LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಸಾಯಿ ಪಲ್ಲವಿ ಬರ್ತ್​ಡೇಗೆ 'ತಂಡೆಲ್' ಸ್ಪೆಷಲ್​​ ವಿಡಿಯೋ ಅನಾವರಣ

ದಕ್ಷಿಣ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯರಾಗಿರುವ ಸಹಜ ಸುಂದರಿ ಸಾಯಿ ಪಲ್ಲವಿ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 32ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನ್ಯಾಚುರಲ್​​ ಬ್ಯೂಟಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ನಟಿಯ ಮುಂದಿನ ಬಹುನಿರೀಕ್ಷಿತ ಚಿತ್ರವಾದ 'ತಂಡೆಲ್' ತಂಡ ಸ್ಪೆಷಲ್​​ ವಿಡಿಯೋ ಅನಾವರಣ​ಗೊಳಿಸಿ ನಟಿಗೆ ವಿಶೇಷವಾಗಿ ಶುಭ ಕೋರಿದೆ.


ಚಂದು ಮೊಂಡೇಟಿ ನಿರ್ದೇಶನದ ತಂಡೆಲ್​​ ಚಿತ್ರದಲ್ಲಿ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರ ರಾಷ್ಟ್ರೀಯತೆಯಂತಹ ಅಂಶಗಳೊಂದಿಗೆ, ಗ್ರಾಮೀಣ ಹಿನ್ನೆಲೆಯಲ್ಲಿ ನಡೆಯುವ ಪ್ರೇಮಕಥೆಯನ್ನೂ ಹೇಳಲಿದೆ. ನಾಗ ಸಾಯಿ ಪ್ರೇಮ್​ಕಹಾನಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.


ತಂಡೆಲ್​​ ಚಿತ್ರತಂಡ ಶೇರ್ ಮಾಡಿರುವ ಹೃದಯಸ್ಪರ್ಶಿ ವಿಡಿಯೋ, ಬರ್ತ್​ ಡೇ ಗರ್ಲ್​​​​ನ ಹಿಂದಿನ ಪಾತ್ರಗಳನ್ನು, ನಟಿಯಾಗಿ ಅವರ ವೃತ್ತಿಜೀವನ ಪ್ರಯಾಣವನ್ನು ಪ್ರದರ್ಶಿಸಿದೆ. ನಂತರ ನಾಗ ಚೈತನ್ಯ ಜೊತೆಗಿನ ಪ್ರಸ್ತುತ ಚಿತ್ರಕ್ಕೆ ಎಂಟ್ರಿ ಕೊಡುತ್ತದೆ. ತೆರೆಮರೆ ದೃಶ್ಯಾವಳಿಗಳು ಸೆಟ್‌ನಲ್ಲಿನ ಸಾಯಿ ಪಲ್ಲವಿ ಅವರ ನಗು, ಅಳು, ಮೋಜು-ಮಸ್ತಿಯಂತಹ ಕ್ಷಣಗಳನ್ನು ತೋರಿಸುತ್ತದೆ. ವಿಡಿಯೋ ನಟಿಮಣಿಯ ಶೂಟಿಂಗ್​ ವೇಳೆಯ ಫನ್ನಿ ಮಿಸ್ಟೇಕ್ಸ್​​ (bloopers) ಅನ್ನೂ ಸಹ ಒಳಗೊಂಡಿದೆ. ನಟಿ ಅಭಿಮಾನಿಗಳನ್ನು ಅಪ್ಪಿಕೊಳ್ಳುವ ಮತ್ತು ಸೆಟ್‌ನಲ್ಲಿನ ಭಾವನಾತ್ಮಕ ಕ್ಷಣಗಳನ್ನು ಈ ವಿಡಿಯೋ ಒಳಗೊಂಡಿದೆ.


ಸೋಷಿಯಲ್​​ ಮೀಡಿಯಾ ಪ್ಲಾಟ್​ಫಾರ್ಮ್​​ಗಳಲ್ಲಿ ವಿಡಿಯೋ ಹಂಚಿಕೊಂಡ ಚಿತ್ರತಂಡ, ''ಅಭಿನಯ ನಿಮ್ಮದು, ಆಚರಣೆ ನಮ್ಮದು. ನೀವು ನಿರ್ವಹಿಸಿ, ನಾವು ಗೌರವಿಸುತ್ತೇವೆ. ಹ್ಯಾಪಿ ಬರ್ತ್​ ಡೇ 'ಬುಜ್ಜಿ ತಲ್ಲಿ'. ನಿಮ್ಮ ಈ ವಿಶೇಷ ದಿನದಂದು ನಮ್ಮ ತಂಡದ ವಿಶೇಷ ಉಡುಗೊರೆ ಇಲ್ಲಿದೆ'' ಎಂದು ಬರೆದುಕೊಂಡಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್