LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ವಿಷ್ಣು ಮಂಚು ಅಭಿನಯದ ಕಣ್ಣಪ್ಪ ವೀಕ್ಷಿಸಿದ ಸೂಪರ್ ಸ್ಟಾರ್ ರಜನಿಕಾಂತ್



      ಕಳೆದ 30 ವರ್ಷಗಳ ಹಿಂದಿನ ಸ್ಮರಣೀಯ ಕ್ಷಣಗಳು ಮತ್ತು ಚಿತ್ರರಂಗದ ಸಂಭ್ರಮದ ನಡುವೆ, ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರಾದ ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನಟ ಮೋಹನ್ ಬಾಬು ಚೆನ್ನೈನಲ್ಲಿ ಮತ್ತೆ ಒಂದಾದರು.

     ಇದಕ್ಕೆ ಕಾರಣ 'ಪೆದರಾಯುಡು' ಸಿನಿಮಾ. ಈ ಚಿತ್ರ ಜೂನ್ 15, 1995ರಂದು ತೆರೆಕಂಡಿತ್ತು. ಇದೀಗ 30 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಬ್ಬರೂ ಸ್ಟಾರ್ ನಟರು ವಿಷ್ಣು ಮಂಚು‌ ನಟನೆಯ 'ಕಣ್ಣಪ್ಪ' ಸಿನಿಮಾ ವೀಕ್ಷಿಸಿ ಹಳೇ ನೆನಪಿಗೆ ಹೊರಳಿದರು.

      ರವಿ ರಾಜ‌ ಪಿನಿಸೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ 'ಪೆದರಾಯುಡು' ಸಿನಿಮಾ, ಅಂದಿನ ಕಾಲದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಗಟ್ಟಿ ಕಥಾ ಶೈಲಿ, ನೆನಪಲ್ಲಿ ಉಳಿಯುವ ಅಭಿನಯಗಳು ಮತ್ತು ಅದ್ವಿತೀಯ ಮಾಸ್ ಆಕರ್ಷಣೆಯಿಂದ ತೆಲುಗು ಚಿತ್ರರಂಗದಲ್ಲಿ ಈ ಚಿತ್ರ ಶಾಶ್ವತವಾಗಿ ಉಳಿದಿದೆ.

     ಅಂದಹಾಗೆ, ಜೂನ್ 27 ರಂದು ಜಾಗತಿಕ ಮಟ್ಟದಲ್ಲಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಕಣ್ಣಪ್ಪ ಸಿನಿಮಾ ಬಿಡುಗಡೆಗೊಳ್ಳಲಿದೆ. ಈ ಚಿತ್ರದಲ್ಲಿ ಶಿವನ ಭಕ್ತರಾದ ಕಣ್ಣಪ್ಪನ ಕಥೆಯನ್ನು ವಿಶಿಷ್ಟವಾಗಿ ಆವರಿಸಿಕೊಂಡಿದ್ದಾರೆ.

ಚಿತ್ರ ವೀಕ್ಷಿಸಿದ ಬಳಿಕ ರಜನಿಕಾಂತ್ ಕೊಂಚ ಭಾವುಕರಾಗಿದ್ದಾರೆ.

“ಇದು ಅಸಾಧಾರಣ ಚಿತ್ರ. ಭಾವನೆ, ದೃಶ್ಯ ವೈಭವ ಮತ್ತು ಆಧ್ಯಾತ್ಮ ಎಲ್ಲವೂ ಎಕ್ಸ್ಟ್ರಾಡಿನರಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಜನಿಕಾಂತ್ ಬಗ್ಗೆಯೂ ಮಾತನಾಡಿದ ಮೋಹನ್ ಬಾಬು, "ಇವತ್ತು 22 ವರ್ಷಗಳಿಂದ ನಿರೀಕ್ಷಿಸುತ್ತಿದ್ದ ರಜನಿಕಾಂತ್ ಅವರ ಆಲಿಂಗನ ದೊರೆತಿದೆ. ಈಗ ನಾನು ಹೆದರುವುದಿಲ್ಲ. ನಾನು ಅಜೇಯ. ಕಣ್ಣಪ್ಪ ಬರುತ್ತಾನೆ” ಎಂದು ಸಂಭ್ರಮದಿಂದ ಹೇಳಿದರು.

    'ಕಣ್ಣಪ್ಪ' ಚಿತ್ರವನ್ನು  ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ‌ ಮಾಡಿದ್ದಾರೆ. ಪುತ್ರ‌ನ ಚಿತ್ರಕ್ಕೆ ಮೋಹನ್‌ ಬಾಬು ಬಂಡವಾಳ ಹೂಡಿ ನಿರ್ಮಾಪಕರಾಗಿದ್ದಾರೆ. ಬಹುತಾರಾಗಣದ ಈ‌ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ‌ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್