LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಅಧಿವೇಶನದಲ್ಲಿ ಶಾಸಕರಿಗೆ  ಕಿರು ನಿದ್ರೆಗಾಗಿ ವಿಶೇಷ ಆಸನ ವ್ಯವಸ್ಥೆ!

ಬೆಂಗಳೂರು, ಜುಲೈ 19: ಕರ್ನಾಟಕ ಅಧಿವೇಶನ ನಡೆದ ಸಂದರ್ಭದಲ್ಲಿ, ಮಧ್ಯಾಹ್ನ ಊಟದ ಬಳಿಕ ಶಾಸಕರಿಗೆ  ಕಿರು ನಿದ್ರೆಗಾಗಿ ವಿಶೇಷ ಆಸನ ವ್ಯವಸ್ಥೆ ಮಾಡಲು ವಿಧಾಸಭೆ ಸಭಾಧ್ಯಕ್ಷ ಯುಟಿ ಖಾದರ್​​ ನಿರ್ಧರಿಸಿದ್ದಾರೆ. ಮುಂಗಾರು ಅಧಿವೇಶನ ನಾಲ್ಕನೇ ದಿನವಾದ ಇಂದು (ಜು.19) ಸಭಾಧ್ಯಕ್ಷ ಯುಟಿ ಖಾದರ್​ ಅವರು ಈ ವಿಷಯ ಪ್ರಸ್ತಾಪಿಸಿದರು. “ವಿಧಾಸಭೆ ಸದಸ್ಯರಿಗಾಗಿ ಬೆಳಗ್ಗೆ ಉಪಹಾರ, ಮಧ್ಯಾಹ್ನ ಉತ್ತಮ ಊಟದ ವ್ಯವಸ್ಥೆ ಮಾಡಲಾಗಿದೆ. ಊಟವಾದ ಮೇಲೆ ಕೆಲ ಶಾಸಕರು ಕಿರು ನಿದ್ದೆ ಮಾಡಿ ಬರುತ್ತೇನೆ ಎಂದು ಹೇಳಿ ಹೋದವರು ಮರಳಿ ಬರುವುದಿಲ್ಲ.”

“ಇದನ್ನು ತಪ್ಪಿಸಲು ಶಾಸಕರ ಕಿರು ನಿದ್ರೆಗಾಗಿ ಪ್ರಾಯೋಗಿಕವಾಗಿ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಒಂದು ರಿಕ್ಲೈನರ್ ಕುರ್ಚಿ ಹಾಕಲಾಗಿದೆ. ಶಾಸಕರು ಅದರ ಮೇಲೆ ಕಿರು ನಿದ್ರೆ ಮಾಡಿ ಸದನಕ್ಕೆ ಬರಬಹುದು. ಆ ರಿಕ್ಲೈನರ್​ ಕುರ್ಚಿ ನಿಮಗೆ ಸರಿ ಅನಿಸಿದರೆ ಮುಂದಿನ ಅಧಿವೇಶನದಲ್ಲಿ ಈ ವ್ಯವಸ್ಥೆಯನ್ನು ಅಧಿಕೃತ್ಯವಾಗಿ ಜಾರಿಗೆ ತರುತ್ತೇನೆ” ಎಂದು ಸಭಾಧ್ಯಕ್ಷ ಯುಟಿ ಖಾದರ್​ ಸದಸ್ಯರಿಗೆ ಹೇಳಿದರು.

ಕೆಲ ಶಾಸಕರು ಮಧ್ಯಾಹ್ನ ಊಟದ ಬಳಿಕ ಶಾಸಕರ ಭವನದ ಕೊಠಡಿಗೆ ಹೋಗುತ್ತಿದ್ದರು. ಶಾಸಕರ ಭವನದ ಕೊಠಡಿಗೆ ಹೋಗಿ ನಿದ್ದೆ ಮಾಡಿ, ಶಾಸಕರು ವಾಪಸ್ ಸದನಕ್ಕೆ ಬರುತ್ತಿರಲಿಲ್ಲ. ಇದರಿಂದ ಶಾಸಕರ ಹಾಜರಾತಿ ಕಡಿಮೆ ಇರುತ್ತಿತ್ತು. ಇದನ್ನು ತಪ್ಪಿಸಲು ಸಭಾಧ್ಯಕ್ಷ ಯುಟಿ ಖಾದರ್ ಈ ಪ್ರಯೋಗಕ್ಕೆ ಕೈ ಹಾಕಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್