LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಹೈದರಾಬಾದ್‌ನಲ್ಲಿ 72ನೇ 'ವಿಶ್ವ ಸುಂದರಿ ಸ್ಪರ್ಧೆʼಗೆ ಚಾಲನೆ; 110 ದೇಶಗಳ ಸುಂದರಿಯರು ಭಾಗಿ!

ಹೈದರಾಬಾದ್​(ತೆಲಂಗಾಣ): 72ನೇ 'ವಿಶ್ವ ಸುಂದರಿ ಸ್ಪರ್ಧೆ' 110 ದೇಶಗಳ ಸುಂದರಿಯರ ಭವ್ಯ ಪ್ರವೇಶದೊಂದಿಗೆ ಹೈದರಾಬಾದ್‌ನಲ್ಲಿ ಆರಂಭವಾಗಿದೆ. ಶನಿವಾರ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಜಾಗತಿಕ ಸ್ಪರ್ಧೆಗೆ ಚಾಲನೆ ನೀಡಿದರು.


ಸಂಜೆ ವಾತಾವರಣ ತಂಪಾಗುತ್ತಿದ್ದಂತೆ ಸಾಂಪ್ರದಾಯಿಕ ಉಡುಗೆಯಲ್ಲಿ ದೇವತೆಗಳಂತೆ ಕಂಗೊಳಿಸಿದ 110 ದೇಶದ ಸ್ಪರ್ಧಿಗಳು, ರ‍್ಯಾಂಪ್‌ ವಾಕ್​ ಮೂಲಕ ಮಿಂಚಿದರು. ಚೆಲುವೆಯರ ಸೌಂದರ್ಯದ ಮುಂದೆ ಅಲಂಕಾರಿಕ ವಿದ್ಯುತ್​ ದೀಪಗಳು ಮತ್ತು ಸಂಗೀತವೂ ಮಂಕಾದಂತೆ ಭಾಸವಾಯಿತು.




ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ ಮಿಸ್ ವರ್ಲ್ಡ್ ಸ್ಪರ್ಧೆಯ ಆರಂಭಿಕ ಸಮಾರಂಭಕ್ಕೆ ವೇದಿಕೆಯಾಗಿತ್ತು. ತೆಲುಗು ರಾಜ್ಯಗಳ ಇತಿಹಾಸದಲ್ಲೇ ಈ ಸ್ಪರ್ಧೆ ನಡೆಯುತ್ತಿರುವುದು ಇದೇ ಮೊದಲು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕವಿ ಅಂದೇಶ್ರಿ ವಿರಚಿತ ತೆಲಂಗಾಣದ ರಾಜ್ಯ ಗೀತೆ "ಜಯಜಯಹೇ ತೆಲಂಗಾಣ ಜನನಿ ಜಯಕೇತನಂ" ಅನ್ನು ರಾಮಾಚಾರಿ ಅವರ ವಿದ್ಯಾರ್ಥಿ ಬಳಗದ 50 ಗಾಯಕರು ಸೊಗಸಾಗಿ ಹಾಡಿದರು.


ಭವ್ಯ ಸಮಾರಂಭದಲ್ಲಿ ಸಿಎಂ ರೇವಂತ್​ ರೆಡ್ಡಿ ಅವರೊಂದಿಗೆ ಉದ್ಯಮಿ ಸುಧಾ ರೆಡ್ಡಿ, ತೆಲಂಗಾಣ ಸರ್ಕಾರದ ವಿಶೇಷ ಪ್ರತಿನಿಧಿ ಜಿತೇಂದರ್ ರೆಡ್ಡಿ, ಮಿಸ್ ವರ್ಲ್ಡ್ ಕ್ರಿಸ್ಟಿನಾ, ಸಿಇಒ ಜೂಲಿಯಾ ಮೋರ್ಲಿ, ಸಚಿವ ಜೂಪಲ್ಲಿ ಕೃಷ್ಣ ರಾವ್, ಸಿಎಸ್ ರಾಮಕೃಷ್ಣ ರಾವ್ ಹಾಗು ಡಿಜಿಪಿ ಜಿತೇಂದರ್ ಮಂತಾದವರು ಉಪಸ್ಥಿತರಿದ್ದರು.


ಸುಂದರಿಯರಿಗೆ ಜಾನಪದ ನೃತ್ಯದ ಸ್ವಾಗತ: ತೆಲಂಗಾಣ ರಾಜ್ಯದ ಜಾನಪದ ನೃತ್ಯಗಳೊಂದಿಗೆ ನಾಲ್ಕು ಖಂಡಗಳ ಸ್ಪರ್ಧಿಗಳ ಪರಿಚಯ ವೀಕ್ಷಕರಿಗೆ ಹೊಸ ಅನುಭವ ನೀಡಿತು. ಕೊಮ್ಮುಕೋಯ ಕಲಾವಿದರು ಲ್ಯಾಟಿನ್ ಅಮೆರಿಕನ್ ದೇಶಗಳ ಸ್ಪರ್ಧಿಗಳನ್ನು ಆಹ್ವಾನಿಸಿದರು. ಅರ್ಜೆಂಟೀನಾದ ಸ್ಪರ್ಧಿಗಳು ಮೊದಲು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಬಳಿಕ ಆಫ್ರಿಕನ್ ಖಂಡದ ವಿವಿಧ ದೇಶಗಳ ಸ್ಪರ್ಧಿಗಳನ್ನು ಗೊಂಡ್ ಬುಡಕಟ್ಟಿನ ಗುಸ್ಸಾಡಿ ನೃತ್ಯದೊಂದಿಗೆ ಸ್ವಾಗತಿಸಲಾಯಿತು. ಯುರೋಪಿಯನ್ ದೇಶದ ಸ್ಪರ್ಧಿಗಳನ್ನು ಲಂಬಾಡಿ-ಡಪ್ಪುಲು ಪ್ರದರ್ಶನದೊಂದಿಗೆ ಬರಮಾಡಿಕೊಳ್ಳಲಾಯಿತು. ಇದರ ಮಧ್ಯೆ ಒಗ್ಗುಡೋಲು ಕಲಾವಿದರ ವೇಷಭೂಷಣಗಳು ಮತ್ತು ಪ್ರದರ್ಶನಗಳು ಆಕರ್ಷಕವಾಗಿದ್ದವು. ರಾಷ್ಟ್ರಧ್ವಜ ಹೊತ್ತ ಕಲಾವಿದರು ಅದ್ಭುತ ಪ್ರದರ್ಶನ ನೀಡಿದ್ದು, ಏಷ್ಯಾ ಖಂಡದ ಸ್ಪರ್ಧಿಗಳನ್ನು ಸ್ವಾಗತಿಸಿದರು.















Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್