LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಬಿಜೆಪಿ ಚುನಾವಣಾ ಏಜೆಂಟ್ ಗಳಿಂದ ದೇವಾಲಯದಲ್ಲಿ ಆಣೆಪ್ರಮಾಣ

ಚಿಕ್ಕಮಗಳೂರು, 

ಹೈಕೋರ್ಟ್ ಆದೇಶದಂತೆ 2023ರ ಚುನಾವಣೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು‌ ಎಣಿಕೆ ಮಾಡಲಾಗಿದ್ದು, ಈ ವೇಳೆ ಬಿಜೆಪಿಯ ಜೀವರಾಜ್ ಗೆಲುವು ಸಾಧಿಸಿದ್ದಾರೆ. 2023ರ ಸಾರ್ವತ್ರಿಕ ಚುನಾವಣೆ ಫಲಿತಾಂಶದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ 201 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.ಆದ್ರೆ, ಮರು ಮತ ಎಣಿಕೆಯಲ್ಲಿ ಕಾಂಗ್ರೆಸ್​ಗೆ ಸೋಲಾಗಿದ್ದು, ಬಿಜೆಪಿ ಗೆದ್ದು ಬೀಗಿದೆ. ಇದರೊಂದಿಗೆ ಮೂರು ವರ್ಷಗಳ ಬಳಿಕ ಡಿ.ಎನ್.ಜೀವರಾಜ್ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕ್ಷೇತ್ರದಲ್ಲಿ ಆಣೆ-ಪ್ರಮಾಣ ರಾಜಕೀಯ ಶುರುವಾಗಿದೆ. ಹೌದು..2023ರಲ್ಲಿ ಮತ ಏಣಿಕೆ ಕೇಂದ್ರದ ಬಿಜೆಪಿ ಎಜೆಂಟ್ ಅಗಿದ್ದ ಇಬ್ಬರ ಮೇಲೆ ಫಿಕ್ಸ್ ಆರೋಪ ಕೇಳಿಬಂದಿದ್ದು, ಇದೀಗ ಅವರಿಬ್ಬರು ಅಣೆ ಪ್ರಮಾಣ ಮಾಡಿದ್ದಾರೆ.

ಜೀವರಾಜ್ ಗೆಲ್ಲುತ್ತಿದ್ದಂತೆ ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷ ವಿರೋಧಿ ಕೆಲಸ ಮಾಡಿದವರಿಗೆ ಯಾವಾಗ ಗೇಟ್ ಪಾಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದರು. ರಾಮಸ್ವಾಮಿ ಹಾಗೂ ಸತೀಶ್ ಕಾಂಗ್ರೆಸ್ ಜೊತೆ ಕೈ ಸೇರಿಸಿ ಬಿಜೆಪಿ ಸೋಲಿಗೆ ಕಾರಣರಾಗಿದ್ದರು ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ 2023ರಲ್ಲಿ ಬಿಜೆಪಿ ಪಕ್ಷದಿಂದ‌ ಚುನಾವಣಾ ಮತ ಎಣಿಕೆ ಕೇಂದ್ರದ ಏಜೆಂಟ್ ಆಗಿದ್ದ ರಾಮಸ್ವಾಮಿ ಶೆಟ್ಟಿಗದ್ದೆ ಹಾಗೂ ಸತೀಶ್‌ ಅದ್ದಡ ಕೊಪ್ಪ ತಾಲೂಕಿನ ವೀರಭದ್ರಸ್ವಾಮಿ ಹಾಗೂ ಗಬ್ಬಾನೆ ಬೂತರಾಯನ ದೇಗುಲದಲ್ಲಿ ಪ್ರಮಾಣ ಮಾಡಿದ್ದು 2023ರ ಮತ ಎಣಿಕೆ ಸರಳ ಹಾಗೂ ಪಾರದರ್ಶಕವಾಗಿ ನಡೆದಿದೆ ಎಂದು ನಮಗೆ ಅನ್ನಿಸಿದೆ ಎಂದು ದೇವರ ಮುಂದೆ ಸ್ಪಷ್ಟಪಡಿಸಿದ್ದಾರೆ.

ಅಂದು ರಾಮಸ್ವಾಮಿ ಶೆಟ್ಟಿಗದ್ದೆ ಇವಿಎಂ ಕೌಂಟ್ ನೋಡಿಕೊಳ್ಳುತ್ತಿದ್ದರೆ, ಸತೀಶ್ ಅದ್ದಡ ಅಂಚೆ ಮತಗಳ ಎಣಿಕೆ ನೋಡಿಕೊಳ್ಳುತ್ತಿದ್ದರು. ಇಂದು ಇಬ್ಬರು ದೇವಸ್ಥಾನದಲ್ಲಿ ಮತ ಎಣಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಮತ ಎಣಿಕೆ ಪಾರದರ್ಶಕವಾಗಿತ್ತು. ನಮ್ಮ ವಿರುದ್ಧ ಅಪಪ್ರಚಾರ ಮಾಡುವವರಿಗೆ ದೇವರೇ ನೋಡಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

ಏನಂತ ಆಣೆ ಪ್ರಮಾಣ?

ಬಹಳ ಸರಳ ಹಾಗೂ ಪಾರದರ್ಶಕ ವಾಗಿ ನಡೆದಿದೆ ಅನ್ನಿಸಿತು. ಘಟನೆಗಳ ನಂತರ ಮೇ 2ರಂದು ಮತ್ತೆ ಕೌಟಿಂಗ್ ನಡೆಯಿತು. ಆಗ ಶಾಸಕ ಸ್ಥಾನ ಬದಲಾಯಿತು.ಒಂದಷ್ಟು ಜನ ಸೇರಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಅವರ ಬಳಿ ಹಣ ತೆಗೆದುಕೊಂಡು ಅಲ್ಲಿ ಲ್ಯಾಪ್ಸ್ ಅಗಿದ್ದ ಓಟ್ ಗಳನ್ನ ಕಾಂಗ್ರೆಸ್ ಅಭ್ಯರ್ಥಿ ಗೆ ಹಾಕಲು ನಾನು ಸಹ ಭಾಗಿದಾರ ಅನ್ನೋ ರೀತಿ ಎಲ್ಲ ಮಾತನಾಡುತ್ತಿದ್ದಾರೆ. ಅದ್ರೆ ನನಗೆ ವಿಶ್ವಾಸ ಇದೆ ನಂಬಿಕೆ ನಾನು ಪಕ್ಷದಲ್ಲಿ 1993ರಿಂದ ಕೆಲಸ ಮಾಡಿಕೊಂಡು ಬಂದೋನು. ಇದುವರೆಗೆ ಪಕ್ಷ ದ್ರೋಹ, ವಿಶ್ಚಾಸ ದ್ರೋಹ, ಹಣಕ್ಕಾಗಿ ಕೆಲ್ಸ ಎಲ್ಲಿಯೂ ಮಾಡಿಲ್ಲ. ಅವತ್ತು ಸಹ ಸರಿಯಾಗಿಯೇ ಮಾಡಿದ್ದೀನಿ. ಯಾವುದೇ ಮೋಸನೂ ಮಾಡಿಲ್ಲ. ನಡೆದಂತಹ ಕೌಟಿಂಗ್ ಸಹ ಎಲ್ಲವೂ ಸರಿಯಾಗಿತ್ತು.ನನಗೆ ಹೆದರಿಕೆ ಇಲ್ಲ. ನಾನು ಎಲ್ಲಿಯೂ ತಪ್ಪಲಿ ಭಾಗಿಯಾಗಿಲ್ಲ. ಎನೂ ಹೇಳಿದ್ದಾರೆ ಅದನ್ನ ಭೂತರಾಯ ಸ್ವಾಮಿ ಮುಂದೆ ಹೇಳುತ್ತಿದ್ದೇನೆ. ನಾನು ಏನೂ ತಪ್ಪು ಮಾಡಿಲ್ಲ.ನಾನು ಏನಾದರೂ ತಪ್ಪು ಮಾಡಿದ್ರೆ ನಾನು ನಾಶ ಅಗಿ ಹೊಗಬೇಕು. ಸುಖಾಸುಮ್ಮನೆ ನನ್ನ ಚಾರಿತ್ರ್ಯವದೆ ಮಾಡುತ್ತಿರುವವರು ನಾಶ ಅಗಲಿ ಎಂದು ಕೇಳಿಕೊಳ್ಳಲ್ಲ ಭೂತರಾಯ ನೀನು ನೋಡ್ಕ ಅಂತಾ ಕೇಳಿಕೊಳ್ತೇನೆ ಎಂದು ಪ್ರಮಾಣ ಮಾಡಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್