LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ಪುರುಷೋತ್ತಮ ಹಂದ್ಯಾಳರ ನಟನೆ ಅನನ್ಯವಾದುದು: ದೇವಣ್ಣ

ಬಳ್ಳಾರಿ:  29:.ಜಿಲ್ಲೆಯು ಕನ್ನಡ ರಂಗ ಭೂಮಿಗೆ ನೀಡಿರುವ ಕೊಡುಗೆ ಅಪಾರ ಅದರಲ್ಲೂ ಕಳೆದ 3 ದಶಕಗಳಿಂದ ಕನ್ನಡ ರಂಗಭೂಮಿ ಕ್ಷೇತ್ರಕ್ಕೆ ಪುರುಷೋತ್ತಮ ಹಂದ್ಯಾಳು ಅವರು ಸಲ್ಲಿಸಿರುವ ಸೇವೆ ಅನನ್ಯವಾದುದು ಎಂದು ಸ್ಪಂದನ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರೂ  ಆಗಿರುವ  ರಕ್ತದಾನಿ ಬಿ.ದೇವಣ್ಣ ಅಭಿಪ್ರಾಯಪಟ್ಟರು.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ  ಪ್ರಸಕ್ತ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಭಾಜನಾರಾಗಿರುವ ಪುರುಷೋತ್ತಮ‌ ಹಂದ್ಯಾಳು ಅವರನ್ನು ಸನ್ಮಾನದ ಮೂಲಕ ಗೌರವಿಸಿ ಮಾತನಾಡುತ್ತಿದ್ದರು.
ಪುರುಷೋತ್ತಮ ಅವರು ಕೇವಲ ರಂಗನಟರಾಗಿ ಅಷ್ಟೇ ಅಲ್ಲದೆ ಉತ್ತಮ ಛಾಯಾಗ್ರಾಹಕರಾಗಿ, ಎಲ್ಕರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವ ವ್ಯಕ್ತಿತ್ವವುಳ್ಳವರು. ಅವರಿಗೆ ಈ ಪ್ರಶಸ್ತಿ ದೊರೆತಿರುವುದು ಜಿಲ್ಲೆಯ ರಂಗಭೂಮಿ ಕ್ಷೇತ್ರದ ಎಲ್ಲರೂ ಸಂತಸ ಪಡುವಂತಾಗಿದೆಂದರು.
ಈ ವೇಳೆ  ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯ ಗೌರವ ಅಧ್ಯಕ್ಷ ಕೆ.ಪೃಥ್ವಿರಾಜ್ ದೊಡ್ಡಮನೆ, ಆಲಾಪ್ ಸಂಗೀತ ಕಲಾ ಟ್ರಸ್ಟ್ ನ ಅಧ್ಯಕ್ಷ ಬಿ.ರಮಣಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎನ್.ವೀರಭದ್ರಗೌಡ, ಕಾರ್ಯಕಾರಿ ಸಮಿಯಿ ಸದಸ್ಯ ಹೆಚ್.ಹುಲುಗಣ್ಣ ಮೊದಲಾದವರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST