವೆಅವಧಿಯಲ್ಲಿಯೇ ಅತ್ಯಂತ ಗಣನೀಯ ಸಾಧನೆ ಮಾಡಿದ ಕೀರ್ತಿ ಶರಣು ಸಜ್ಜನ ಅವರಿಗೆ ಸಲ್ಲಿಸುತ್ತದೆ.ತಮ್ಮ ಸ್ವಂತ ಪರಿಶ್ರಮದಿಂದ ಮುದ್ದೇಬಿಹಾಳದಲ್ಲಿಯೇ ಉದ್ಯಮಗಳನ್ನು ಸ್ಥಾಪಿಸಿ ಬೆಳೆಸಿಕೊಂಡಿರುವ ಶರಣು ಸಜ್ಜನ ಅವರು, ಸ್ಥಳೀಯವಾಗಿ ಉದ್ಯೋಗಾವಕಾಶಗಳ ಸೃಷ್ಟಿಯ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಕ್ರೀಡಾ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಿವಿಧ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಾ, ಯುವಕರಿಗೆ
“ಶರಣು ಸಜ್ಜನ ಅವರು ವಿಶಾಲ ಹೃದಯದ ವ್ಯಕ್ತಿತ್ವ ಹೊಂದಿದವರು. ತಮ್ಮ ಪರಿಚಯದವರು ಅಥವಾ ಸಮಾಜದ ಯಾರೇ ಸಮಸ್ಯೆ ಹೇಳಿಕೊಂಡು ಬಂದರೂ ಸಾಧ್ಯವಾದಷ್ಟು ನೆರವು ನೀಡಲು ಮುಂದಾಗುತ್ತಾರೆ. ವ್ಯಾಪಾರದ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಅವರ ವಿಶೇಷತೆಯಲ್ಲೋಂದಾಗಿದೆ. ಸಧ್ಯ ಅವರು ಪ್ರತಿಷ್ಠಿತ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಯ ನೂತನ ನಿರ್ಧೇಶಕರಾಗಿ ಅವರಿರೋಧವಾಗಿ ಆಯ್ಕೆಗೊಂಡಿರುವುದು
“ಮುದ್ದೇಬಿಹಾಳದ ಹೆಸರನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದರು.
ವಿಜಯಪುರ ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಆರ್ ಎಸ್ ಪಾಟೀಲ(ಕೂಚಬಾಳ) ಕ್ರೀಡೆ, ಶಿಕ್ಷಣ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳ ವಿವಿಧ ಕಾರ್ಯಕ್ರಮಗಳಿಗೆ ಶರಣಿ ಸಜ್ಜನ ಅವರು ಸದಾ ಸಹಕಾರ ನೀಡುತ್ತಾ ಬಂದಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ನಿರಂತರ ಪರಿಶ್ರಮ ಅಗತ್ಯ ಎಂಬುದನ್ನು ತಮ್ಮ ಜೀವನದ ಮೂಲಕ ತೋರಿಸಿಕೊಟ್ಟಿದ್ದಾರೆ. ಕಠೀಣ ಪರಿಶ್ರಮದ ಫಲವಾಗಿ ಇಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾಗಿರುವುದು ಅವರ ಸಾಧನೆಯ ಮತ್ತೊಂದು ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸ್ಥಾನಗಳನ್ನು ಅಲಂಕರಿಸಲಿ ಎಂಬುದು ನಮ್ಮೆಲ್ಲರ ಆಶಯ ಎಂದರು.
ನಾನು ಇಷ್ಟೇತ್ತರಕ್ಜೆ ಹೋಗಿ ಉದ್ಯಮಗಳಲ್ಲಿ ಸಾಧನೆ ಮಾಡಲು ನನ್ನ ಜೊತೆಗಿರುವ ಸ್ನೇಹಿತರ ಹಾಗೂ ಪಟ್ಟಣದ ಎಪಿಎಂಸಿ ವರ್ತಕರ ಸಹಕಾರ, ಸ್ಪೂರ್ತಿನೇ ಕಾರಣ ಅವರೆಲ್ಲೆರೂ ನನಗೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದ್ದಾರೆ. ಅದಕ್ಕಾಗಿಯೇ ಈ ಪ್ರತಿಷ್ಠಿತ ವಾಣಿಜ್ಯೋದ್ಯಮ ಸಂಸ್ಥೆ ಯ ನಿರ್ಧೇಶಕರಾಗಲು ಕಾರಣರಿದ್ದಾರೆ. ಇನ್ನುಮುಂದೇಯೂ ನಿಮ್ಮಲ್ಲರ ಸಹಕಾರ ಪ್ರೀತಿ ಆಶಿರ್ವಾದ ಸದಾ ಹೀಗೆ ಇರಲಿ
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಯ ನೂತನ ನಿರ್ಧೇಶಕ ಶರಣು ಸಜ್ಜನ.
ಕಾರ್ಯಕ್ರಮದಲ್ಲಿ ಶರಣು ಸಜ್ಜನ ಅವರನ್ನು ಶಾಲು, ಹಾರ ಹಾಗೂ ಸ್ಮರಣಿಕೆ ನೀಡಿ ಗೌರವಿಸಿ ಅಭಿನಂದಿಸಲಾಯಿತು. ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು, ಸ್ನೇಹಿತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.
ಗಣ್ಯ ಉದ್ಯಮಿಗಳಾದ ವಸಂತ ಇಲ್ಲೂರ, ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ ಬಿ ನಾವದಗಿ, ಗಣ್ಯರಾದ ಸತೀಶ ಓಸ್ವಾಲ, ನಿಂಗಪ್ಪ ಚಟ್ಟೇರ, ಪಂಚ ಗ್ಯಾರಂಟಿ ಯೋಜನೆಯ ತಾಲೂಕಾ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ನ್ಯಾಯವಾದಿ ಎಂ ಎಸ್ ನಾವದಗಿ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಕರ್ನಾಟಕ ಕೋ ಆಪ್ ಬ್ಯಾಂಕಿನ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಭರತ ಭೋಸಲೆ, ವಾಯ್ಎಚ್ ವಿಜಯಕರ, ಸಿ ಎಲ್ ಬಿರಾದಾರ, ಸಂಗನಗೌಡ ಬಿರಾದಾರ(ಜಿಟಿಸಿ) ರಾಯನಗೌಡ ತಾತರಡ್ಡಿ, ಮುತ್ತಣ್ಣ ಕಡಿ, ಗುರಲಿಂಗಪ್ಪಗೌಡ ಪಾಟೀಲ,