LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಅತ್ತೆಗೆ ಚಾಕು ಇರಿದ ಅಳಿಯ

ಬೆಳಗಾವಿ : 

ಹೆಣ್ಣು ಕೊಟ್ಟ ಅತ್ತೆ ದೇವರಿಗೆ ಸಮಾನ ಅಂತಾ ಕರೆಯುತ್ತಾರೆ. ಆದರೆ, ಅದೇ ಹೆಣ್ಣು ಕೊಟ್ಟ ಅತ್ತೆಯ ಹೊಟ್ಟೆಗೆ ಅಳಿಯ ಚಾಕು ಇರಿದ ಘಟನೆ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ. ಅರವಿಂದ ಗವಳಿ ಎಂಬಾತ ಅತ್ತೆಗೆ ಚಾಕು ಇರಿದ ಆರೋಪಿ. ಮಹಾದೇವಿ ಕರಿಗಾರ ಅಳಿಯನಿಂದ ಚಾಕು ಇರಿತಕ್ಕೊಳಗಾದ ಅತ್ತೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷವಷ್ಟೇ ಅರವಿಂದ ಅವರ ಮದುವೆ ಆಗಿತ್ತು. ನಂತರ ಮುದ್ದಾದ ಗಂಡು ಮಗುವಿಗೆ ಅರವಿಂದನ ಪತ್ನಿ ಜನ್ಮ ನೀಡಿದ್ದರು. ಮಗು ಹುಟ್ಟಿದ ದಿನದಿಂದಲೂ ಅರವಿಂದ ಮಗುವನ್ನು ನೋಡುವ ತವಕದಲ್ಲಿದ್ದ. ಪದೇ ಪದೇ ವಿಡಿಯೋ ಕಾಲ್ ಮಾಡಿ ಮಗು ತೋರಿಸುವಂತೆ ಪತ್ನಿಯನ್ನು ಅರವಿಂದ ಪೀಡಿಸುತ್ತಿದ್ದ ಎಂಬುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.

ವಿಡಿಯೋ ಕಾಲ್​ನಲ್ಲಿ ಮೊಬೈಲ್ ಹಿಡಿದು ಕೈ ನೋಯುತ್ತದೆ ಅಂತಾ ಅರವಿಂದ ಪತ್ನಿ ಹೇಳಿದರೂ ಆತ ಕೇಳುತ್ತಿರಲಿಲ್ಲ. ಇದೇ ವಿಚಾರಕ್ಕೆ ಗಂಡ - ಹೆಂಡತಿಯ ಮಧ್ಯೆ ಪ್ರವೇಶಿಸಿದ್ದ ಅತ್ತೆ ಮಹಾದೇವಿ, ಅಳಿಯನಿಗೆ ಬುದ್ಧಿ ಮಾತು ಹೇಳಿದ್ದಾರೆ. ಮಾತಿಗೆ ಮಾತು ಬೆಳೆದು ಕೋಪಿತನಾಗಿದ್ದ ಅಳಿಯ ಅತ್ತೆ ಮಹಾದೇವಿ ಅವರ ಹೊಟ್ಟೆಗೆ ಚಾಕು ಇರಿದಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಗಾಯಗೊಂಡ ಮಹಾದೇವಿ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಅಳಿಯ ಅರವಿಂದನನ್ನು ಈಗಾಗಲೇ ಪೊಲೀಸರು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹಲ್ಲೆಗೊಳಗಾದ ಮಹಾದೇವಿ ಕರಿಗಾರ ಪುತ್ರ ಮಲ್ಲಿಕಾರ್ಜುನ ಕರಿಗಾರ ಮಾಧ್ಯಮಗಳ ಜೊತೆಗೆ ಮಾತನಾಡಿ, ಪದೇ ಪದೇ ವಿಡಿಯೋ ಕಾಲ್ ಮಾಡಿ ನನ್ನ ತಂಗಿಗೆ ಆಕೆಯ ಗಂಡ ಅರವಿಂದ ಪೀಡಿಸುತ್ತಿದ್ದ. ನನಗೆ ಹುಟ್ಟಿದ ಮಗನನ್ನ ನನಗೆ ತೋರಿಸುವುದಿಲ್ಲ ಎನ್ನುತ್ತಿದ್ದ. ಹೀಗೆ ಮೊನ್ನೆ ಮೇ 2ರಂದು ನನಗೆ ಸುಸ್ತಾಗಿದೆ. ಕೈ ಜುಮ್ ಹಿಡಿದಿದೆ. ಆಮೇಲೆ ಮಾಡುತ್ತೇನೆ ಅಂತಾ ಹೇಳಿ ನಮ್ಮ ತಂಗಿ ಕಾಲ್ ಕಟ್ ಮಾಡಿದ್ದಾಳೆ. ಆಗ ಸಿಟ್ಟಿಗೆದ್ದು ವಾಪಸ್ ಕಾಲ್ ಮಾಡಿದ ನಮ್ಮ ಬಾವ, ನನಗೆ ಹುಟ್ಟಿದ ಮಗನನ್ನು ನನಗೆ ತೋರಿಸಲೇಬೇಕು‌‌ ಅಂತಾ ಹೇಳಿ, ನಮ್ಮ ಮನೆಯವರನ್ನು ಎಲ್ಲಾ ಅಸಭ್ಯವಾಗಿ ಬೈದಿದ್ದಾನೆ.

ಆಗ ನಮ್ಮ ತಾಯಿ ಫೋನ್ ತೆಗೆದುಕೊಂಡು, ನಮ್ಮನ್ನು ಯಾಕೆ ಬೈಯ್ಯುತ್ತಿದ್ದಿಯಾ? ಗಂಡ-ಹೆಂಡತಿ ಜಗಳ ನಿಮ್ಮ ಕಡೆ ಇಟ್ಟುಕೊಳ್ಳಿ ಅಂತಾ ಹೇಳಿದ್ದಾರೆ. ನಿಮ್ಮನ್ನು ನಾನು ಬೈಯ್ಯುವವನೇ. ನೀವು ಏನ್ ಮಾಡ್ಕೊತಿರೋ ಮಾಡ್ಕೊಳ್ಳಿ. ನಿಮ್ಮನ್ನು ಅಲ್ಲಿಯೇ ಬಂದು ನೋಡಿಕೊಳ್ಳುತ್ತೇನೆ. ನಿಮ್ಮನ್ನಾರು ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಇದಾದ ಒಂದೂವರೇ ಗಂಟೆ ಬಳಿಕ ನಮ್ಮ ಮನೆಗೆ ಬಂದ ಅರವಿಂದ, ಫೋನಿನಲ್ಲಿ ಬಹಳ ಮಾತಾಡುತ್ತಿದ್ದಿ ಅಂತಾ ಹೇಳುತ್ತಾ, ಏಕಾಏಕಿ ನಮ್ಮ ಅವ್ವನ ಹೊಟ್ಟೆಗೆ ಚುಚ್ಚಿದ್ದಾನೆ. ಆಗ ನಾನು ಸೇರಿ ಹಲವರು ಬಿಡಿಸಿದೆವು‌. ಜಗಳ ಕೇಳಿಸಿಕೊಂಡು ಅಕ್ಕಪಕ್ಕದವರು ಬರುತ್ತಿದ್ದಂತೆ ಅಲ್ಲಿಂದ ಓಡಿಹೋದ. ಬಳಿಕ ನಾವು ನಮ್ಮ ತಾಯಿಯನ್ನು ಯರಗಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದೆವು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸೇರಿಸಿದ್ದೇವೆ. ಮತ್ತೆ ಫೋನ್ ಮಾಡಿದ ನಮ್ಮ ತಂಗಿ ಗಂಡ, ನಿನ್ನ ಮತ್ತು ನಿಮ್ಮ ಮನೆಯ ಯಾರನ್ನೂ ಬಿಡುವುದಿಲ್ಲ. ನಿಮ್ಮೆಲ್ಲರನ್ನೂ ಮುಗಿಸುವೆ ಅಂತಾ ಜೀವ ಬೆದರಿಕೆ ಹಾಕಿದ್ದಾನೆ ಅಂತಾ ಆರೋಪಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್