ರಾಯಬಾಗ: ನ್ಯಾಯಾಲಯಕ್ಕೆ ಆಗಮಿಸುವ ಕಕ್ಷಿದಾರರು ತಮ್ಮ ವ್ಯಾಜ್ಯಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಿಕೊಂಡು ನೆಮ್ಮದಿಯಿಂದ ಜೀವನ ನಡೆಸಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಹೇಳಿದರು.
ಶನಿವಾರ ಪಟ್ಟಣದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತನಲ್ಲಿ ಮಾತನಾಡಿದ ಅವರು, ಲೋಕ ಅದಾಲತನಲ್ಲಿ ಒಟ್ಟು ಸಿವಿಲ್, ಕ್ರಿಮಿನಲ್ ಸೇರಿದಂತೆ ೭೦೭ ವಿವಿಧ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಗಿದೆ. ಬೇರೆಯಾಗಿದ್ದ ಜೋಡಿಗಳನ್ನು ಒಂದು ಮಾಡಲಾಗಿದೆ ಎಂದರು.
ಒಂದನೇ ಹೆಚ್ಚುವರಿ ನ್ಯಾಯಾಧೀಶೆ ನಿವೇದಿತಾ ಬನ್ನಾಳ, ಎರಡನೇ ಹೆಚ್ಚುವರಿ ನ್ಯಾಯಾಧೀಶ ಸುಖೇಂದ್ರ ಪಿ.ಎಮ್., ವಕೀಲರಾದ ಆರ್.ಟಿ.ನಾಗರಾಳೆ, ವಿನೋದ ಪೂಜೇರಿ, ಪಿ.ಆರ್.ಕಡಟ್ಟಿ, ಲಕ್ಷ್ಮಿ ಹಂಜಿ, ಪಲ್ಲವಿ ದರೂರ, ಕೇಶವ ಬಸ್ತವಾಡೆ, ಶಿವಲಿಂಗ ಬಾಗೇವಾಡಿ, ನಿಂಗಪ್ಪ ಮೀಲಾನಟ್ಟಿ
ಹಾಗೂ ಕಕ್ಷಿದಾರರು ಇದ್ದರು.