LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಮಹಾರಾಣಿ ಕ್ರಿಕೆಟ್‌ ಕಪ್ ಪಂದ್ಯಾವಳಿಗೆ ನಿರ್ಣಾಯಕರಾಗಿ ಶ್ರೀಕಾಂತ ಕಾಖಂಡಕಿ ಆಯ್ಕೆ

ಹಸಿರು ಕ್ರಾಂತಿ ವರದಿ ವಿಜಯಪುರ

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಜುಲೈ 23 ರಿಂದ ಆಗಸ್ಟ್‌ 2 ರವರೆಗೆ ನಡೆಯಲಿರುವ ಮಹಿಳೆಯರ ಮಹಾರಾಣಿ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಪಂದ್ಯಾವಳಿಗೆ ದೇವರಹಿಪ್ಪರಗಿ ಶ್ರೀಕಾಂತ ಕಾಖಂಡಕಿ ಆನ್‌ಫೀಲ್ಡ್ ಅಂಪೈರ್‌ ಆಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಉನ್ನತ ಪಂದ್ಯಾವಳಿಯಲ್ಲಿ ಅಂಪೈರ್‌ ಆಗಿ ಆಯ್ಕೆಯಾದವರಲ್ಲಿ ವಿಜಯಪುರ-ಬಾಗಲಕೋಟೆ ಜಿಲ್ಲೆಯ ಪ್ರಥಮ ನಿರ್ಣಾಯಕರಾಗಿ ಆಯ್ಕೆಯಾಗಿದ್ದಾರೆ. 

ರಾಷ್ಟ್ರೀಯ ಟೆನ್ನಿಸಬಾಲ್‌ ಕ್ರಿಕೆಟ್‌ ಚಾಂಪಿಯನಶಿಪ್‌ ಪಂದ್ಯಾವಳಿಗಳಲ್ಲಿ, ಹಿಮಾಚಲ ಪ್ರದೇಶದ ಕುಲ್ಲು, ಉತ್ತರ ಪ್ರದೇಶದ ವಾರಣಾಸಿ, ಬಿಹಾರ, ಗುಜರಾತ, ಚೆನ್ನೈ, ಗೋವಾದಲ್ಲಿ ಈಗಾಗಲೇ ಅಂಪೈರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ವಿಜಯಪುರದ ಖ್ಯಾತ ಕ್ರಿಕೆಟ್‌ ತಜ್ಞ ಡಾ.ಅಶೋಕಕುಮಾರ ಜಾಧವ ಮಾರ್ಗದರ್ಶನದಲ್ಲಿ ಈ ಮಹೋನ್ನತ ಸಾಧನೆಗೈದಿದ್ದಾರೆ. 

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ವಿಜಯಪುರದ ಸಂಯೋಜಕ ಎನ್‌.ಎಂ.ಹುಟಗಿ, ದೇವರಹಿಪ್ಪರಗಿಯ ಮಾಜಿ ಆಟಗಾರ ಶ್ರೀಧರನಾಡಗೌಡ, ರಮೇಶ ಮಸಬಿನಾಳ, ಪ್ರಕಾಶ ಮಲ್ಲಾರಿ, ಕೆಎಸ್‌ಸಿಎ ಸಂಯೋಜಿತ ಕ್ರಿಕೆಟ್‌ ಕ್ಲಬ್‌ಗಳ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳು, ಹಲವಾರು ಕ್ರಿಕೆಟ್‌ ಆಟಗಾರರು ಶ್ರೀಕಾಂತ ಕಾಖಂಡಕಿಯವರಿಗೆ ಹಾರ್ದಿಕವಾಗಿ ಅಭಿನಂದಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್